ಮಹಾರಾಷ್ಟ್ರದಲ್ಲಿ ದೋಣಿ ದುರಂತ: 4 ವಿದ್ಯಾರ್ಥಿಗಳು ಸಾವು
ಮುಂಬೈ, ಜನವರಿ 13: ಮಹಾರಾಷ್ಟ್ರದ ದಾಹುನು ಕಡಲತೀರದಲ್ಲಿ 40 ವಿದ್ಯಾರ್ಥಿಗಳನ್ನು ಹೊತ್ತಿದ್ದ ದೋಣಿಯೊಂದು ನೀರಿನಲ್ಲಿ ಮುಳುಗಿದ ಪರಿಣಾಮ ನಾಲ್ಕು ವಿದ್ಯಾರ್ಥಿಗಳು ಮೃತಪಟ್ಟ ದಾರುಣ ಘಟನೆ ಇಂದು(ಜ.13) ನಡೆದಿದೆ.
32 ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದ್ದು, ಉಳಿದ ವಿದ್ಯಾರ್ಥಿಗಳನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ. ಮೃತರ ಗುರುತು ಪತ್ತೆಯಾಗಿಲ್ಲ. ಘಟನೆಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಬಾರದೆಂಬ ಕಾರಣಕ್ಕೆ ಈ ಮಾರ್ಗವಾಗಿ ಬರುತ್ತಿದ್ದ ದೋಣಿಗಳ ದಿಕ್ಕುಗಳನ್ನು ಬದಲಿಸಿ, ಬೇರೆ ದಾರಿಯಲ್ಲಿ ಚಲಿಸುವಂತೆ ಮನವಿ ಮಾಡಿಕೊಳ್ಳಲಾಗಿದ್ದು, ಹೆಲಿಕಾಪ್ಟರ್ ಗಳ ಮೂಲಕವೂ ರಕ್ಷಣಾ ಕಾರ್ಯ ನಡೆಯುತ್ತಿದೆ.

ಕಳೆದ ನವೆಂಬರ್ ನಲ್ಲಿ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಕೃಷ್ಣಾ ನದಿಯಲ್ಲಿ ನಡೆದ ದೋಣಿ ದುರಂತದಲ್ಲಿ 16 ಜನ ಮೃತರಾಗಿದ್ದನ್ನು ಇಲ್ಲಿ ಉಲ್ಲೆಖಿಸಬಹುದು.












Click it and Unblock the Notifications