ಕುಡಿದು ವಾಹನ ಚಾಲಾಯಿಸಿ ನಾಲ್ವರಿಗೆ ಗುದ್ದಿಸಿದ ಪೊಲೀಸ್!
ಜೇಮ್‌ಶೆಡ್‌ಪುರ, ನವೆಂಬರ್ 8: ಪೊಲೀಸ್ ಸಿಬ್ಬಂದಿಯೊಬ್ಬರು ಮದ್ಯ ಕುಡಿದು ವಾಹನ ಚಲಾಯಿಸಿದ್ದಲ್ಲದೆ ರಸ್ತೆಯಲ್ಲಿ ಹೋಗುತ್ತಿದ್ದವರಿಗೆ ಗುದ್ದಿಸಿ ನಾಲ್ವರಿಗೆ ಗಾಯ ಮಾಡಿರುವ ಘಟನೆ ನಡೆದಿದೆ.
ಜಾರ್ಖಂಡ್‌ನ ಜಮ್‌ಶೆಡ್‌ಪುರದಲ್ಲಿ ವೇಗವಾಗಿ ಬಂದ ಪೊಲೀಸ್ ವಾಹನವು ಜನರ ಗುಂಪಿನ ಮೇಲೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ. ಅವರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ನಂತರ, ಗುಂಪು ಪೊಲೀಸ್ ಚಾಲಕನನ್ನು ಹಿಡಿದು ಥಳಿಸಿತು. ಗಾಯಗೊಂಡವರನ್ನು ಅಚಲ್ ಕುಮಾರ್, ಶುಭಂ ಸಿಂಗ್, ಅರವಿಂದ್ ಶರ್ಮಾ ಮತ್ತು ಮನೋಜ್ ಕುಮಾರ್ ರೈ ಎಂದು ಗುರುತಿಸಲಾಗಿದೆ.

ಜಾರ್ಖಂಡ್‌ನ ಉಕ್ಕಿನ ನಗರ ಎಂದು ಕರೆಯಲ್ಪಡುವ ಜೆಮ್‌ಶೆಡ್‌ಪುರದ ಸೀತಾರಾಮದೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಅತಿವೇಗದ ಪೊಲೀಸ್ ಬೊಲೆರೊ ವಾಹನವು ಮೂವರು ದಾರಿ ಹೋಕರಿಗೆ ಡಿಕ್ಕಿ ಹೊಡೆದು 4 ಮಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಸ್ಥಳೀಯರ ಸಹಾಯದಿಂದ ಎಲ್ಲಾ ಗಾಯಾಳುಗಳನ್ನು ಚಿಕಿತ್ಸೆಗಾಗಿ ಜೆಮ್‌ಶೆಡ್‌ಪುರದ ಎಂಜಿಎಂ ಆಸ್ಪತ್ರೆಗೆ ರವಾನಿಸಲಾಗಿದೆ.
ವರದಿಗಳ ಪ್ರಕಾರ, ಚಂದನ್ ವಿಶ್ವಕರ್ಮ ಎಂಬ ಪೊಲೀಸ್ ಪೇದೆ ಸ್ಥಳೀಯ ಬಸ್ ನಿಲ್ದಾಣಕ್ಕೆ ಹೋಗುತ್ತಿದ್ದಾಗ ಒಬ್ಬರ ನಂತರ ಒಬ್ಬರಂತೆ ಜನರಿಗೆ ಡಿಕ್ಕಿ ಹೊಡೆದಿದ್ದಾರೆ. ಪೋಲೀಸ್ ವಾಹನವನ್ನು ಒಳಗೊಂಡಿರುವ ರಂಪಾಟದಿಂದ ಕೋಪಗೊಂಡ ಸ್ಥಳೀಯ ಜನರ ಗುಂಪು ಬೊಲೆರೋವನ್ನು ಸುತ್ತುವರೆದು ಕಾನ್‌ಸ್ಟೆಬಲ್ ಚಂದನ್ ವಿಶ್ವಕರ್ಮ ಅವರನ್ನು ಅಮಾನುಷವಾಗಿ ಥಳಿಸಿತು. ಘಟನೆ ವೇಳೆ ಪೊಲೀಸ್ ಪೇದೆ ಪಾನಮತ್ತನಾಗಿದ್ದ ಎನ್ನಲಾಗಿದೆ.
ನಂತರ ಸೀತಾರಾಮದೇರಾ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಆಕ್ರೋಶಗೊಂಡ ಜನರನ್ನು ಸಮಾಧಾನಪಡಿಸಲು ಯತ್ನಿಸಿದರು. ಪೊಲೀಸ್ ಅಧಿಕಾರಿಗಳು ಕೂಡ ಜನರಿಗೆ ಸೂಕ್ತ ಕ್ರಮದ ಭರವಸೆ ನೀಡಿದರು. ನಂತರ ಪೊಲೀಸರು ಆರೋಪಿ ಕಾನ್ಸ್‌ಟೇಬಲ್‌ನನ್ನು ಕೋಪಗೊಂಡ ಗುಂಪಿನ ಹಿಡಿತದಿಂದ ರಕ್ಷಿಸಿದರು. ಪೊಲೀಸರ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಜನರ ಆಕ್ರೋಶ ಶಮನವಾಯಿತು.
ಜಮ್ಶೆಡ್‌ಪುರದ ಮ್ಯಾಂಗೋ ಬಸ್ ನಿಲ್ದಾಣದಲ್ಲಿ ಪಾನಮತ್ತ ಕಾನ್‌ಸ್ಟೆಬಲ್ ಸಹಚರನನ್ನು ಬಿಡಲು ಬಂದಿದ್ದ ಎನ್ನಲಾಗಿದೆ. ಈ ವೇಳೆ ವಾಪಸ್ ಬರುವಾಗ ಭುಯಾಂಡಿ ಚೌಕ್ ಬಳಿ ಮದ್ಯ ಸೇವಿಸಿದ್ದಾರೆ. ಕಾನ್‌ಸ್ಟೆಬಲ್ ಮೊದಲು ಬುಲೆಟ್ ಸವಾರನಿಗೆ ಡಿಕ್ಕಿ ಹೊಡೆದು, ನಂತರ ಪರಾರಿಯಾಗುವ ಯತ್ನದಲ್ಲಿ ಪಲ್ಸರ್ ಮತ್ತು ಸ್ಪ್ಲೆಂಡರ್ ರೈಡರ್‌ಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಮೂರು ದ್ವಿಚಕ್ರ ವಾಹನಗಳು ಸಿಕ್ಕಿಬಿದ್ದ ನಂತರ ಪೊಲೀಸ್ ವಾಹನವು ರಸ್ತೆಯ ಪಕ್ಕದ ಚರಂಡಿಯಲ್ಲಿ ಸಿಲುಕಿಕೊಂಡಿತು. ಘಟನೆಯಲ್ಲಿ ಒಟ್ಟು ನಾಲ್ವರು ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳನ್ನು ಚಿಕಿತ್ಸೆಗಾಗಿ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ.












Click it and Unblock the Notifications