ಅಹಮದಾಬಾದಿನ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಮರಣ

Posted By:
Subscribe to Oneindia Kannada

ಅಹಮದಾಬಾದ್‌, ಅಕ್ಟೋಬರ್ 29: ಉತ್ತರಪ್ರದೇಶದ ಗೋರಖ್ ಪುರದ ಶಿಶುಗಳ ಮರಣ ದುರಂತದ ಕಹಿ ನೆನಪು ಮರೆಯಾಗುವ ಮುನ್ನವೇ ಅಹಮದಾಬಾದಿನಲ್ಲಿ ಇದೇ ರೀತಿ ದುರಂತ ಘಟನೆ ನಡೆದಿದೆ.

ಅಹಮದಾಬಾದಿನ ಸರ್ಕಾರಿ ಆಸ್ಪತ್ರೆಯಲ್ಲಿ 24 ಗಂಟೆಯೊಳಗೆ 9 ನವಜಾತ ಶಿಶುಗಳು ಮೃತಪಟ್ಟಿವೆ. ಹುಟ್ಟುತ್ತಲೇ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದ ಹಲವು ಮಕ್ಕಳನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು, ಈ ಪೈಕಿ 9 ನವಜಾತ ಶಿಶುಗಳು ತೀವ್ರ ನಿಗಾ ಘಟಕದಲ್ಲಿದ್ದರೂ ಮೃತಪಟ್ಟಿರುವ ಘಟನೆ ನಡೆದಿದೆ.

9 newborns die in Ahmedabad government hospital in 24 hours

ಲುನಾವಾದ, ಸುರೇಂದ್ರನಗರ, ಮನ್ಸಾ, ವಿಕ್ರಂಗಮ್‌ ಹಾಗೂ ಹಿಮ್ಮತ್‌ನಗರ್‌ ಆಸ್ಪತ್ರೆಗಳಿಂದ ಅಹಮದಾಬಾದ್‌ ಸರ್ಕಾರಿ ಆಸ್ಪತ್ರೆಗೆ ಐದು ಮಕ್ಕಳು ಹಾಗೂ ಇದೇ ಆಸ್ಪತ್ರೆಯಲ್ಲಿ ಜನಿಸಿದ ಮೂರು ಮಕ್ಕಳು ಅಸುನೀಗಿರುವ ಘಟನೆ ಜರುಗಿದೆ.

ಆಸ್ಪತ್ರೆಯು 100 ಬೆಡ್‌ಗಳ ನವಜಾತ ಶಿಶುಗಳು ತೀವ್ರ ಘಟಕ(Neonatal Intensive Care)ವನ್ನು ಹೊಂದಿದೆ. ವೈದ್ಯರು ಹಾಗೂ ನರ್ಸ್‌ಗಳು ಸೌಲಭ್ಯ ಚೆನ್ನಾಗಿದೆಯಾದರೂ ಮಕ್ಕಳ ಸಾವು ಸಂಭವಿಸಿದೆ.

ಬೇರೆ ಆಸ್ಪತ್ರೆಗಳಿಂದ ಇಲ್ಲಿನ ಆಸ್ಪತ್ರೆಗೆ ಸೇರಿಸಲಾದ ಮಕ್ಕಳು ತೀವ್ರವಾಗಿ ಅಸ್ವಸ್ಥಗೊಂಡ ಸ್ಥಿತಿಯಲ್ಲಿದ್ದವು, ಇಲ್ಲಿ ಜನಿಸಿದ ಮಕ್ಕಳು ಕಡಿಮೆ ತೂಕ (ಸರಾಸರಿ 1.1 ಕೆಜಿ) ಹೊಂದಿದ್ದವು, ಉಸಿರಾಟದ ತೊಂದರೆ ಅನುಭವ ಹೊಂದಿದ್ದವು, ವೈದ್ಯರ ಕೊರತೆ ಅಥವಾ ಐಸಿಯು ಸಮಸ್ಯೆಯಿಂದ ಮಕ್ಕಳ ಸಾವು ಸಂಭವಿಸಿಲ್ಲ ಎಂದು ಇಲ್ಲಿನ ವೈದಾಧಿಕಾರಿ ಮಂಜುನಾಥ್ ಸ್ಪಷ್ಟಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
At least nine newborns died on Saturday in an Ahmedabad government hospital, including five who were admitted from other public hospitals in critical condition, confirmed official sources.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ