ಪ್ರತಿದಿನ 40KM ಬೈಕ್ ಓಡಿಸಿ ಹಾಲು ಮಾರುವ 45 ವರ್ಷದ ಜಾನು

ಪಾಣಿಪತ್ ಮೇ 6: ಇಂದಿನ ಮಹಿಳೆ ಮನೆ ಕೆಲಸಕ್ಕೂ ಸೈ ಹೊರಗಡೆ ಕೆಲಸ ಮಾಡಲು ಜೈ ಎನಿಸಿಕೊಂಡಿದ್ದಾಳೆ. ಹೀಗಾಗಿ ಮಹಿಳಾ ಸಬಲೀಕರಣದ ಜೀವಂತ ಉದಾಹರಣೆಯಾಗಿ ಪಾಣಿಪತ್‌ನಲ್ಲಿ ಮಹಿಳೆಯೊಬ್ಬಳು ಗುರುತಿಸಿಕೊಂಡಿದ್ದಾಳೆ. ಆಕೆ 45 ವರ್ಷದ ಜಾನೂನ್. ಇವರು ಪ್ರತಿನಿತ್ಯ ಹಳ್ಳಿಯಿಂದ ನಗರಕ್ಕೆ ಬೈಕ್ ನಲ್ಲಿ 40 ಕಿಲೋಮೀಟರ್ ವರೆಗೆ ತೆರಳಿ ಹಾಲು ಮಾರಾಟ ಮಾಡುತ್ತಾರೆ. ಇವರು ಬೈಕ್ ಓಡಿಸುವುದನ್ನು ಕಂಡು ಜನ ಬೆಚ್ಚಿ ಬಿದ್ದಿದ್ದಾರೆ. ದಾರಿಯಲ್ಲಿ ಅನೇಕ ಬೈಕ್ ಸವಾರರು, ಯುವಕರನ್ನು ಜಾನೂನ್ ಬೈಕ್ ಸವಾರಿಗೆ ಬೆರಗಾಗಿದ್ದಾರೆ. ಅವರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

ಬೈಕ್ ಸವಾರಿ ಮಾಡುವ ಹಿಮಾಚಲದ ಜಾನೂನ್

ಬೈಕ್ ಸವಾರಿ ಮಾಡುವ ಹಿಮಾಚಲದ ಜಾನೂನ್

ಈ ಮಹಿಳೆ ಮೂಲತಃ ಹಿಮಾಚಲ ಪ್ರದೇಶದವರು. ಹರಿಯಾಣದ ಸನೌಲಿಯಲ್ಲಿ ಯಮುನಾ ದಡದಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಇವರ ಪತಿ ಬಶೀರ್ ಅಹಮದ್ ಹಾಲು ಮಾರುತ್ತಿದ್ದರು. ಕೆಲ ಸಮಯದ ಹಿಂದೆ ಅಪಘಾತದಲ್ಲಿ ಗಂಡನ ಕಾಲು ಮುರಿದಿತ್ತು. ಇದರಿಂದಾಗಿ ಅವರು ನಡೆಯಲು ಸಾಧ್ಯವಾಗಲಿಲ್ಲ. ಆಗ ಜಾನು ತಮ್ಮ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡರು. ಸದ್ಯ ಅವರೇ ಬೈಕ್ ಓಡಿಸಲು ಶುರುಮಾಡಿ ಹಾಲು ಮಾರಲು ನಗರಕ್ಕೆ ತೆರಳುತ್ತಾರೆ.

ನಿತ್ಯ 40KM ಗಿಂತ ಹೆಚ್ಚು ಬೈಕ್

ನಿತ್ಯ 40KM ಗಿಂತ ಹೆಚ್ಚು ಬೈಕ್

ಅವರು ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ಎದ್ದು ಪಾಣಿಪತ್‌ಗೆ ಬೈಕ್‌ನಲ್ಲಿ ಹೋಗುತ್ತಾರೆ. ಪಾಣಿಪತ್‌ ಪಟ್ಟಣ ಅವರ ಗ್ರಾಮದಿಂದ ಸುಮಾರು 40 ಕಿಮೀ ದೂರದಲ್ಲಿದೆ. ಮನೆಯ ಉಳಿದ ಕೆಲಸಗಳನ್ನು ನೋಡುತ್ತಾ, ಹಾಲು ಮಾರುವ ಕೆಲಸವನ್ನು ತ್ವರಿತವಾಗಿ ನಿಭಾಯಿಸುತ್ತಾರೆ ಜಾನು. ಸಮಯ ಇಲ್ಲದಿದ್ದಾಗ ಅವರು ಬೈಕಿನ ವೇಗವನ್ನು ಹೆಚ್ಚಿಸುತ್ತಾರೆ. ಅವರ ಬೈಕ್‌ನಲ್ಲಿ ಹಾನಿ 90 ಲೀಟರ್‌ನ 2 ಕ್ಯಾಂಟರ್‌ಗಳು ಇರುತ್ತವೆ. ಇಲ್ಲಿ ಹಾಲು ಮಾರುವ ಕೆಲಸ ಸಾಮಾನ್ಯವಾಗಿ ಗಂಡಸರು ಮಾಡುತ್ತಾರೆ. ಆದರೆ ಹೆಂಗಸರು ಹಾಲು ಮಾರುವುದ ಇರಲಿ ಬೈಕ್ ದೊಡ್ಡ ವಿಚಾರ. ಆದರೆ ಜಾನು ಮಾತ್ರ ಇವೆರಡನ್ನೂ ನಿಭಾಯಿಸುತ್ತಾರೆ.

ಹಾಲು ಮಾರಿದರೆ ಮಾತ್ರ ಹಣ

ಮಹಿಳೆಯರು ಬಂಡೆಗಿಂತ ಬಲವಾದ ಇಚ್ಛಾಶಕ್ತಿಯುಳ್ಳವರು. ಕಷ್ಟಕರ ಸಂದರ್ಭಗಳಲ್ಲಿ ಹೋರಾಡುತ್ತಾರೆ. ತಮ್ಮ ಜೀವನ ಮತ್ತು ಕುಟುಂಬವನ್ನು ಪೂರ್ಣ ಉತ್ಸಾಹದಿಂದ ನೋಡಿಕೊಳ್ಳುವ ಕೆಲಸವನ್ನು ಮಾಡುತ್ತಾರೆ. ಇದಕ್ಕೆ ಸಾಕ್ಷಿ ಜಾನೂನ್. ರಂಜಾನ್ ಮಾಸವನ್ನು ಇಸ್ಲಾಂ ಧರ್ಮದಲ್ಲಿ ಪವಿತ್ರ ಹಬ್ಬದಂದು ಗಂಡ ಅಪಘಾತಕ್ಕೆ ಒಳಗಾದರು. ನಗರದಲ್ಲಿ ಹಾಲು ನೀಡಲು ಯಾರೂ ಇರಲಿಲ್ಲ. ಹೀಗಾಗಿ ಈ ಜವಬ್ದಾರಿಯನ್ನು ಪತ್ನಿ ಜಾನೂನು ಹೊತ್ತುಕೊಂಡಿದ್ದಾರೆ. ಮಾತ್ರವಲ್ಲದೇ ಈ ಸ್ಥಳದಲ್ಲಿ ಪಶುಪಾಲನೇ ಮೊದಲು ಆರಂಭಿಸಿದವರು ಇವರು. ಪೂರ್ವಜರಿಂದ ಇವರು ಹಾಲು ಮಾರಿಯೇ ಜೀವನ ಸಾಗಿಸುತ್ತಿದ್ದಾರೆ.

'ಮಹಿಳೆಯರು ಎಲ್ಲವನ್ನೂ ಮಾಡಬಹುದು'

'ಮಹಿಳೆಯರು ಎಲ್ಲವನ್ನೂ ಮಾಡಬಹುದು'

ಈ ಬಗ್ಗೆ ಮಾತನಾಡಿದ ಜಾನೂನ್, 'ದಾರಿಯಲ್ಲಿ ಹೋಗುತ್ತಿರುವ ಅನೇಕ ಜನರು ನಮ್ಮನ್ನು ನೋಡಿ ಆಶ್ಚರ್ಯ ಪಡುತ್ತಾರೆ, ನೀವು ಇದನ್ನು ಹೇಗೆ ಮಾಡುತ್ತೀರಿ ಎಂದು ಅನೇಕರು ಕೇಳುತ್ತಾರೆ. ನಾನು ನಿಮಗೆ ಹೇಳುತ್ತೇನೆ. ಮಹಿಳೆಯರು ಎಲ್ಲವನ್ನೂ ಮಾಡಬಹುದು. ಜವಾಬ್ದಾರಿ ಬಂದಾಗ ಮಾಡೇ ಮಾಡುತ್ತಾರೆ. ಹೆಂಗಸರು ಬೈಕ್ ಓಡಿಸುವುದು ಇಂದಿಗೆ ಸಾಮಾನ್ಯವಾಗಿದೆ' ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+