ಚೆಕ್ ಬೌನ್ಸ್ ಆದರೆ ಜೈಲೂಟ ಗ್ಯಾರಂಟಿ, ಬರಲಿದೆ ಹೊಸ ನಿಯಮ
ಬೆಂಗಳೂರು, ಡಿಸೆಂಬರ್ 25: ನೋಟು ನಿಷೇಧದ ನಂತರ ಚೆಕ್ ಮೂಲಕ ನಡೆಯುವ ವ್ಯವಹಾರಗಳು ಜಾಸ್ತಿಯಾಗುತ್ತಿವೆ. ಆದ್ದರಿಂದ ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಳ್ಳುವ ಹೊಸ ಪ್ರಸ್ತಾವವೊಂದನ್ನು ಕೇಂದ್ರ ಸರಕಾರ ಇಟ್ಟಿದೆ. ಚೆಕ್ ಬೌನ್ಸ್ ಆದಾಗ ಅಂಥ ವ್ಯಕ್ತಿಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗುತ್ತದೆ.
ಅಗಲೂ ಹಣ ಪಾವತಿಗೆ ವಿಫಲವಾದರೆ ಪ್ರಕರಣ ಇತ್ಯರ್ಥವಾಗುವ ಮುಂಚೆಯೇ ಜೈಲು ಸೇರಬೇಕಾಗುತ್ತದೆ. ನೆಗೋಷಿಯಬಲ್ ಇನ್ ಸ್ಟ್ರುಮೆಂಟ್ ಕಾಯ್ದೆ ಸೆಕ್ಷನ್ 138ರ ಅಡಿಯಲ್ಲಿ ಚೆಕ್ ಬೌನ್ಸ್ ಪ್ರಕರಣ ಬರುತ್ತದೆ. ಈ ಸೆಕ್ಷನ್ ಅನ್ವಯ ಆರೋಪಿಗೆ ಎರಡು ವರ್ಷ ಜೈಲು ಶಿಕ್ಷೆ ಅಥವಾ ಚೆಕ್ ನ ಮೊತ್ತದ ಎರಡರಷ್ಟು ದಂಡ ಅಥವಾ ಜೈಲು, ದಂಡ ಎರಡೂ ಆಗಬಹುದು.[ಚೆಕ್ ಬೌನ್ಸ್ ಪ್ರಕರಣ: ವಿಜಯ್ ಮಲ್ಯ ತಪ್ಪಿತಸ್ಥ]

ಈ ರೀತಿ ಕಾನೂನು ಇರುವುದರ ಹೊರತಾಗಿಯೂ ಚೆಕ್ ಬೌನ್ಸ್ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. 2014ನೇ ಇಸವಿಯೊಂದರಲ್ಲೇ ಕೋರ್ಟ್ ಗಳಲ್ಲಿ 18 ಲಕ್ಷ ಚೆಕ್ ಬೌನ್ಸ್ ಪ್ರಕರಣಗಳು ಬಾಕಿ ಇದ್ದವು. ವಿಚಾರಣೆ ವಿಳಂಬ ಆಗುವುದರಿಂದ ಜನರು ಕಾನೂನಿಗೆ ಹೆದರುತ್ತಿಲ್ಲ. ಪ್ರಕರಣ ಇತ್ಯರ್ಥ ಆಗುವವರೆಗೆ ಬಂಧನ ಕೂಡ ಮಾಡುವುದಿಲ್ಲ.[ಕೆಂಪೇಗೌಡ ಪ್ರಶಸ್ತಿ ಚೆಕ್ ಬೌನ್ಸ್, ಪಾಲಿಕೆ ಮಾನ ಹರಾಜು]
ಆ ಕಾರಣಕ್ಕೆ ತಿಂಗಳೊಳಗೆ ಪ್ರಕರಣ ಇತ್ಯರ್ಥ ಅಗದಿದ್ದರೆ ಬಂಧನಕ್ಕೆ ಅವಕಾಶ ನೀಡಲು ಚಿಂತನೆ ನಡೆದಿದೆ. ಚೆಕ್ ಬೌನ್ಸ್ ಪ್ರಕರಣಗಳ ಬಗ್ಗೆ ವ್ಯಾಪಾರಿಗಳ ಸಮೂಹ ತಮ್ಮ ಕಳವಳ ವ್ಯಕ್ತಪಡಿಸಿದ್ದರಿಂದ ಕಾನೂನು ತಿದ್ದುಪಡಿ ತರಲು ನಿರ್ಧರಿಸಲಾಗಿದೆ. ನೋಟು ನಿಷೇಧವಾದ ನಂತರ ಚೆಕ್ ಬೌನ್ಸ್ ಆಗುವುದು ಹೆಚ್ಚಾಗಿದೆ. ಅದ್ದರಿಂದ ವ್ಯಾಪಾರಿಗಳು ಕಠಿಣ ಕಾನೂನು ಜಾರಿಗಾಗಿ ಆಗ್ರಹಿಸಿದ್ದಾರೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications