• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಲಿಲ್ಲ, ಈಗ ನೇಮಿಸಿ ಎಂದ ವ್ಯಕ್ತಿ!

|
Google Oneindia Kannada News

ನವದೆಹಲಿ, ಅ. 21: ಭಾರತದ ರಾಷ್ಟ್ರಪತಿಯಾಗಿ ನೇಮಕ ಮಾಡುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.

ಭವಿಷ್ಯದಲ್ಲಿ ಈ ವಿಷಯದ ಕುರಿತು ಅವರ ಮುಂದಿನ ಅರ್ಜಿಯನ್ನು ಪರಿಗಣಿಸದಂತೆ ತಿಳಿಸಿದೆ. ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರ ಪೀಠವು ಅರ್ಜಿಯನ್ನು ಕ್ಷುಲ್ಲಕ ಎಂದು ಕರೆದಿದ್ದು, ನ್ಯಾಯಾಲಯದ ಪ್ರಕ್ರಿಯೆಯ ದುರುಪಯೋಗ ಎಂದು ಟೀಕಿಸಿದೆ.

ಪೋಕ್ಸೊ ಜಾತ್ಯತೀತ ಕಾನೂನು, ಎಲ್ಲರಿಗೂ ಅನ್ವಯ; ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಪೋಕ್ಸೊ ಜಾತ್ಯತೀತ ಕಾನೂನು, ಎಲ್ಲರಿಗೂ ಅನ್ವಯ; ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ಕಿಶೋರ್ ಜಗನ್ನಾಥ್ ಸಾವಂತ್ ಅವರು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ, ಮುಂದಿನ ದಿನಗಳಲ್ಲಿ ಇದೇ ರೀತಿಯ ಸಮಸ್ಯೆಗಳ ಕುರಿತು ಅವರ ಮುಂದಿನ ಅರ್ಜಿಯನ್ನು ಪರಿಗಣಿಸದಂತೆ ರಿಜಿಸ್ಟ್ರೀಗೆ ನಿರ್ದೇಶಿಸಿದೆ.

ಕಳೆದ 20 ವರ್ಷಗಳಿಂದ ಪರಿಸರವಾದಿ ಎಂದು ಹೇಳಿಕೊಳ್ಳುವ ಕಿಶೋರ್ ಜಗನ್ನಾಥ್ ಸಾವಂತ್ ಅವರು ಸಲ್ಲಿಸಿದ ಮನವಿಯಲ್ಲಿ, ಇತ್ತೀಚಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿದ್ದಾರೆ.

ಜಗನ್ನಾಥ್ ಸಾವಂತ್ ಅವರು ಸರ್ವೋಚ್ಛ ನ್ಯಾಯಾಲಯದ ಮುಂದೆ ಹಾಜರಾಗಿ "ಸರ್ಕಾರದ ನೀತಿಗಳನ್ನು ಪ್ರತಿಭಟಿಸುವ ಎಲ್ಲಾ ಹಕ್ಕು" ಹೊಂದಿರುವುದಾಗಿ ತಿಳಿಸಿದ್ದಾರೆ. ಜೊತೆಗೆ ಪರಿಸರವಾದಿಯಾಗಿರುವ ಅವರು, ಪ್ರಪಂಚದ ಎಲ್ಲಾ "ಗೊಂದಲಮಯ ಸನ್ನಿವೇಶಗಳಿಗೆ" ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದಾರೆ.

ಜಗನ್ನಾಥ್ ಸಾವಂತ್ ಸಲ್ಲಿಸಿದ್ದ ಅರ್ಜಿಯಲ್ಲಿ 2022 ರ ಅಧ್ಯಕ್ಷೀಯ ಚುನಾವಣೆಗೆ ಅವಿರೋಧ ಅಭ್ಯರ್ಥಿಯಾಗಿ ಪರಿಗಣಿಸಲು ನಿರ್ದೇಶನ ನೀಡುವುದು, ಭಾರತದ ರಾಷ್ಟ್ರಪತಿಯಾಗಿ ಅವರ ನೇಮಕಕ್ಕೆ ನಿರ್ದೇಶನ ಮತ್ತು 2004 ರಿಂದ ಹಿಂದಿನ ರಾಷ್ಟ್ರಪತಿಗಳಿಗೆ ಪಾವತಿಸಿದ ವೇತನವನ್ನು ಪಾವತಿಸಲು ನಿರ್ದೇಶನ ನೀಡುವ ಮೂರು ಅಂಶಗಳನ್ನು ಒಳಗೊಂಡಿತ್ತು.

A Man Asked SC To Be Appoint Him As The President of India

ಇದಕ್ಕೆ ಸುಪ್ರೀಂ ಕೋರ್ಟ್ ಅರ್ಜಿಯ ಬಗ್ಗೆ ಅಸಮಾಧಾನ ಹೊರಹಾಕಿದ್ದು, "ಭಾರತದ ರಾಷ್ಟ್ರಪತಿಗಳ ವಿರುದ್ಧ ನೀವು ಯಾವ ರೀತಿಯ ಹೀನಾಯ ಆರೋಪಗಳನ್ನು ಎತ್ತಿದ್ದೀರಿ?" ಎಂದು ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ಚಂದ್ರಚೂಡ್ ಟೀಕಿಸಿದ್ದಾರೆ.

ಅರ್ಜಿದಾರ ಜಗನ್ನಾಥ್ ಸಾವಂತ್ ಪರಿಸರವಾದಿ ಆಗಿರುವುದರಿಂದ ಅವರ ವಿಶೇಷ ಜ್ಞಾನದ ಆಧಾರದ ಮೇಲೆ ಭಾಷಣ ಮಾಡಬಹುದು. ಆದರೆ ಆ ರೀತಿಯಲ್ಲಿ ಅರ್ಜಿಗಳನ್ನು ಸಲ್ಲಿಸುವುದು ಮಾರ್ಗವಲ್ಲ ಎಂದು ವಿಚಾರಣೆ ವೇಳೆಯಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ.

English summary
Supreme Court rejected a man's plea seeking to be appointed as the President of India. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X