• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಿಮ್ಲಾ ಜನ ಖುಷಿಯಿಂದ ಹಬ್ಬ ಮಾಡ್ತಾರೆ, ಮರುದಿನವೇ ಕಲ್ಲಿನಿಂದ ಹೊಡ್ಕೊತಾರೆ

|

ಶಿಮ್ಲಾ, ನವೆಂಬರ್ 9: ಶಿಮ್ಲಾದ ಜನರು ಖುಷಿಯಿಂದ ದೀಪಾವಳಿ ಆಚರಣೆ ಮಾಡ್ತಾರೆ ಮರುದಿನ ಒಬ್ಬರ ಮೇಲೊಬ್ಬರು ಕಲ್ಲು ಎಸೆದುಕೊಳ್ಳುತ್ತಾರೆ, ಹಾಗಾದರೆ ಇವರ ಮಧ್ಯೆ ಏನಾದರೂ ದ್ವೇಷ ಇದೆಯಾ ಎಂದುಕೊಳ್ಳಬೇಡಿ ಹಾಗೇನೂ ಇಲ್ಲ.

ಇದು ಶಿಮ್ಲಾದ ಒಂದು ಆಚರಣೆಯಷ್ಟೇ ಶಿಮ್ಲಾದಿಂದ ಸುಮಾರು 40 ಕಿ.ಮೀ ದೂರದಲ್ಲಿ ಧಾಮಿ ಎನ್ನುವ ಹಳ್ಳಿ ಇದೆ. ಅಲ್ಲಿ ದೀಪಾವಳಿ ಮರುದಿನ ಕಲ್ಲು ತೂರುವ ವಿಶೇಷ ಆಚರಣೆಯನ್ನು ನಡೆಸಲಾಗುತ್ತದೆ.

ಶಿವರಾಜ್ ಸಿಂಗ್ ಚೌಹಾಣ್ ಇದ್ದ ಬಸ್ ಮೇಲೆ ಕಲ್ಲು ತೂರಾಟ

ಪ್ರತಿ ವರ್ಷವು ಸುತ್ತಮುತ್ತಲಿನಲ್ಲಿರುವ ಹಳ್ಳಿಗಳಿಂದ ಸಾವಿರಾರು ಮಂದಿ ಧಾಮಿ ಹಳ್ಳಿಗೆ ಬರುತ್ತಾರೆ. ಇದರಲ್ಲಿ ಧಾಮಿಯ ಶ್ರೀಮಂತ ಕುಟುಂಬದ ಯುವಕರು ಈ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ ಇದು ನೂರಾರು ವರ್ಷಗಳ ಸಂಪ್ರದಾಯವನ್ನು ಪ್ರದರ್ಶಿಸುವ ಹಬ್ಬವಾಗಿದೆ.

ಒಬ್ಬರಿಗೊಬ್ಬರು ಕಲ್ಲು ಹೊಡೆಯುವಂತೆ ಪ್ರೇರೇಪಿಸಲಾಗುತ್ತದೆ. ಇದನ್ನು ಒಳ್ಳೆಯ ಉದ್ದೇಶಕ್ಕೆಂದೇ ಹೇಳುತ್ತಾರೆ. ಧಾಮಿಯ ರಾಜ ಕಟ್ಟಿರುವಂತಹ ದೇವಸ್ಥಾನದ ಮೂಲಕ ಮೆರವಣಿಗೆ ಆರಂಭವಾಗುತ್ತದೆ.

ಎರಡು ಹಳ್ಳಿಗಳ ಜನರು ಎದುರು ಬದುರು ನಿಂತುಕೊಂಡು ಕಲ್ಲಿನಿಂದ ಹೊಡೆದುಕೊಳ್ಳಲು ಆರಂಭಿಸುತ್ತಾರೆ.ಈ ಸಂಪ್ರದಾಯ 400 ವರ್ಷಗಳಿಗಿಂತಲೂ ಹಳೆಯದು, ಮನುಷ್ಯರನ್ನು ಬಲಿಕೊಡುವ ಪದ್ಧತಿಯನ್ನು ನಿಷೇಧ ಮಾಡಲು ಈ ಪದ್ಧತಿಯನ್ನು ಜಾರಿ ಮಾಡಲಾಗಿತ್ತು.ಮನುಷ್ಯರ ಬಲಿಯನ್ನು ತಡೆಯಲು ಧಾಮಿಯ ರಾಣಿ ತನ್ನನ್ನು ತಾನೆ ಬಲಿಪಡೆದಿದ್ದಳು ಅಲ್ಲಿಂದ ಈ ಪದ್ಧತಿ ಹುಟ್ಟಿಕೊಂಡಿತು.

ಬೋಳಂಗಡಿಯಲ್ಲಿ ಶಾಸಕ ರಾಜೇಶ್ ನಾಯಕ್ ಕಾರಿನ ಮೇಲೆ ಕಲ್ಲು ತೂರಾಟ

ಒಬ್ಬರಿಗೆ ಕಲ್ಲು ತಗುಲಿ ಗಾಯವಾಗಿ ರಕ್ತ ಬರುವವರೆಗೂ ಆಕಾಶದ ಕಡೆಗೆ ಕಲ್ಲುಗಳನ್ನು ಎಸೆಯುತ್ತಲೇ ಇರುತ್ತಾರೆ, ಒಬ್ಬರಿಗೆ ಕಲ್ಲು ತಗುಲಿ ಗಾಯವಾಗಿ ರಕ್ತ ಬಂದ ಬಳಿಕ ಆ ರಕ್ತವನ್ನು ಕಾಳಿ ದೇವಿಗೆ ನೈವೇದ್ಯವಾಗಿ ಅರ್ಪಿಸುತ್ತಾರೆ. ಅಲ್ಲಿಗೆ ಆ ವರ್ಷದ ಆಚರಣೆ ಮುಕ್ತಾಯಗೊಳ್ಳುತ್ತೆ.

English summary
Nearly 40kilometers from Shimla, the Dhami village recently organized a stone pelting fair.Thousands of people from different villages near Dhami gathered to celebrate the fair of stone throwing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X