ಕದನವಿರಾಮ ಉಲ್ಲಂಘನೆ: 1 ಸೈನಿಕ ಹುತಾತ್ಮ, 1 ನಾಗರಿಕ ಸಾವು
ಆರ್ ಎಸ್ ಪುರ, ಜನವರಿ 20: ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ,ಇಂದು (ಜ.20) ಬೆಳಿಗ್ಗೆ ಭಾರತೀಯ ಸೈನಿಕರ ಮೇಲೆ ದಾಳಿ ನಡೆಸಿದ ಪರಿಣಾಮ ಜಮ್ಮು-ಕಾಶ್ಮೀರದ ಆರ್ ಎಸ್ ಪುರದಲ್ಲಿ ಓರ್ವ ಸೈನಿಕ ಹುತಾತ್ಮರಾದರೆ, ಇನ್ನೋರ್ವ ನಾಗರಿಕ ಮೃತರಾಗಿದ್ದಾರೆ.
ನಿನ್ನೆ(ಜ.19) ಇದೇ ಸ್ಥಳದಲಲಿ ನಡೆದ ದಾಳಿಯಲ್ಲಿಯೂ ಇಬ್ಬರು ನಾಗರಿಕರು ಮೃತರಾಗಿದ್ದರು. ಜ.18 ರಂಮದು ಓರ್ವ ಸೈನಿಕ ಹುತಾತ್ಮರಾಗಿದ್ದರು. ಕಳೆದ ಹಲವು ದಿನಗಳಿಂದ ಪಾಕಿಸ್ತಾನ ಅಪ್ರಚೋದಿತ ದಾಳಿ ನಡೆಸುತ್ತಿದೆ.

ಭಾರತೀಯ ಸೈನಿಕರೂ ಪ್ರತಿ ದಾಳಿ ನಡೆಸುತ್ತಿದ್ದು, ನಿನ್ನೆ ನಡೆದ ದಾಳಿಯಲ್ಲಿ 11 ಭಾರತೀಯ ಸೈನಿಕರು ಗಾಯಗೊಂಡಿದ್ದರು. ಕಳೆದ ಮೂರು ದಿನಗಳಿಂದ ಕದನ ವಿರಾಮ ಉಲ್ಲಂಘಿಸಿ ಈ ದಾಳಿ ನಿರಂತರವಾಗಿ ನಡೆಯುತ್ತಲೇ ಇದೆ.












Click it and Unblock the Notifications