ಕೋವಿಡ್ ಸೋಂಕಿತರ ಸಂಖ್ಯೆ; ದಾಖಲೆ ಬರೆದ ಭಾರತ
ನವದೆಹಲಿ, ಸೆಪ್ಟೆಂಬರ್ 06: ಭಾರತದಲ್ಲಿ ಒಂದೇ ದಿನ 90,632 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಒಂದೇ ದಿನದಲ್ಲಿ ಇಷ್ಟು ಪ್ರಕರಣ ದಾಖಲಾಗಿದ್ದುಇದೇ ಮೊದಲು. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 41,13,812ಕ್ಕೆ ಏರಿಕೆಯಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ವಿಶ್ವದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಲ್ಲಿ ಬ್ರೆಜಿಲ್ 2ನೇ ಸ್ಥಾನದಲ್ಲಿದೆ. ಒಟ್ಟು 41,13,812 ಸೋಂಕಿತರ ಸಂಖ್ಯೆ ಭಾರತದಲ್ಲಿ ದಾಖಲಾಗಿದ್ದು, ಬ್ರೆಜಿಲ್‌ಗಿಂತ 9 ಸಾವಿರ ಮಾತ್ರ ಕಡಿಮೆ ಇದೆ.
ದೇಶದಲ್ಲಿ 24 ಗಂಟೆಯಲ್ಲಿ 1065 ಜನರು ಮೃತಪಟ್ಟಿದ್ದಾರೆ. ಇದುವರೆಗೂ ಮೃತಪಟ್ಟವರ ಸಂಖ್ಯೆ 70,626ಕ್ಕೆ ಏರಿಕೆಯಾಗಿದೆ. ದೇಶದಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 8,62,320. 31 ಲಕ್ಷ ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
24 ಗಂಟೆಯಲ್ಲಿ ಮಹಾರಾಷ್ಟ್ರ, ಆಂಧ್ರ ಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ಉತ್ತರ ಪ್ರದೇಶದಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗಿವೆ. ಈ ಐದು ರಾಜ್ಯಗಳಿಂದ ಶೇ 62ರಷ್ಟು ಸಕ್ರಿಯ ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಡಿಸ್ಚಾರ್ಜ್‌ನ ಒಂದೇ ದಿನದ ದಾಖಲೆ
ದೇಶದಲ್ಲಿ ಒಂದೇ ದಿನ 70 ಸಾವಿರ ರೋಗಿಗಳು ಗುಣಮುಖಗೊಂಡು ಡಿಸ್ಚಾರ್ಜ್ ಆಗಿದ್ದಾರೆ. ಒಂದೇ ದಿನ ಇಷ್ಟು ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು ಇದೇ ಮೊದಲು. ಮೇ ತಿಂಗಳಿನಲ್ಲಿ 50 ಸಾವಿರ ಜನರು ಡಿಸ್ಚಾರ್ಜ್ ಆಗಿದ್ದರು.

ದೇಶದಲ್ಲೇ ಅತಿ ಹೆಚ್ಚು ಕೋವಿಡ್ ಪ್ರಕರಣ
ಭಾರತದಲ್ಲಿ ಅತಿ ಹೆಚ್ಚು ಕೋವಿಡ್ ಸೋಂಕಿತರು ಇರುವ ರಾಜ್ಯ ಮಹಾರಾಷ್ಟ್ರ. ಶನಿವಾರ ಅತಿ ಹೆಚ್ಚು ಎಂದರೆ 20,489 ಹೊಸ ಕೋವಿಡ್ ಪ್ರಕರಗಳು ರಾಜ್ಯದಲ್ಲಿ ದಾಖಲಾಗಿವೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 8,83,862ಕ್ಕೆ ಏರಿಕೆಯಾಗಿದೆ.

ಆಂಧ್ರ ಪ್ರದೇಶ ರಾಜ್ಯ
ಆಂಧ್ರ ಪ್ರದೇಶದಲ್ಲಿ 24 ಗಂಟೆಯಲ್ಲಿ 10,825 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. 71 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 4,87,331ಕ್ಕೆ ಏರಿಕೆಯಾಗಿದೆ.

1 ಲಕ್ಷ ಕೋವಿಡ್ ಪರೀಕ್ಷೆ
ಕರ್ನಾಟಕದಲ್ಲಿ ಪ್ರತಿದಿನ 1 ಲಕ್ಷ ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ ಎಂದು ಸರ್ಕಾರ ಹೇಳಿದೆ. ಪ್ರಸ್ತುತ 75,000 ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಶನಿವಾರ ರಾಜ್ಯದಲ್ಲಿ 9746 ಹೊಸ ಪ್ರಕರಣ ದಾಖಲಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 389232ಕ್ಕೆ ಏರಿಕೆಯಾಗಿದೆ.












Click it and Unblock the Notifications