ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವ್ಯಕ್ತಿಯೊರ್ವನ ಮೇಲೆ 59 ಮಹಿಳೆಯರಿಂದ ಹಲ್ಲೆ, ಏಕೆ ಗೊತ್ತಾ?

|
Google Oneindia Kannada News

ತಿರುವನಂತಪುರಂ, ಜನವರಿ 7: ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ 59 ಮಹಿಳೆಯರ ಗುಂಪೊದು ವ್ಯಕ್ತಿಯೊಬ್ಬನ ಮೇಲೆ ಮಹಿಳೆಯೊಬ್ಬರ ಮಾರ್ಫ್ ಮಾಡಿದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಟ್ಟಿದ್ದಾನೆ ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾರೆ.

ಈ ಸಂಬಂಧ ಪ್ರಕರಣ ಎಲ್ಲಾ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, 11 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಿತ್ರದುರ್ಗ: ಮರಳಿ ಗೂಡು ಸೇರಿದ ಶಬರಿ ಮಲೆಯಲ್ಲಿ ಬಿಟ್ಟ ಪಾರಿವಾಳಚಿತ್ರದುರ್ಗ: ಮರಳಿ ಗೂಡು ಸೇರಿದ ಶಬರಿ ಮಲೆಯಲ್ಲಿ ಬಿಟ್ಟ ಪಾರಿವಾಳ

ಗುರುವಾರ ಸಂಜೆ ಕಾರಿನಲ್ಲಿ ಇತರ ಐವರೊಂದಿಗೆ ಶಾಜಿ ಎಂಬಾತನು ಪ್ರಯಾಣಿಸುತ್ತಿದ್ದಾಗ ಆರೋಪಿಗಳು, ಇಲ್ಲಿನ ಆಧ್ಯಾತ್ಮಿಕ ವಿಶ್ರಾಂತಿ ಕೇಂದ್ರದ ಎಲ್ಲಾ ಭಕ್ತರು ಶಾಜಿ ಮೇಲೆ ಹಲ್ಲೆ ನಡೆಸಿದ್ದಾರೆ. ಅದರಲ್ಲಿ ಓರ್ವ ಮಹಿಳೆ ವ್ಯಕ್ತಿಯನ್ನು ಎಳೆದೊಯ್ದು ಮನಬಂದಂತೆ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

A man was beaten up by 59 women in Kerala, do you know why?

ಕೆಲವು ಮಹಿಳೆಯರು ಆತನ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ತ್ರಿಶೂರ್‌ ಸಮೀಪದ ಮುರಿಯಾಡ್ ಮೂಲದ ಶಾಜಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವ್ಯಕ್ತಿ ಮತ್ತು ಅವರ ಕುಟುಂಬ ಇತ್ತೀಚೆಗೆ ಆಧ್ಯಾತ್ಮಿಕ ವಿಶ್ರಾಂತಿ ಕೇಂದ್ರದೊಂದಿಗಿನ ಅವರ ಸಂಬಂಧವನ್ನು ಅಂತ್ಯಗೊಳಿಸಿದೆ ಎಂದು ಅವರು ಹೇಳಿದರು.

ಆಧ್ಯಾತ್ಮಿಕ ಕೇಂದ್ರದ ಕ್ಯಾಂಪಸ್‌ನ ಹೊರಗೆ ಘಟನೆ ನಡೆದಾಗ ಅವರ ಜೊತೆಗೆ ಅವರ ಕುಟುಂಬದ ಇತರ ಐವರು ಸಹ ಕಾರಿನಲ್ಲಿ ಇದ್ದರು. ದಾಳಿಯಲ್ಲಿ ಅವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ವಾಹನದ ಗಾಜು ಜಖಂಗೊಂಡಿದೆ. ಶಾಜಿಯ ದೂರಿನ ಪ್ರಕಾರ, ಈ ಆಧ್ಯಾತ್ಮಿಕ ಕೇಂದ್ರಕ್ಕೆ ಸಂಬಂಧಿಸಿದ ಮಹಿಳೆಯ ಮಾರ್ಫ್ ಮಾಡಿದ ಚಿತ್ರಗಳನ್ನು ಅವನು ಹರಿಯ ಬಿಟ್ಟಿದ್ದಾನೆ ಎಂಬ ತಪ್ಪು ತಿಳುವಳಿಕೆಯಿಂದ ಮಹಿಳೆಯರು ಅವನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಪಿಟಿಐಗೆ ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ 307, 143, 147, 144, 128 ಸೇರಿದಂತೆ ಐಪಿಎಸ್‌ನ ವಿವಿಧ ಸೆಕ್ಷನ್‌ಗಳು ದಾಖಲಾಗಿವೆ. ಈಗಾಗಲೇ 11 ಆರೋಪಿ ಮಹಿಳೆಯರನ್ನು ರಿಮಾಂಡ್‌ಗೆ ಒಳಪಡಿಸಲಾಗಿದ್ದು, ವಿಯ್ಯೂರಿನ ಮಹಿಳಾ ಕಾರಾಗೃಹಕ್ಕೆ ಕಳುಹಿಸಲಾಗಿದೆ. ತನಿಖೆಗಳು ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ.

English summary
A group of 59 women attacked a man in Kerala's Thrissur district accusing him of circulating morphed photos of a woman on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X