House Rent: ಇಷ್ಟು ಕಡಿಮೆ ಖರ್ಚಿನಲ್ಲಿ 4BHK ಮನೆಯಲ್ಲಿ ವಾಸ, ಐಶಾರಾಮಿ ಜೀವನ: ದಂಪತಿ ವಿಡಿಯೋ ವೈರಲ್

ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಾ ಹೋಗುತ್ತಿದೆ. ಖರ್ಚು ಹೆಚ್ಚಾಗುತ್ತಿದೆ ಆದರೆ ಆದಾಯ ಇದ್ದಲ್ಲೇ ಇರುತ್ತದೆ. ಯಾವ ಊರಿನಲ್ಲಿ ಕಡಿಮೆ ಖರ್ಚಿನಲ್ಲಿ ನೆಮ್ಮದಿಯ ಜೀವನ ಸಿಗುವುದು ಎನ್ನುವ ಪ್ರಶ್ನೆ ಅನೇಕರನ್ನು ಕಾಡಿರುತ್ತದೆ. ಈ ಲೆಕ್ಕಾಚಾರವನ್ನು ಹಾಗೆಯೇ ಸುಮ್ಮನೆ ಹಾಕುವುದು ಸಾಧ್ಯವಿಲ್ಲ. ಆಯಾ ಸ್ಥಳದಲ್ಲಿ ಹೋಗಿ ನೆಲೆ ನಿಂತಾಗ ಮಾತ್ರ ಎಲ್ಲಿ ಎಷ್ಟು ಖರ್ಚಾಗುತ್ತದೆ ಎನ್ನುವುದು ತಿಳಿಯುವುದು. ಇಲ್ಲವಾದರೆ ದೂರದ ಬೆಟ್ಟ ಯಾವತ್ತೂ ನುಣ್ಣಗೆಯೇ ಕಾಣುವುದು.

ಇಡೀ ತಿಂಗಳ ಖರ್ಚು ಬರೀ 50 ಸಾವಿರ

ಆದರೆ ಇಡೀ ತಿಂಗಳು ಏನು ಬೇಕು ಅದೆಲ್ಲವನ್ನೂ ಪಡೆದು ನೆಮ್ಮದಿಯಿಂದ ಸಂತೋಷದಿಂದ ಇರಲು ದಂಪತಿಗೆ ಕೇವಲ 50 ಸಾವಿರ ರೂಪಾಯಿ ಸಾಕು ಎಂದರೆ? ನಂಬುವುದು ಸ್ವಲದಪ ಕಷ್ಟವಾಗುತ್ತದೆ. ಆದರೆ ಇದು ಸತ್ಯ. ಇಲ್ಲೊಬ್ಬರು ತಮ್ಮ ಕುಟುಂಬ ತಿಂಗಳಿಗೆ ಬರೀ 50 ಸಾವಿರ ರೂ. ಖರ್ಚು ಮಾಡಿ ನೆಮ್ಮದಿಯ ಜೀವನ ನಡೆಸುತ್ತಿರುವುದಾಗಿ ಹೇಳಿದ್ದಾರೆ. ಬಾಡಿಗೆ ಮನೆಯಲ್ಲಿದ್ದುಕೊಂಡು ಬಾಡಿಗೆ ಕಟ್ಟಿಕೊಂಡು ಅವರು ತಿಂಗಳಿಗೆ ಖರ್ಚು ಮಾಡುವುದು 50 ಸಾವಿರ ರೂ. ಹಾಗಂತ ಎಲ್ಲೂ ಜಿಪುಣತನ ಮಾಡುವುದಿಲ್ಲ, ತಮಗೆ ಏನು ಬೇಕು ಎಲ್ಲವನ್ನೂ ಆನಂದಿಸುತ್ತಾರೆ.ತಿಂಗಳ ದಿನಸಿಯಿಂದ ಹಿಡಿದು ಪಿಕ್‌ನಿಕ್‌ವರೆಗಿನ ಲೆಕ್ಕವನ್ನು ಅವರು ಮುಂದಿಟ್ಟಿದ್ದಾರೆ.

A Couple

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ

ಹೌದು, ಹಿಮಾಚಲದ ಪರ್ವತ ಪ್ರದೇಶಗಳಲ್ಲಿ ಮನೆ ಮಾಡಿದರೆ ತಿಂಗಳಿಗೆ ಎಷ್ಟು ಹಣ ಖರ್ಚಾಗುತ್ತದೆ ಎನ್ನುವುದನ್ನು ದಿವ್ಯಾ ಭಟ್ ಎನ್ನುವವರು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಮೂಲಕ ವಿವರವಾಗಿ ತಿಳಿಸಿದ್ದಾರೆ. ಹಿಮಾಚಲ ಪ್ರದೇಶದ ಮನಾಲಿ ಬಳಿಯ ಗಜನ್ ಎಂಬ ಶಾಂತ ಮತ್ತು ಸುಂದರ ಹಳ್ಳಿಯಲ್ಲಿ ದಿವ್ಯಾ ದಂಪತಿ ವಾಸವಾಗಿದ್ದಾರೆ. ಇಲ್ಲಿ ಇವರಿಗೆ ತಿಂಗಳಿಗೆ ತಗಲುವ ಖರ್ಚಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. "ಲಿವಿಂಗ್ ಇನ್ ದಿ ಮೌಂಟೇನ್‌ ಸಂಚಿಕೆ 1 ಎನ್ನುವ ವಿಡಿಯೋ ಶೇರ್‌ ಮಾಡಿದ್ದಾರೆ.

ಈ ವಿಡಿಯೋದಲ್ಲಿ ದಿವ್ಯಾ ತಮಗೆ ತಗಲುವ ಮಾಸಿಕ ಖರ್ಚು ಎಷ್ಟು ಎನ್ನುವ ವಿವರವನ್ನು ಒದಗಿಸಿದ್ದಾರೆ. ಬಾಡಿಗೆ ಮತ್ತು ದಿನಸಿ ವಸ್ತುಗಳಿಂದ ಹಿಡಿದು ಇಂಧನ, ವಿದ್ಯುತ್ ಮತ್ತು ಇಂಟರ್ನೆಟ್, ಔಟಿಂಗ್‌ ಹೀಗೆ ಎಲ್ಲಾ ಖರ್ಚುಗಳನ್ನು ಅವರು ಸೇರಿಸಿದ್ದಾರೆ.

ಪೈಸೆ ಪೈಸೆಯ ಖರ್ಚು ಉಲ್ಲೇಖ

ಇವರು ಮನಾಲಿಯ ಬಳಿ ಹೋಂಸ್ಟೇ ಕೂಡಾ ನಡೆಸುತ್ತಾರೆ. ಆದ್ದರಿಂದ ಅವರು 4BHK ನಲ್ಲಿ ವಾಸಿಸುತ್ತಿರುವುದಾಗಿ ಹೇಳಿದ್ದಾರೆ. ಒಂದು ವೇಳೆ 1BHK ಬೇಕು ಎಂದಾದರೆ ಸುಮಾರು 15,000 ರೂ. 2BHKಗೆ 25,000 ರೂ. ಬಾಡಿಗೆ ಕೊಡಬೇಕಾಗುತ್ತದೆ. ಇನ್ನು ಆಹಾರ ಸಂಬಂಧಿತ ಖರ್ಚುಗಳ ಬಗ್ಗೆ ವಿವರಿಸುವ ದಿವ್ಯಾ ನಾವು ಹೆಚ್ಚಾಗಿ ಮನೆಯಲ್ಲಿಯೇ ಅಡುಗೆ ಮಾಡುತ್ತೇವೆ. ಹೊರಗಡೆ ಹೋಗಿ ಊಟ ಮಾಡುವುದು ಬಹಳ ಕಡಿಮೆ, ಹಾಗಾಗಿ ನಮ್ಮ ದಿನಸಿಗೆ 10 ಸಾವಿರ ರೂ. ಖರ್ಚಾಗುತ್ತದೆ ಎಂದು ಹೇಳಿದ್ದಾರೆ.

ಯಾವತ್ತೋ ಒಂದು ದಿನ ಔಟಿಂಗ್‌ಗೆ ಹೋಗುವಾಗ ಹೊರಗಡೆ ತಿಂದರೆ ಅದಕ್ಕಾಗಿ 5,000 ರೂ. ಖರ್ಚಾಗಬಹುದು ಎಂದಿದ್ದಾರೆ. ಇನ್ನು ಇಲ್ಲಿ ಕರೆಂಟ್‌ ಬಿಲ್‌ ಕೂಡಾ ಜಾಸ್ತಿಯೇನಿಲ್ಲ ಅದು ಒಂದು ಸಾವಿರ ರೂಪಾಯಿಯಷ್ಟು ಬರುತ್ತದೆ ಎಂದಿದ್ದಾರೆ.

ಹೊರಗಡೆ ಹೋಗುವಾಗ ನಡೆದುಕೊಂಡು ಹೋಗುವುದರಿಂದ ಪೆಟ್ರೋಲ್‌, ಡಿಸೇಲ್‌ಗೆ ದೊಡ್ಡ ಮಟ್ಟದ ಖರ್ಚಾಗುವುದಿಲ್ಲ. ಆದರೂ, ಸಣ್ಣ ಟ್ರೆಕಿಂಗ್‌ಗೆ ಹೋಗುವಾಗ ತಿಂಗಳಿಗೆ ಸುಮಾರು 3,000 ರೂ. ಮೀಸಲಿಡುತ್ತಾರೆಯಂತೆ.

ಎಲ್ಲವನ್ನೂ ಒಟ್ಟುಗೂಡಿಸಿದರೂ ಈ ಜಾಗದಲ್ಲಿ ಆರಾಮದಾಯಕವಾಗಿ ಐಶಾರಾಮಿಯಾಗಿ ಜೀವನವನ್ನು ನಡೆಸಲು ತಿಂಗಳಿಗೆ ಸುಮಾರು 50,000 ರೂ.ಗಳನ್ನು ಖರ್ಚು ಮಾಡುತ್ತಿರುವುದಾಗಿ ದಿವ್ಯಾ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+