ಹರ್ಯಾಣ: ಆಟೋದಲ್ಲೇ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ
ಮಣೇಸರ್(ಹರ್ಯಾಣ), ಜೂನ್ 6: ಮಹಿಳೆಯೊಬ್ಬರ ಮೇಲೆ ಆಟೋ ರಿಕ್ಷಾದಲ್ಲೆ ಸಾಮೂಹಿಕ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಹರ್ಯಾಣದ ಮಣೇಸರ್ ಎಂಬಲ್ಲಿ ನಡೆದಿದೆ.
ಪತಿಯೊಂದಿಗೆ ಉಂಟಾದ ವೈಮನಸ್ಯದಿಂದಾಗಿ, ಮಗಳೊಂದಿಗೆ ತವರು ಮನೆಗೆ ಹೊರಟಿದ್ದ ಮಹಿಳೆ ಆಟೋವೊಂದನ್ನು ಹತ್ತಿಕೊಂಡಿದ್ದಾರೆ. ಆದರೆ ಮಾರ್ಗ ಮಧ್ಯೆ ಮಹಿಳೆ ಕೂಗಿಕೊಂಡರೂ ಕೇಳದೆ, ನಿರ್ಜನ ಪ್ರದೇಶಕ್ಕೆ ಆಟೋವನ್ನು ಕೊಂಡೊಯ್ದ ಆಟೋ ಚಾಲಕ, ಅಲ್ಲಿದ್ದ ತನ್ನ ಮೂವರು ಸ್ನೇಹಿತರೊಡನೆ ಸೇರಿ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ, ಆಕೆಯ ಮಗಳನ್ನು ಮಾರ್ಗ ಮಧ್ಯೆಯೇ ರಸ್ತೆಯಲ್ಲಿ ಬಿಸಾಡಿದ್ದಾರೆ. ಇದರಿಂದಾಗಿ ಮಗಳು ಮೃತಪಟ್ಟಿದ್ದಾಳೆ.[ದಾವಣಗೆರೆ: ಪ್ರಿಯಕರನ ಎದುರೇ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ]

ನಾಲ್ವರು ಆರೋಪಿಗಳ ಸೆರೆಗೆ ಹರ್ಯಾಣ ಪೊಲೀಸರು ಬಲೆಬೀಸಿದ್ದಾರೆ. ಆದರೆ ಮಹಿಳೆ ಆಘಾತಕ್ಕೊಳಗಾಗಿದ್ದು, ಆಕೆ ಆಘಾತದಿಂದ ಹೊರಬಂದ ಮೇಲೆ ಹೆಚ್ಚಿನ ಮಾಹಿತಿ ಪಡೆದು, ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರು ಹೇಳಿದ್ದಾರೆ.












Click it and Unblock the Notifications