80 ಸಾವಿರಕ್ಕೂ ಹೆಚ್ಚು ವಿದ್ಯುತ್ ಬಿಲ್ ನೋಡಿ ಹೈಟೆನ್ಷನ್ ವೈರ್ ಮೇಲೇರಿ ಕುಳಿತ ರೈತ

ಕೌಶಂಬಿ ಜುಲೈ 18: ಕೌಶಂಬಿ ಜಿಲ್ಲೆಯಲ್ಲಿ ಹೈವೋಲ್ಟೇಜ್ ನಾಟಕವೊಂದು ನಡೆದಿದೆ. ವಿದ್ಯುತ್ ಗೃಹ ಸಂಪರ್ಕದ ಬಿಲ್ ಜಾಸ್ತಿಯಾದ ಹಿನ್ನೆಲೆಯಲ್ಲಿ ವ್ಯಕ್ತಿನೊಬ್ಬ ವಿದ್ಯುತ್ ಟವರ್ ಏರಿ ಕುಳಿದ ಘಟನೆ ಬೆಳಕಿಗೆ ಬಂದಿದೆ. ಜೊತೆಗೆ ಈತ ಬರಿಗಾಲಲ್ಲಿ ವಿದ್ಯುತ್ ತಂತಿಗಳ ಮೇಲೆ ನಡೆಯತೊಡಗಿರುವ ವಿಡಿಯೋ ವೈರಲ್ ಆಗಿದೆ. ಈತನ ಈ ಕೃತ್ಯವನ್ನು ಕಂಡು ಗ್ರಾಮಸ್ಥರು ಜಮಾಯಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಯುವಕನನ್ನು ಕೆಳಗಿಳಿಸಲು ಹರಸಾಹಸ ಪಟ್ಟಿದ್ದಾರೆ.

ವಾಸ್ತವವಾಗಿ ಈ ಘಟನೆಯು ಸರಾಯ್ ಅಕಿಲ್ ಪೊಲೀಸ್ ಠಾಣಾ ವ್ಯಾಪ್ತಿಯ ನಂದಾ ಗ್ರಾಮದಲ್ಲಿ ನಡೆದಿದೆ. ನಂದಾ ಗ್ರಾಮದ ನಿವಾಸಿ ಅಶೋಕ್ ಕುಮಾರ್ ಹೈವೋಲ್ಟೇಜ್ ವಿದ್ಯುತ್ ತಂತಿಯ ಮೇಲೇರಿ ಕುಳಿತಿರುವ ವ್ಯಕ್ತಿ. ಇವರು ಕೃಷಿ ಮಾಡಿಕೊಂಡು ಮನೆ ನಿರ್ವಹಣೆ ಮಾಡುತ್ತಿದ್ದರು. ಅಶೋಕ್ ಸೌಭಾಗ್ಯ ಯೋಜನೆಯಡಿ ಮೂರು ವರ್ಷಗಳ ಹಿಂದೆ ಉಚಿತ ಸಂಪರ್ಕ ಪಡೆದಿದ್ದರು. ಅಂದಿನಿಂದ ನಿರಂತರವಾಗಿ ಬಿಲ್ ವಸೂಲಿ ಮಾಡಲಾಗುತ್ತಿತ್ತು. ಆದರೆ ಶನಿವಾರ ಅಶೋಕ್ ಮನೆಗೆ 80 ಸಾವಿರದ 700 ರೂಪಾಯಿ ವಿದ್ಯುತ್ ಬಿಲ್ ಬಂದಿದೆ. 80 ಸಾವಿರಕ್ಕೂ ಹೆಚ್ಚು ಬಿಲ್ ನೋಡಿ ಅಶೋಕ್ ಮಾನಸಿಕ ಸ್ಥಿತಿ ಹದಗೆಟ್ಟಿದೆ ಎಂದು ಅಶೋಕ್ ಪತ್ನಿ ಮೋಹನಿ ದೇವಿ ಆರೋಪಿಸಿದ್ದಾರೆ.

ಹಲವು ಗಂಟೆಗಳ ಪ್ರಯತ್ನದ ನಂತರ ಅಶೋಕ್‌ನನ್ನು ಪೊಲೀಸರು ಕೆಳಗಿಳಿಸಿದ್ದಾರೆ. ಭಾನುವಾರ ಏನಾಯಿತೆಂದರೆ, ಅಶೋಕ ಭತ್ತ ನಾಟಿ ಮಾಡಲು ಗದ್ದೆಗೆ ಹೋಗಿದ್ದರು. ಆಗ ಪತಿ ಅಶೋಕ್ ಎಲೆಕ್ಟ್ರಿಕ್ ಟವರ್ ಮೇಲೆ ಹತ್ತುತ್ತಿರುವುದು ಗೊತ್ತಾಗಿದೆ. ಪತ್ನಿ ಸ್ಥಳಕ್ಕಾಗಮಿಸಿದಾಗ ಅಶೋಕ್ ಹೈ ಟೆನ್ಷನ್ ವೈರ್‌ಗಳ ಮೇಲೆ ನಡೆದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಅಶೋಕ್ ಅವರ ಚೇಷ್ಟೆ ಕಂಡು ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದರು. ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಾರಾಯಿ ಅಕಿಲ್ ಪೊಲೀಸರು ಅಶೋಕ್ ಅವರ ಮನವೊಲಿಕೆಗೆ ಯತ್ನಿಸಿದರು. ಹಲವು ಗಂಟೆಗಳ ಬಳಿಕ ಪೊಲೀಸರು ವ್ಯಕ್ತಿಯನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

A farmer sitting on a high tension wire after seeing the electricity bill of more than 80 thousand

ಜಂಟಿ ತಂಡ ಬಲೆ ಬೀಸಿ ಹೈವೋಲ್ಟೇಜ್ ತಂತಿಯಿಂದ ವ್ಯಕ್ತಿಯನ್ನು ಕೆಳಗಿಳಿಸಿದ್ದಾರೆ. 5 ಗಂಟೆಗಳ ನಂತರ ಸಂಯೋಜಿತ ತಂಡ ಆತನನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಆಡಳಿತ ಮಂಡಳಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಈ ಸಂದರ್ಭದಲ್ಲಿ ಹಲವು ಅಧಿಕಾರಿಗಳು ಸ್ಥಳದಲ್ಲಿದ್ದರು. ಇದೇ ವೇಳೆ ಅಶೋಕ್‌ನನ್ನು ಆಂಬ್ಯುಲೆನ್ಸ್ ಮೂಲಕ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಿದೆ.

ಇನ್ನೂ ಅಶೋಕ ಅವರಿಗೆ ಏಕಾಏಕಿ ಇಷ್ಟೊಂದು ವಿದ್ಯುತ್ ಬಿಲ್ ಬರಲು ಕಾರಣವೇನು ಎನ್ನುವ ಬಗ್ಗೆ ಕೂಡ ತನಿಖೆ ನಡೆಸಲಾಗುತ್ತಿದೆ. ವಿದ್ಯುತ್ ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಾ ಎಂದು ಕಾದು ನೋಡಬೇಕಿದೆ.

Recommended Video

      England ವಿರುದ್ಧ ಚಕ್ರವ್ಯೂಹ ರಚಿಸಿದ Kohli ಹಾಗು Siraj *Cricket | OneIndia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+