kolkata: ವಾಹನಗಳು ಬಾರದಿದ್ದಕ್ಕೆ ಪತ್ನಿಯನ್ನು ಆಸ್ಪತ್ರೆಗೆ 10 ಕಿಮೀ ಹೊತ್ತುಕೊಂಡೇ ಹೋದ ಪತಿ
ಕೋಲ್ಕತ್ತಾ, ನವೆಂಬರ್ 19: ಅನಾರೋಗ್ಯ ಪೀಡಿತ ಪತ್ನಿಗೆ ಸಕಾಲದಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ಆಗದೇ ಪತಿಯೊಬ್ಬರು ಪರದಾಡಿ, ಕೊನೆಗೆ ಕಿಲೋ ಮೀಟರ್‌ಗಟ್ಟಲೇ ದೂರು ಪತ್ನಿಯನ್ನು ಹೊತ್ತುಕೊಂಡೆ ಆಸ್ಪತ್ರೆ ಸೇರಿದ ಘಟನೆ ನಡೆದಿದೆ. ಆದರೆ ತಾನೊಂದು ಬಗೆದರೆ, ದೈವವೊಂದು ಬಗೆಯಿತು ಎಂಬಂತಾಗಿದೆ ಆತನ ಪರಿಸ್ಥಿತಿ.
ಪತ್ನಿ ತೀವ್ರ ಜ್ವರದಿಂದ ಬಳಲುತ್ತಿದ್ದ ಪತ್ನಿ ಮಾಮೋನಿಯನ್ನು ಪತಿ ಕಾರ್ತಿಕ್ ರಾಯ್ ಆಸ್ಪತ್ರೆಗೆ ಕರೆದೊಯ್ಯಬೇಕಿತ್ತು. ಆದರೆ ಮಾಲ್ಡಾ ಬ್ಲಾಕ್ ಆಸ್ಪತ್ರೆಗೆ ತೆರಳಬೇಕಾದರೆ ಸಾಕಷ್ಟು ಉಬ್ಬ ತಗ್ಗು,ಗುಂಡಿಗಳ ರಸ್ತೆಯಲ್ಲಿ ಪ್ರಯಾಣಿಸಬೇಕಿತ್ತು. ಹೀಗಾಗಿ ಆಂಬ್ಯುಲೆನ್ಸ್, ಟ್ಯಾಕ್ಸಿ, ಆಟೋ ಸೇರಿದಂತೆ ಯಾವುದೇ ವಾಹನಗಳು ಬಾಡಿಗೆ ಬರಲು ಒಪ್ಪದೇ ನಿರಾಕರಿಸಿವೆ.

ಕೊನೆಗೆ ದಾರಿಕಾಣದೇ ಪತಿ ಕಾರ್ತಿಕ ರಾರ್ತಿಕ್ ರಾಯ್ ತಾನೇ ಸ್ನೇಹಿತರ ಸಹಾಯದಿಂದ 25 ವರ್ಷದ ಪತ್ನಿಯನ್ನು ಹೆಗಲ ಮೇಲೆ ಹೊತ್ತುಕೊಂಡೆ ಸುಮಾರು 10 ಕಿಲೋಮೀಟರ್ ನಡೆದುಕೊಂಡು ಆಸ್ಪತ್ರೆ ತಲುಪಿದ ಘಟನೆ ಕೊಲ್ಕತ್ತಾ, ಮಾಲ್ಡಾ ಸದರ್ ಉಪವಿಭಾಗದ ಬಮಂಗೋಳದ ಮಲ್ದಂಗ ಗ್ರಾಮದಲ್ಲಿ ನಡೆದಿದೆ.
ಕೊನೆಗೂ ಬದುಕುಳಿಯಲಿಲ್ಲ ಪತ್ನಿ
ಗ್ರಾಮದಿಂದ ಹತ್ತು ಕಿಲೋ ಮೀಟರ್ ದೂರದಲ್ಲಿನ ಮೋದಿಪುಕೂರ್ ಬ್ಲಾಕ್ ಆಸ್ಪತ್ರೆಗೆ ತಮ್ಮ ಪತ್ನಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆ ತೆರಳಿದ ದೃಶ್ಯವನ್ನು ಸ್ಥಳೀಯರು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇಷ್ಟೆಲ್ಲ ಕಷ್ಟಪಟ್ಟು ಆಸ್ಪತ್ರೆ ತಲುಪಿದವನಿಗೆ ವೈದ್ಯರು ಹೇಳಿದ್ದ ಕೇಳಿ ಕುಸಿದು ಬಿದ್ದಿದ್ದಾರೆ.
ತೀವ್ರ ಜ್ವರ ಅನಾರೋಗ್ಯ ದಿಂದ ಬಳಲುತ್ತಿದ್ದ ಪತ್ನಿ ಆಸ್ಪತ್ರೆ ಸೇರುವ ಹೊತ್ತಿಗಾಗಲೇ ಪತಿ ಭುಜದ ಮೇಲೆಯೆ ಪ್ರಾಣ ಬಿಟ್ಟಿದ್ದಾಳೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ವೈದ್ಯಾಧಿಕಾರಿಗಳು ಮತ್ತು ಸರ್ಕಾರದ ವಿರುದ್ಧ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆ ದುರಸ್ಥಿಯ ನಿರ್ಲಕ್ಷ್ಯವೇ ಸಾವಿಗೆ ಕಾರಣ: ಪ್ರತಿಭಟನೆ
ಘಟನೆ ಬಳಿಕ ಶನಿವಾರ ಗ್ರಾಮಕ್ಕೆ ಆಗಮಿಸಿದ ಬಿಡಿಒ ರಾಜು ಕುಂದು ಅವರು ಸ್ಥಳೀಯರ ಪ್ರತಿಭಟನೆ, ಆಕ್ರೋಶಕ್ಕೆ ಬಿಸಿ ಅನುಭವಿಸಿದರು. ಸದರಿ ಘಟನೆಗೆ ಪಂಚಾಯತ್ ಮತ್ತು ಆಡಳಿತವನ್ನು ಹೊಣೆಗಾರರನ್ನಾಗಿಸಿದರು. ನೂರಾರು ಗ್ರಾಮಸ್ಥರು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಗ್ರಾಮಸ್ಥರು ಪದೇ ಪದೇ ಮನವಿ ಮಾಡಿದರೂ ರಸ್ತೆ ದುರಸ್ತಿಯಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿರುವುದು ಈ ದುರಂತಕ್ಕೆ ಕಾರಣವಾಗಿದೆ ಎಂದು ಎಂದು ಬಿಜೆಪಿ ನಾಯಕಿ ಬೀನಾ ಸರ್ಕಾರ್ ಕೀರ್ತಾನಿಯಾ ತಿಳಿಸಿದರು.
ನಿಧನ ಸುದ್ದಿ ತಿಳಿದು ಸ್ಥಳೀಯ ಜನಪ್ರತಿನಿಧಿಗಳು ಸಂತಾಪ ವ್ಯಕ್ತಪಡಿಸಿದರು. ಮಾಲ್ಡಾ ತೃಣಮೂಲ ಮುಖಂಡರು ಬಮಂಗೋಳ ಹಬೀಬ್‌ಪುರ ವಿಧಾನಸಭಾದ ಮತ್ತು ಮಲ್ದಹಾ ಉತ್ತರ ಲೋಕಸಭಾ ಕ್ಷೇತ್ರಕ್ಕೆ ಒಳಪಡುತ್ತದೆ. ಈ ಕ್ಷೇತ್ರವನ್ನು ಬಿಜೆಪಿ ಪ್ರತಿನಿಧಿಸುತ್ತದೆ ಎನ್ನುವ ಮೂಲಕ ಟಿಎಂಸಿ-ಬಿಜೆಪಿ ಮಧ್ಯೆ ವಾಕ್ಸಮರ ಉಂಟಾಯಿತು.
ಸಾರಿಗೆ ಅಲಭ್ಯದಿಂದಾಗಿ ರಸ್ತೆಯಲ್ಲಿಯೇ ಹೆರಿಗೆ
ರಾಜ್ಯ ಸಚಿವ ಶಶಿ ಪಂಜ ಅವರು ರಸ್ತೆಗಳನ್ನು ಏಕೆ ಅಭಿವೃದ್ಧಿಪಡಿಸಿಲ್ಲ ಎಂದು ಪ್ರಶ್ನಿಸಿದರು. ರಾಜ್ಯ ಸರ್ಕಾರವು ನಿಗದಿಪಡಿಸಿದ ಪಥಶ್ರೀ-ರಸ್ತೆಶ್ರೀ ನಿಧಿಯ ಬಳಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಈ ವರ್ಷದ ಆರಂಭದಲ್ಲಿ, ತೆಲಂಗಾಣದ ತುಳಸಿಪೇಟ್ ಗ್ರಾಮದಲ್ಲಿ ಗರ್ಭಿಣಿ ಬುಡಕಟ್ಟು ಮಹಿಳೆಯೊಬ್ಬರು ರಸ್ತೆಯ ಕಳಪೆ ಪರಿಸ್ಥಿತಿ ಮತ್ತು ಇಂಧನ ಕೊರತೆಯನ್ನು ಉಲ್ಲೇಖಿಸಿ ಆಂಬ್ಯುಲೆನ್ಸ್ ಅವರನ್ನು ಕರೆದೊಯ್ಯಲು ನಿರಾಕರಿಸಿದ ನಂತರ ರಸ್ತೆಯೊಂದರಲ್ಲಿ ಜನ್ಮ ನೀಡಿದ್ದರು. ಗೂಗಲ್ ಪೇ ಮೂಲಕ ಹಣ ನೀಡಿದರೂ ಸಾರಿಗೆ ಸೇವೆ ಸಿಕ್ಕಿರಲಿಲ್ಲ. ಕೊನೆಗೆ ರಸ್ತೆಯಲ್ಲಿಯೇ ಹೆರಿಗೆ ಆದ ಬಳಿಕ ತಾಯಿ-ಮಗುವನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿತ್ತು.












Click it and Unblock the Notifications