ಮುಖ್ಯ ಚುನಾವಣಾ ಆಯುಕ್ತರಾಗಿ ಗುಜರಾತ್ ಮೂಲದ ಎಕೆ ಜ್ಯೋತಿ ನೇಮಕ
ನವದೆಹಲಿ, ಜುಲೈ: ಮುಂದಿನ ಮುಖ್ಯ ಚುನಾವಣಾ ಆಯುಕ್ತರಾಗಿ ಗುಜರಾತ್ ಮೂಲದ ಐಎಎಸ್ ಅಧಿಕಾರಿ ಅಚಲ್ ಕುಮಾರ್ ಜ್ಯೋತಿ ನೇಮಕವಾಗಿದ್ದಾರೆ. ಗುರುವಾರ ಅಂದರೆ ಜುಲೈ 6ರಂದು ಅವರು ಅಧಿಕಾರ ಸ್ವೀಕರಿಸಲಿದ್ದಾರೆ.
ಹಾಲಿ ಮುಖ್ಯ ಚುನಾವಣಾ ಆಯುಕ್ತ ನಸೀಮ್ ಝೈದಿ ಅವಧಿ ಮುಗಿಯಲಿರುವ ಹಿನ್ನಲೆಯಲ್ಲಿ ಅವರ ಸ್ಥಾನಕ್ಕೆ ಹಾಲಿ ಚುನಾವಣಾ ಆಯುಕ್ತರಾಗಿರುವ ಎಕೆ ಜ್ಯೋತಿಯವರನ್ನು ನೇಮಿಸಲಾಗಿದೆ. ಜ್ಯೋತಿ ಚುನಾವಣಾ ಆಯೋಗದ 21ನೇ ಮುಖ್ಯಚುನಾವಣಾ ಆಯುಕ್ತರಾಗಿ ಅಧಿಕಾರಕ್ಕೇರಲಿದ್ದಾರೆ.

1953ರ ಜನವರಿ 23ರಂದು ಹಟ್ಟಿದ ಎಕೆ ಜ್ಯೋತಿ ಗುಜರಾತ್ ಕೇಡರ್ ನ್ ಐಎಎಸ್ ಅಧಿಕಾರಿಯಾಗಿದ್ದಾರೆ. ಗುಜರಾತ್ ಸರಕಾರದ ಮುಖ್ಯ ಕಾರ್ಯದರ್ಶಿ, ಕಾಂಡ್ಲಾ ಬಂದರು ಟ್ರಸ್ಟ್ ಅಧ್ಯಕ್ಷರಾಗಿ, ಸರ್ದಾರ್ ಸರೋವರ ನರ್ಮದಾ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ಗುಜರಾತ್ ಮುಖ್ಯ ಕಾರ್ಯದರ್ಶಿಯಾಗಿ 2013ರಲ್ಲಿ ನಿವೃತ್ತರಾದ ನಂತರ ಅವರನ್ನು ಗುಜರಾತ್ ಜಾಗೃತ ದಳದ ಆಯುಕ್ತರನ್ನಾಗಿ ನೇಮಿಸಲಾಗಿತ್ತು.












Click it and Unblock the Notifications