ದಾಂತೇವಾಡ: ಪೊಲೀಸರಿಗೆ ಶರಣಾದ ಮಾವೋವಾದಿ ದಂಪತಿ
ದಾಂತೇವಾಡ (ಛತ್ತೀಸ್ ಗಢ), ಜೂನ್ 28: ಛತ್ತೀಸ್ ಗಢದ ದಂತೇವಾಡದಲ್ಲಿ ಇಂದು (ಜೂನ್ 28) ನಡೆದ ಮಹತ್ವದ ಬೆಳವಣಿಗೆಯಲ್ಲಿ ಮಾವೋವಾದಿ ದಂಪತಿ ಮತ್ತು ಓರ್ವ ನಕ್ಸಲ್ ಪೊಲೀಸರಿಗೆ ಶರಣಾಗಿದ್ದಾರೆ.
ಈ ಮೂವರನ್ನು ಜೀವಂತ ಅಥವಾ ನಿರ್ಜೀವವಾಗಿ ಹಿಡಿದುಕೊಟ್ಟವರಿಗೆ 5 ಲಕ್ಷ ರೂ. ಬಹುಮಾನವನ್ನು ಇಲ್ಲಿನ ಕೌಕೊಂಡ ಠಾಣೆಯ ಪೊಲೀಸರು ಘೋಷಿಸಿದ್ದರು. ಆದರೆ ಇದೀಗ ಅವರು ತಾವಾಗಿಯೇ ಬಂದು ಪೊಲೀಸರಿಗೆ ಶರಣಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಕಳೆದ ವಾರವಷ್ಟೇ ಕೌಕೊಂಡ ಪ್ರದೇಶದಲ್ಲಿ ಸಿಆರ್ ಪಿಎಫ್ ಯೋಧರು ನಡೆಸಿದ ಕಾರ್ಯಾಚರಣೆಯಲ್ಲಿ ಏಳು ನಕ್ಸಲರನ್ನು ಬಂಧಿಸಲಾಗಿತ್ತು. ಈ ಘಟನೆಯ ನಂತರ ಮೂವರು ಪ್ರಮುಖ ಮಾವೋವಾದಿ ಮತ್ತು ನಕ್ಸಲರು ಶರಣಾಗಿರುವುದು ಅಚ್ಚರಿಯ ಬೆಳವಣಿಗೆ ಎನ್ನಿಸಿದೆ.












Click it and Unblock the Notifications