Get Updates
Get notified of breaking news, exclusive insights, and must-see stories!

ರೋಪ್ ವೇ ಮಧ್ಯೆ ಸಿಲುಕಿದ್ದ ಕೇಬಲ್ ಕಾರ್‌ನಿಂದ 11 ಪ್ರಯಾಣಿಕರ ರಕ್ಷಣೆ: ವಿಡಿಯೋ ನೋಡಿ

ನವದೆಹಲಿ, ಜೂನ್ 20: ಹಿಮಾಚಲ ಪ್ರದೇಶದ ಪರ್ವಾನೂ ಎಂಬಲ್ಲಿ ಮಧ್ಯಮಾರ್ಗದಲ್ಲಿ ಸಿಲುಕಿಕೊಂಡಿದ್ದ ಕೇಬಲ್ ಕಾರ್‌ ಆತಂಕ ಮೂಡಿಸಿತ್ತು. ಸತತ 3 ಗಂಟೆಗಳ ಕಾರ್ಯಾಚರಣೆಯಲ್ಲಿ ಕೇಬಲ್ ಕಾರ್ ನಲ್ಲಿ ಸಿಲುಕಿದ್ದ ಎಲ್ಲಾ 11 ಜನರನ್ನು ರಕ್ಷಿಸಲಾಗಿದೆ.

ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ, ವಾಯುಮಾರ್ಗದಲ್ಲಿ ಮಧ್ಯದಲ್ಲಿಯೇ ಕೇಬಲ್‌ ಕಾರ್ ಸಿಲುಕಿ ಹಾಕಿಕೊಂಡಿತ್ತು. ಘಟನೆಗೆ ಏನು ಕಾರಣ ಎನ್ನುವ ಕುರಿತು ಸಮಗ್ರ ವರದಿ ಪಡೆದುಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಜೈರಾಮ್ ಠಾಕೂರ್ ಹೇಳಿದ್ದಾರೆ.

ಸೋಲನ್ ಜಿಲ್ಲಾ ಪೊಲೀಸ್ ಮುಖ್ಯಸ್ಥ ವೀರೇಂದ್ರ ಶರ್ಮಾ ಪ್ರಕಾರ, ಪ್ರಯಾಣಿಕರನ್ನು ಹೊರತರಲು ಕೇಬಲ್‌ನಲ್ಲಿ ರಕ್ಷಣಾ ಟ್ರಾಲಿಯನ್ನು ನಿಯೋಜಿಸಲಾಗಿತ್ತು, ರಕ್ಷಣಾ ಉಪಕರಣಗಳನ್ನು ಬಳಸಿ ಕೆಳಗಿರುವ ಕೌಶಲ್ಯ ನದಿ ಕಣಿವೆಯ ಬೆಟ್ಟದ ಮೇಲೆ ಇಳಿಸಲಾಯಿತು ಎಂದು ತಿಳಿಸಿದ್ದಾರೆ.

A Cable Car Stuck On The Ropeway In Parwanoo, Himachal Pradesh, All 11 People Were Rescued

ಕೇಬಲ್ ಕಾರ್ ಟಿಂಬರ್ ಟ್ರಯಲ್ ಖಾಸಗಿ ರೆಸಾರ್ಟ್‌ನ ಜನಪ್ರಿಯ ವೈಶಿಷ್ಟ್ಯವಾಗಿದೆ, ಚಂಡೀಗಢದಿಂದ ಕಸೌಲಿ ಮತ್ತು ಶಿಮ್ಲಾ ಮಾರ್ಗ ಮಧ್ಯದಲ್ಲಿ ಸುಮಾರು 35 ಕಿಲೋಮೀಟರ್ ದೂರದಲ್ಲಿದೆ. ಪರ್ವಾನೂ ಹರ್ಯಾಣ, ಪಂಜಾಬ್ ಮತ್ತು ಚಂಡೀಗಢಗಳೊಂದಿಗೆ ಹಿಮಾಚಲ ಪ್ರದೇಶದ ತುದಿಯಲ್ಲಿರುವ ಕಾರಣ ಸುತ್ತಮುತ್ತಲಿನ ಜನರು ಪ್ರವಾಸಕ್ಕಾಗಿ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.

ಹಿರಿಯ ಪ್ರವಾಸಿಗರ ಪರದಾಟ

ಟಿಂಬರ್ ಟ್ರಯಲ್ ಆಪರೇಟರ್‌ನ ತಾಂತ್ರಿಕ ತಂಡವನ್ನು ನಿಯೋಜಿಸಲಾಗಿತ್ತು ಮತ್ತು ಪೊಲೀಸ್ ತಂಡವು ಪರಿಸ್ಥಿತಿಯನ್ನು ಮೇಲ್ವಿಚಾರಣೆಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತಂಡವೂ ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡಿತ್ತು.

ಸಿಕ್ಕಿಹಾಕಿಕೊಂಡ ಕೇಬಲ್ ಕಾರ್ ನಲ್ಲಿ ಕೆಲವು ಹಿರಿಯ ಪ್ರವಾಸಿಗರು ಇದ್ದರು. ಅವ್ಯವಸ್ಥೆ ಬಗ್ಗೆ ಹಿರಿಯ ಪ್ರವಾಸಿಗರು ವಿಡಿಯೋ ಹಂಚಿಕೊಂಡಿದ್ದಾರೆ, " ನಾನು ಮಧುಮೇಹ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದೇನೆ. ರೋಪ್ ವೇ ಬಳಸಿ ನಮ್ಮನ್ನು ರಕ್ಷಿಸುವುದಾಗಿ ಹೇಳುತ್ತಾರೆ, ಈ ರೀತಿಯಲ್ಲಿ ರಕ್ಷಣೆ ಮಾಡಿದರೆ ವಯಸ್ಸಾದವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ" ಎಂದು ದೂರಿದ್ದಾರೆ.

1992ರಲ್ಲಿ ಇದೇ ರೀತಿ ಘಟನೆ ನಡೆದಿತ್ತು

ಸೋಮವಾರದ ನಡೆದ ಘಟನೆಯು ಅಕ್ಟೋಬರ್ 1992 ರಲ್ಲಿ ಟಿಂಬರ್ ಟ್ರಯಲ್‌ನಲ್ಲಿ ಇದೇ ರೀತಿಯ ಘಟನೆಯನ್ನು ನೆಸಪಿಸಿದೆ. ಸೇನೆ ಮತ್ತು ವಾಯುಪಡೆಯ ಕಾರ್ಯಾಚರಣೆಯಲ್ಲಿ 10 ಪ್ರಯಾಣಿಕರನ್ನು ರಕ್ಷಿಸಲಾಗಿತ್ತು, ಆದರೆ ಅಂದು ಕೇಬಲ್ ಕಾರ್ ಆಪರೇಟರ್ ಸಾವನ್ನಪ್ಪಿದ್ದರು.

ಆ ದಿನ ಘಟನೆಯಲ್ಲಿ ಕತ್ತಲಾಗುವ ಮೊದಲು ಅರ್ಧದಷ್ಟು ಪ್ರಯಾಣಿಕರನ್ನು ಮಾತ್ರ ರಕ್ಷಿಸಲು ಸಾಧ್ಯವಾಯಿತು. ತಂಡವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಾಗಿತ್ತು ಆದರೆ ಮರುದಿನ ಇತರರನ್ನು ಹೊರತರುವಲ್ಲಿ ಯಶಸ್ವಿಯಾಯಿತು. ಕೇಬಲ್ ಕಾರ್ ನಿಯಂತ್ರಣ ತಪ್ಪಿದ ನಂತರ ನಿರ್ವಾಹಕರು ತಕ್ಷಣವೇ ಸುರಕ್ಷತೆಗಾಗಿ ಜಿಗಿಯಲು ಪ್ರಯತ್ನಿಸಿದ್ದನು, ಆದರೆ ತಲೆ ಬಂಡೆಗೆ ಬಡಿದಿದ್ದರಿಂದ ಸಾವನ್ನಪ್ಪಿದ್ದನು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+