8th Pay Commission: ಸರ್ಕಾರಿ ನೌಕರರ ಪಿಂಚಣಿ, ತುಟ್ಟಿಭತ್ಯೆ ನಿರೀಕ್ಷೆಗಳು, ಆಯೋಗ ಜಾರಿಯ ಅಂಶಗಳು
ಬೆಂಗಳೂರು, ಸೆಪ್ಟಂಬರ್ 04: ಕೇಂದ್ರ ಸರ್ಕಾರಿ ನೌಕರರ ಎಂಟನೇ ವೇತನ ಆಯೋಗದ ಜಾರಿ ನಂತರ ಆಗಬಹುದಾದ ವೇತನ ಹೆಚ್ಚಳ, ತುಟ್ಟಿಭತ್ಯೆಯ ಏರಿಕೆಗಳ ಮೇಲಿನ ನಿರೀಕ್ಷೆಗಳು ಮುಂದುವರಿದಿವೆ. 8 ನೇ ವೇತನ ಆಯೋಗ ಅನುಷ್ಠಾನವಾಗುತ್ತಿದ್ದಂತೆ ವೇತನ ಎಷ್ಟಾಗಬಹುದೆಂದು ಲೆಕ್ಕ ಹಾಕುತ್ತಿದ್ದಾರೆ. ಹಂತ 18ರಡಿ ವೇತನ 34,560 ಹೆಚ್ಚಾದರೆ, ರೂ 4.8 ಲಕ್ಷಕ್ಕೆ ತಲುಪಬಹುದು ಎಂದು ಅಂದಾಜಿಸಲಾಗಿದೆ.
ಈ ವರ್ಷದ ಜುಲೈ ತುಟ್ಟಿಭತ್ಯೆ ಹೆಚ್ಚಳದಲ್ಲಿರುವ ಕೇಂದ್ರ ಸರ್ಕಾರಿ ನೌಕರರು ಮುಂದಿನ ದಿನಗಳಲ್ಲಿ ತಮ್ಮ ವೇತನ ಹಾಗೂ ಪಿಂಚಣಿಗಳ ಎಷ್ಟು ಹೆಚ್ಚಾಗಲಿದೆ, ಸಂಭಾವ್ಯ ಪರಿಷ್ಕರಣೆ ಬಗ್ಗೆ ಇನ್ನಿಲ್ಲದ ನಿರೀಕ್ಷೆ ಹೊಂದಿದ್ದಾರೆ. 8ನೇ ವೇತನ ಆಯೋಗ ನೌಕರರ ವೇತನದಲ್ಲಿ ಗಮನಾರ್ಹ ಬದಲಾವಣೆ ತರುವ ಸಾಧ್ಯತೆ ಇದೆ ಎಂಬ ವಿಶ್ವಾಸ ಅವರಲ್ಲಿದೆ.

ವೇತನ ಆಯೋಗದ ಅಡಿ ಹೆಚ್ಚಾಗುವ ವೇತನ ಏರಿಕೆಯು ಕೇಂದ್ರದ ನೂತನ ಏಕೀಕೃತ ಪಿಂಚಣಿ ಯೋಜನೆ (UPS) ಪಿಂಚಣಿಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ. ಹೀಗಾಗಿ ನೌಕರರ ಲೆಕ್ಕಾಚಾರಗಳು ಜೋರಾಗಿಯೇ ಇವೆ. ಆದರೆ ಸದ್ಯ ಏಂಟನೇ ವೇತನ ಆಯೋಗ ನಮ್ಮ ಮುಂದಿಲ್ಲ ಎಂದು ಸರ್ಕಾರ ತಿಳಿಸಿದೆ. ಹೀಗಿದ್ದರೂ ಆಯೋಗಕ್ಕೆ ಅನುಮೋದನೆ ನೀಡಿದರೆ ಕೆಲವು ಶಿಫಾರಸುಗಳನ್ನು ಸೇರಿಲು ಒತ್ತಾಯಿಸಬಹುದೆಂಬುದು ನೌಕರರ ಅಭಿಪ್ರಾಯವಾಗಿದೆ.
ನಿರೀಕ್ಷಿತ ವೇತನ ಮತ್ತು ಪಿಂಚಣಿ ಪರಿಷ್ಕರಣೆ
8ನೇ ವೇತನ ಆಯೋಗಕ್ಕೂ ಮೊದಲಿದ್ದ ವೇತನ ಆಯೋಗಗಳು ಶಿಫಾರಸು ಮಾಡಿದ ಹೆಚ್ಚಳದಂತೆಯೇ ಮೂಲ ವೇತನವು ಶೇಕಡಾ 20ರಿಂದ 30ರಷ್ಟು ಏರಿಕೆ ಆಗಬಹುದು ಎಂದು ವಿಶ್ಲೇಷಿಸಲಾಗಿದೆ. ಇನ್ನು ನೌಕರರ ಮೂಲ ವೇತನದಿಂದ ಪರಿಷ್ಕಣೆ ವೇಳೆ ಫಿಟ್‌ಮೆಂಟ್ ಅಂಶ (ಸದ್ಯ 2.57) ಮೂರು ಪಟ್ಟಿ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

2026ರಲ್ಲಿ ಹೊಸ ಆಯೋಗ ಜಾರಿ?
8ನೇ ವೇತನ ಆಯೋಗದ ಅನುಷ್ಠಾನ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲದಿದ್ದರೂ ಸಹಿತ ತಜ್ಞರು ಪ್ರಕಾರ, ಮುಂದಿನ ವರ್ಷ 2025ರ ವೇಳೆಗೆ ರಚನೆ ಆಗಬಹುದೆಂದು ಹೇಳಲಾಗುತ್ತಿದೆ. ಆಗ ಅನುಮೋದನೆ ನೀಡಿ ಹಾಲಿ ಏಳನೇ ವೇತನ ಆಯೋಗ ಅಂತ್ಯವಾಗುತ್ತಿದ್ದಂತೆ 2026ರ ಜನವರಿಯಲ್ಲಿ ಜಾರಿ ಮಾಡಬಹುದು ಎಂದು ಅಂದಾಜಿಸಲಾಗಿದೆ. ಸದ್ಯ ಏಳನೇ ವೇತನ ಆಯೋಗ ಜಾರಿಯಾಗಿ ಎಂಟೂವರೆ ವರ್ಷಗಳು ಕಳೆದಿವೆ.
ಪಿಂಚಣಿ ಪರಿಷ್ಕರಣೆ ಅಂಶ
ಪಿಂಚಣಿದಾರರು ಭವಿಷ್ಯದಲ್ಲಿ ಪಿಂಚಣಿಗಳಲ್ಲಿ ಅನುಗುಣವಾದ ಹೆಚ್ಚಳ ನಿರೀಕ್ಷಿಸಬಹುದು. ಇದು ಪರಿಷ್ಕೃತ ವೇತನ ಶ್ರೇಣಿಗಳೊಂದಿಗೆ ಸಮಾನತೆಯನ್ನು ಕಾಯ್ದುಕೊಳ್ಳುವ ಸಾಧ್ಯತೆಯಿದೆ. ಇದು ನಿವೃತ್ತ ಸರ್ಕಾರಿ ನೌಕರರಿಗೆ ಹಣದುಬ್ಬರ, ಅಧಿಕ ವೆಚ್ಚ ಸರಿದೂಗಿಸುವಂತಹ ಪರಿಹಾರ ಸಿಗಬಹುದು.
ತುಟ್ಟಿಭತ್ಯೆ (DA) ಹೆಚ್ಚಳದ ಅಂಶ
ಕೇಂದ್ರ ಸರ್ಕಾರದ ನೌಕರರಗೆ ಸಂಬಳದ ನಿರ್ಣಾಯಕ ಅಂಶವಾಗಿರುವ ತುಟ್ಟಿಭತ್ಯೆ (ಡಿಎ) ಗ್ರಾಹಕ ಬೆಲೆ ಸೂಚ್ಯಂಕದಲ್ಲಿನ ಬದಲಾವಣೆಗಳನ್ನು ಹೆಚ್ಚು ನಿಖರವಾಗಿ ಪ್ರತಿಬಿಂಬಿಸಲು ವರ್ಧಿತ ಲೆಕ್ಕಾಚಾರದ ವಿಧಾನಗಳನ್ನು ಕಾಣಬಹುದು..












Click it and Unblock the Notifications