ದೆಹಲಿ ಯುವತಿ ಮೇಲೆ ಹೈದರಾಬಾದ್ ನಲ್ಲಿ ಅತ್ಯಾಚಾರ

Posted By:
Subscribe to Oneindia Kannada

ಹೈದರಾಬಾದ್, ಆಗಸ್ಟ್ 18: ದೆಹಲಿ ಮೂಲದ 20 ವರ್ಷದ ಯುವತಿಯ ಮೇಲೆ ಹೈದರಾಬಾದಿನ ಬಂಜಾರಾ ಹಿಲ್ ಪ್ರದೇಶದಲ್ಲಿ ಅತ್ಯಾಚಾರ ನಡೆದ ಘಟನೆ ಆಗಸ್ಟ್ 16 ರಂದು ನಡೆದಿದೆ.

ದೆಹಲಿಯಿಂದ ಪ್ರವಾಸಕ್ಕೆಂದು ಹೈದರಾಬಾದಿಗೆ ಬಂದಿದ್ದ ಇಬ್ಬರು ಯುವತಿಯರು ಮತ್ತು ಒಬ್ಬ ಹುಡುಗ ಇಲ್ಲಿನ ಬಂಜಾರಾ ಹಿಲ್ಸ್ ಗೆಸ್ಟ್ ಹೌಸ್ ನಲ್ಲಿ ತಂಗಿದ್ದರು. ಈ ಮೂವರಲ್ಲಿ ಪ್ರೇಮಿಗಳಾಗಿದ್ದ ಹುಡಗ ಮತ್ತು ಒಬ್ಬಳು ಯುವತಿ ಒಂದು ಕೋಣೆಯಲ್ಲಿ ತಂಗಿದ್ದರೆ, ಇನ್ನೊಬ್ಬ ಯುವತಿ ಒಂಟಿಯಾಗಿ ಮತ್ತೊಂದು ಕೋಣೆಯಲ್ಲಿ ತಂಗಿದ್ದಳು.

A Delhi girl raped in Hyderabad on Aug 16th

ಈ ವಿಷಯ ತಿಳಿದಿದ್ದ ಇದೇ ಗೆಸ್ಟ್ ಹೌಸ್ ನಲ್ಲಿ ವಾಸವಿದ್ದ ಯುವಕನೊಬ್ಬ ಒಂಟಿಯಾಗಿದ್ದ ಯುವತಿಗೆ ಗನ್ ತೋರಿಸಿ, ಸಾಯಿಸುವುದಾಗಿ ಹೆದರಿಸಿ ಅತ್ಯಾಚಾರ ಎಸಗಿದ್ದಾನೆ.

ಪ್ರಕರಣ ದಾಖಲಿಸಿಕೊಂಡಿರುವ ಹೈದರಾಬಾದ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A 20-year-old woman from Delhi was allegedly raped in a guest house in Hyderabad's Banjara Hills area. on Aug 16th. Few days back, three friends, two girls and one boy, came to Hyderabad on a vacation.They were staying in a guest house in Banjara Hills.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ