ಪುಟಾಣಿ ಆರಾಧ್ಯ ಕರೆಗೆ ಸ್ಪಂದಿಸುತ್ತಾರಾ ಪ್ರಧಾನಿ ಮೋದಿ?

Posted By:
Subscribe to Oneindia Kannada

ಒಬ್ಬ ಸಾಮಾನ್ಯ ಮನುಷ್ಯನೂ ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ಪ್ರಧಾನಿಯವರೊಂದಿಗೆ ಸಂವಹನ ನಡೆಸಬಲ್ಲಷ್ಟು ಸಲಿಗೆ ಭಾರತೀಯರಿಗೆ ಸಿಕ್ಕಿದ್ದು ನಿಜಕ್ಕೂ ಸೌಭಾಗ್ಯವೇ.

ಜನರು ಸಾಮಾಜಿಕ ಜಾಲತಾಣಗಳ ಮೂಲಕ ಸ್ವತಃ ಪ್ರಧಾನಿಯವರೊಂದಿಗೆ ನೇರವಾಗಿ ತಮ್ಮ ಸಮಸ್ಯೆಗಳನ್ನ, ಸಲಹೆಗಳನ್ನ ವ್ಯಕ್ತಪಡಿಸಿ, ಅದಕ್ಕೆ ಪರಿಹಾರವನ್ನೂ ಕಂಡುಕೊಂಡ ಹಲವು ಉದಾಹರಣೆಗಳನ್ನು ನಾವು ಕಂಡಿದ್ದೇವೆ. ಇದೀಗ ಪುಣೆಯ ಆರಾಧ್ಯ ಎಂಬ ನಾಲ್ಕು ವರ್ಷದ ಪುಟ್ಟ ಬಾಲಕಿಯ ಅಸಹಾಯಕ ಪಾಲಕರು ಪ್ರಧಾನಿಗೆ ಬರೆದ ಪತ್ರಕ್ಕೂ ಮೋದಿಯವರು ಅಷ್ಟೇ ಧನಾತ್ಮಕವಾಗಿ ಪ್ರತಿಕ್ರಿಯಿಸುತ್ತಾರಾ? ಅಷ್ಟಕ್ಕೂ ಈ ಆರಾಧ್ಯ ಯಾರು? ಆಕೆಯ ಪಾಲಕರು ಬರೆದ ಪತ್ರದಲ್ಲೇನಿದೆ..?'[ಬೆಂಗಳೂರು ಸುರಕ್ಷಿತವೇ? ನರೇಂದ್ರ ಮೋದಿಗೆ ಪ್ರೇರಣಾ ಶರ್ಮಾ ಪತ್ರ]

A letter to prime minister of India from a helpless parents

ಮಹಾರಾಷ್ಟ್ರದ ಪುಣೆಯ ಆರಾಧ್ಯ ಎಂಬ ನಾಲ್ಕು ವರ್ಷದ ಪುಟಾಣಿಗೆ ತೊದಲು ನುಡಿವ ವಯಸ್ಸಿನಲ್ಲೇ ಹೃದ್ರೋಗದ ಶಾಪ! ಆ ಪುಟ್ಟ ಮಗುವಿನ ಪುಟ್ಟ ಹೃದಯದೊಳಗೆ ಯಮನಂತೆಯೇ ಕುಳಿತ ರಂಧ್ರಗಳು! ಬಡ ಅಸಹಾಯಕ ತಂದೆ-ತಾಯಿಗೆ ದುಬಾರಿ ಚಿಕಿತ್ಸೆ ನೀಡುವಷ್ಟು ಶಕ್ತಿಯಿಲ್ಲ. ಭವಿಷ್ಯದ ಕನಿಷ್ಠ 50 ವರ್ಷವನ್ನಾದರೂ ಮಗು ಕಾಣಬೇಕಾದರೆ ಮಗುವಿಗೆ ತ್ವರಿತವಾಗಿ ಶಸ್ತ್ರಚಿಕಿತ್ಸೆ ಆಗಲೇಬೇಕು. ಚಿಕಿತ್ಸೆಗೆ ತಗುವ ಲಕ್ಷಾಂತರ ರೂಪಾಯಿಯನ್ನು ಹೊಂದಿಸೋದು ಹೇಗೆ?[ಕುಡಿಯುವ ನೀರಿಗೆ ಪ್ರಧಾನಿಗೆ ಪತ್ರ ಬರೆದ ಬೆಂಗಳೂರಿಗ]

ಅಸಹಾಯಕತೆಯಲ್ಲಿ ದಿಕ್ಕು ತೋಚದೆ ಕೂತಿದ್ದ ದಂಪತಿಗೆ ಇದ್ದಕ್ಕಿದ್ದಂತೆ ನೆನಪಾಗಿದ್ದು ಪುಣೆಯವಳೇ ಆದ ವೈಶಾಲಿ ಎಂಬ ಆರು ವರ್ಷದ ಬಾಲಕಿ. ಇಂಥದೇ ಸಮಸ್ಯೆ ಎದುರಿಸುತ್ತಿದ್ದ ಆರು ವರ್ಷದ ವೈಶಾಲಿಯ ಪಾಲಕರು ಕಳೆದ ವರ್ಷ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದರು. ಮಗುವಿನ ಸ್ಥಿತಿ ಮತ್ತು ತಮ್ಮ ಅಸಹಾಯಕತೆಯನ್ನು ಪತ್ರದಲ್ಲಿ ವ್ಯಕ್ತಪಡಿಸಿದ್ದರು. ಒಂದು ಕ್ಷಣವೂ ತಡಮಾಡದ ಮೋದಿ, ಆ ಪತ್ರ ಸಿಕ್ಕುತ್ತಿದ್ದಂತೆಯೇ ಸಂಬಂಧ ಪಟ್ಟ ಜಿಲ್ಲಾಡಳಿತಕ್ಕೆ ಮಗುವಿನ ಚಿಕಿತ್ಸೆಯ ಹೊಣೆ ಹೊತ್ತುಕೊಳ್ಳುವಂತೆ ಹೇಳಿದ್ದರು. ಒಂದು ರೂಪಾಯಿ ಖರ್ಚಿಲ್ಲದೆ ಮಗುವಿನ ಶಸ್ತ್ರಚಿಕಿತ್ಸೆಯೂ ಆಗಿ, ಸದ್ಯಕ್ಕೆ ವೈಶಾಲಿ ಎಲ್ಲ ಮಕ್ಕಳಂತೆ ಆಡುತ್ತ, ಕುಣಿಯುತ್ತ ಆರಾಮಾಗಿದ್ದಾಳೆ. ಇದನ್ನು ತಿಳಿದ ಆರಾಧ್ಯ ಪಾಲಕರು ವೈಶಾಲಿಯ ಪಾಲಕರನ್ನು ಭೇಟಿ ಮಾಡಿದರು. ಅವರು ಪ್ರಧಾನಿ ಕಚೇರಿಗೆ ಒಂದು ಪತ್ರ ಬರೆಯಿರಿ, ನಿಮ್ಮ ಸಮಸ್ಯೆಗೆ ಖಂಡಿತ ಪರಿಹಾರ ಸಿಕ್ಕುತ್ತೆ ಎಂದರು.

ಇದೀಗ ಆರಾಧ್ಯ ಪಾಲಕರೂ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವೂ ಮೋದಿಯವರಿಗೆ ಬರೆದ ಪತ್ರದ ಹಿಂದಿದೆ ಎಂದು ಆರಾಧ್ಯ ಸಂಬಂಧಿಯೊಬ್ಬರು ಹೇಳಿದ್ದಾರೆ. ಈ ಪತ್ರಕ್ಕೂ ಪ್ರಧಾನಿ ಮೋದಿ ಅಷ್ಟೇ ಧನಾತ್ಮಕವಾಗಿ ಸ್ಪಂದಿಸುತ್ತಾರಾ? ಆ ಪುಟ್ಟ ಮಗುವಿನ ಬದುಕಲ್ಲಿ ನಗುವಿನ ಹೂವು ಅರಳುತ್ತಾ..? ಕಾದುನೋಡಬೇಕು. (ಎ ಎನ್ ಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Parents of a small child in Pune who is suffering from heart disease wrote a letter to PM Narendra Modi to help the child.
Please Wait while comments are loading...