ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರಿಯಾಣದ ಆಸ್ಪತ್ರೆಯಲ್ಲಿ ಕದ್ದ ಲಸಿಕೆಯನ್ನು ಟೀ ಅಂಗಡಿಯಲ್ಲಿಟ್ಟ ಕಳ್ಳ!

|
Google Oneindia Kannada News

ಚಂಡೀಘರ್, ಏಪ್ರಿಲ್ 23: ಹರ್ಯಾಣದ ಜಿಂದ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ವೇಳೆ 1700 ಡೋಸ್ ಕೊರೊನಾವೈರಸ್ ಲಸಿಕೆಯನ್ನು ಕದ್ದುಕೊಂಡು ಹೋಗಿದ್ದ ಕಳ್ಳರು ಕೆಲವೇ ಗಂಟೆಗಳಲ್ಲಿ ಅದನ್ನು ಮರಳಿ ತಂದು ಇಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಒಟ್ಟು 1270 ಡೋಸ್ ಕೊವಿಶೀಲ್ಡ್ ಲಸಿಕೆ ಹಾಗೂ 440 ಡೋಸ್ ಕೊವ್ಯಾಕ್ಸಿನ್ ಲಸಿಕೆ ಕಳ್ಳತನವಾಗಿತ್ತು ಎಂದು ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಅಧಿಕಾರಿ ರಾಜೇಂದ್ರ ಸಿಂಗ್ ಗುರುವಾರ ಮಾಹಿತಿ ನೀಡಿದ್ದರು. ಗುರುವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ನೈರ್ಮಲ್ಯ ಕಾರ್ಮಿಕರೊಬ್ಬರು ಅಂಗಡಿ ಬಾಗಿಲು ತೆರೆಯಲು ಮುಂದಾದ ಸಂದರ್ಭದಲ್ಲಿ ಬೀಗ ಮುರಿಯಲಾಗಿದ್ದು, ಈ ವಿಷಯ ಬೆಳಕಿಗೆ ಬಂದಿದೆ.

ಹರ್ಯಾಣ ಆಸ್ಪತ್ರೆಯಿಂದ 1710 ಡೋಸ್ ಕೊರೊನಾ ಲಸಿಕೆ ಕಳವುಹರ್ಯಾಣ ಆಸ್ಪತ್ರೆಯಿಂದ 1710 ಡೋಸ್ ಕೊರೊನಾ ಲಸಿಕೆ ಕಳವು

ಸರ್ಕಾರಿ ಆಸ್ಪತ್ರೆಗೆ ನುಗ್ಗಿದ ಆರೋಪಿಗಳು ಆಸ್ಪತ್ರೆಯಲ್ಲಿ ಬೇರೆ ಯಾವುದೇ ಔಷಧಿ ಮತ್ತು ಲಸಿಕೆ ಹಾಗೂ ಹಣವನ್ನು ಮುಟ್ಟಿಲ್ಲ ಎಂದು ತಿಳಿಸಿದ್ದರು. ಇದಾಗಿ ಕೆಲವೇ ಗಂಟೆಗಳಲ್ಲಿ ಬೈಕ್ ನಲ್ಲಿ ಆಗಮಿಸಿದ ಅಪರಿಚಿತ ವ್ಯಕ್ತಿಯೊಬ್ಬ ಸಿವಿಲ್ ಲೈನ್ ಪೊಲೀಸ್ ಠಾಣೆ ಬಳಿ ಟೀ ಅಂಗಡಿ ಎದುರಿನಲ್ಲಿ ಲಸಿಕೆಯ ಬಾಕ್ಸ್ ಅನ್ನು ಇರಿಸಿದ್ದಾರೆ. ಈ ಬಾಕ್ಸ್ ನಲ್ಲಿ ಪೊಲೀಸ್ ಅಧಿಕಾರಿಗಳಿಗೆ ಆಹಾರದ ಬಾಕ್ಸ್ ಇದೆ ಎಂದು ಟೀ ಅಂಗಡಿಯವರಿಗೆ ತಿಳಿಸಿದ್ದಾರೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.

A Thief Returned Corona Vaccines At Tea Stall After Stolen From Govt Hospital Of Haryana

ಲಸಿಕೆ ಕಳ್ಳತನದ ಬಗ್ಗೆ ಆರೋಪಿ ಬೇಸರ:

ಲಸಿಕೆಯನ್ನು ಕಳ್ಳತನ ಮಾಡಿರುವ ಬಗ್ಗೆ ಸ್ವತಃ ಆರೋಪಿಯು ವಿಷಾದ ವ್ಯಕ್ತಪಡಿಸಿದ್ದಾನೆ. ಅಲ್ಲದೇ, ತಾನು ಕದ್ದು ತೆಗೆದುಕೊಂಡು ಹೋಗಿದ್ದು ಕೊರೊನಾವೈರಸ್ ಲಸಿಕೆ ಎಂದು ತಿಳಿದಿರಲಿಲ್ಲ ಎಂದು ಆರೋಪಿ ಬರೆದಿದ್ದಾನೆ.

"ಆರೋಪಿಯು ಬೇರೆ ಯಾವುದೇ ಔಷಧಿ ಮತ್ತು ಇಂಜೆಕ್ಷನ್ ಅನ್ನು ಕಳ್ಳತನ ಮಾಡುವುದಕ್ಕೆ ಹೋಗಿದ್ದಾನೆ. ತದನಂತರದಲ್ಲಿ ಆತ ಕಳುವು ಮಾಡಿರುವ ಲಸಿಕೆ ಕೊವಿಡ್-19 ಸೋಂಕಿಗೆ ಸಂಬಂಧಿಸಿದ್ದು ಎಂದು ಗೊತ್ತಾಗಿದ್ದಕ್ಕೆ ಅದನ್ನು ವಾಪಸ್ ತಂದಿಟ್ಟಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದು, ಲಭ್ಯವಾಗಿರುವ ಕೆಲವು ಸಾಕ್ಷಿಗಳ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

English summary
A Thief Returned Corona Vaccines At Tea Stall After Stolen From Govt Hospital Of Haryana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X