ಕೊರೊನಾಕ್ಕೆ ಹೆದರಿ 3 ವರ್ಷ ಮನೆಯಲ್ಲಿ ಮಗನೊಂದಿಗೆ ಲಾಕ್ ಆದ ಮಹಿಳೆ!

ಕೊರೊನಾಕ್ಕೆ ಹೆದರಿದ ಮಹಿಳೆಯೊಬ್ಬಳು ತನ್ನ ಹತ್ತು ವರ್ಷದ ಮಗನೊಂದಿಗೆ ಮನೆಯೊಳಗೆ ಮೂರು ವರ್ಷ ಲಾಕ್ ಆಗಿದ್ದ ಘಟನೆಯೊಂದು ಬೆಳಕಿಗೆ ಬಂದಿದೆ.

ಚಂಢಿಗಡ ಫೆಬ್ರವರಿ 22: ಕೋವಿಡ್-19 ಸೋಂಕಿಗೆ ಒಳಗಾಗುವ ಭಯದಿಂದಾಗಿ ಮಹಿಳೆಯೊಬ್ಬಳು ತನ್ನನ್ನು ಮತ್ತು ತನ್ನ ಅಪ್ರಾಪ್ತ ಮಗನನ್ನು ಮೂರು ವರ್ಷಗಳ ಕಾಲ ಮನೆಯಲ್ಲೇ ಬೀಗ ಹಾಕಿ ಇರಿಸಿದ ಘಟನೆ ಗುರುಗ್ರಾಮ್‌ನ ಚಕ್ಕರ್‌ಪುರದಲ್ಲಿ ನಡೆದಿದೆ. ಖಾಸಗಿ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿರುವ ಮಹಿಳೆಯ ಪತಿ ಸುಜನ್ ಮಾಝಿ ಚಕ್ಕರ್‌ಪುರ ಪೊಲೀಸ್ ಪೋಸ್ಟ್‌ನಲ್ಲಿ ನಿಯೋಜಿಸಲಾದ ಪೊಲೀಸರನ್ನು ಸಂಪರ್ಕಿಸಿದಾಗ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಅವರ ಕೋರಿಕೆಯ ಮೇರೆಗೆ ಪೊಲೀಸರು, ಆರೋಗ್ಯ ಅಧಿಕಾರಿಗಳು ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸದಸ್ಯರ ತಂಡ ಮಂಗಳವಾರ ನಿವಾಸಕ್ಕೆ ತಲುಪಿ ಮುಖ್ಯ ಬಾಗಿಲು ಒಡೆದು ಮುನ್‌ಮುನ್ ಮಜ್ಹಿ ಎಂಬ ಮಹಿಳೆ ಮತ್ತು ಅವರ 10 ವರ್ಷದ ಮಗನನ್ನು ರಕ್ಷಿಸಿದ್ದಾರೆ. ಮನೆಯ ಒಳಗಿನ ದೃಶ್ಯವನ್ನು ಕಂಡು ಅಧಿಕಾರಿಗಳು ನಿಜಕ್ಕೂ ಆಶ್ಚರ್ಯಗೊಂಡಿದ್ದಾರೆ. ಮನೆ ಒಳಗಿನ ದೃಶ್ಯದಲ್ಲಿ ಬಟ್ಟೆ, ಕೂದಲು, ಕಸ, ಕೊಳಕು ಮತ್ತು ದಿನಸಿಗಳ ರಾಶಿಯನ್ನು ನೋಡಬಹುದು.

A woman was locked in her house with her 10 years son for 3 years due to fear of Corona!

ಬಾಲಕನ ತಾಯಿ ಮನೆಯಲ್ಲಿಯೇ ಮಗುವಿನ ಮತ್ತು ಅವಳ ಕೂದಲನ್ನು ಕತ್ತರಿಸುತ್ತಿದ್ದರು. ಇದೇ ವೇಳೆ ಮನೆಯಲ್ಲಿ ಗ್ಯಾಸ್ ಸ್ಟೌ ಬದಲು ಇಂಡಕ್ಷನ್ ಮೂಲಕ ಅಡುಗೆ ಮಾಡಲಾಗಿತ್ತು. 3 ವರ್ಷಗಳಿಂದ ಮನೆಯ ಕಸವನ್ನು ಕೂಡ ಹೊರಗೆ ಹಾಕಿರಲಿಲ್ಲ. ಈ ವರ್ಷಗಳಲ್ಲಿ ಯಾರೂ ಮನೆಗೆ ಭೇಟಿ ನೀಡಿರಲಿಲ್ಲ. ಮಗು ಮನೆಯ ಗೋಡೆಗಳ ಮೇಲೆ ಪೇಂಟಿಂಗ್ ಮಾಡುತ್ತಿತ್ತು. ಪೆನ್ಸಿಲ್‌ನಿಂದ ಮಾತ್ರ ಅಧ್ಯಯನ ಮಾಡುತ್ತಿತ್ತು. ಆಘಾತಕಾರಿ ಸಂಗತಿಯೆಂದರೆ, ಮಹಿಳೆಯ ಮಗ ಕಳೆದ ಮೂರು ವರ್ಷಗಳಿಂದ ಸೂರ್ಯನನ್ನು ನೋಡಿರಲಿಲ್ಲ.

ಇಷ್ಟೆಲ್ಲಾ ಆದರೂ ಇಬ್ಬರೂ ಮನೆಯೊಳಗೆ ಇದ್ದಾರೆ ಎನ್ನುವ ಬಗ್ಗೆ ಅಕ್ಕಪಕ್ಕದವರಿಗೆ ಸುಳಿವು ಸಿಕ್ಕಿರಲಿಲ್ಲ. ಕೋವಿಡ್ -19 ಕಾರಣದಿಂದಾಗಿ ಮಹಿಳೆ ಭಯಭೀತರಾಗಿದ್ದರು. ಮನೆಯಿಂದ ಹೊರಗೆ ಕಾಲಿಟ್ಟರೆ ಮಗ ಸಾಯುತ್ತಾನೆ ಎಂದು ಹೆದರಿಸಿದ್ದಳು ಎಂದು ತಿಳಿದು ಬಂದಿದೆ.

ತನ್ನ ಮಗನೊಂದಿಗಿನ ಮೂರು ವರ್ಷಗಳ ಬಂಧನದಲ್ಲಿ, ಮಹಿಳೆ ತನ್ನ ಪತಿಯನ್ನು ಸಹ ಮನೆಯೊಳಗೆ ಬಿಡಲಿಲ್ಲ. ಮೊದಲ ಲಾಕ್‌ಡೌನ್ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಪತಿ 2020 ರಲ್ಲಿ ಕಚೇರಿ ಕೆಲಸಕ್ಕಾಗಿ ಮನೆಯಿಂದ ಹೊರಬಂದಿದ್ದರು. ಅಂದಿನಿಂದ ಪತ್ನಿ ಮನೆಗೆ ಪ್ರವೇಶಿಸಲು ಅನುಮತಿಸಲಿಲ್ಲ.

A woman was locked in her house with her 10 years son for 3 years due to fear of Corona!

ಶ್ರೀ ಮಾಝಿ ತನ್ನ ಕುಟುಂಬದೊಂದಿಗೆ ಸಂಪರ್ಕದಲ್ಲಿರಲು ಏಕೈಕ ಮಾರ್ಗವೆಂದರೆ ವೀಡಿಯೊ ಕರೆ. ಮನೆಯ ಮಾಸಿಕ ಬಾಡಿಗೆ ಕಟ್ಟುವುದು, ವಿದ್ಯುತ್ ಬಿಲ್ ಕಟ್ಟುವುದು, ಮಗನ ಶಾಲಾ ಶುಲ್ಕ ಕಟ್ಟುವುದು, ದಿನಸಿ ಸಾಮಾನು, ತರಕಾರಿ ಕೊಂಡುಕೊಳ್ಳುವುದು, ಪಡಿತರ ಚೀಲಗಳನ್ನು ಮುಖ್ಯ ಬಾಗಿಲಿನ ಹೊರಗೆ ಇಟ್ಟು ಹೋಗುವುದು ಮಾತ್ರ ಪತಿಯ ಕೆಲಸವಾಗಿತ್ತು. ಇದು ನಿಜಕ್ಕೂ ಕೊರೊನಾ ಭೀತಿ ಜನ ಸಾಮಾನ್ಯರಲ್ಲಿ ಎಷ್ಟಿತ್ತು ಎನ್ನುವುದಕ್ಕೆ ಸಾಕ್ಷಿಯಾಗಿದೆ. ಸದ್ಯ ರಕ್ಷಣೆಯ ನಂತರ ತಾಯಿ-ಮಗ ಇಬ್ಬರನ್ನು ಸಿವಿಲ್ ಆಸ್ಪತ್ರೆಗೆ ಸಾಗಿಸಲಾಗಿದೆ. ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+