8th Pay Commission: ವೇತನ, ಭತ್ಯೆಗಳ ಪರಿಷ್ಕರಣೆಗೆ ಫೀಟ್‌ಮೆಂಟ್ ಅಂಶ ಎಷ್ಟಿರಲಿದೆ! ಅಪ್ಡೇಟ್
ನವದೆಹಲಿ, ನವೆಂಬರ್ 16: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಏಳನೇ ವೇತನ ಆಯೋಗ ಪೂರ್ಣಗೊಳ್ಳಲು ಒಂದು ವರ್ಷ ಬಾಕಿ ಇದೆ. ಹೀಗಿರುವಾಗಲೇ ಎಂಟನೇ ವೇತನ ಆಯೋಗ ಜಾರಿಗೆ ಘೋಷಣೇಗೆ ಸುಮಾರು 1.2 ಕೋಟಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಕಾಯುತ್ತಿದ್ದಾರೆ. ಏಕೆಂದರೆ ಇದರಲ್ಲಿ ಪರಿಗಣಿಸುವ ಫಿಟ್‌ಮೆಂಟ್ ಅಂಶದಿಂದಲೇ ನೌಕಕರರ ವೇತನ, ಭತ್ಯೆಗಳು ಪರಿಷ್ಕರಣೆಗೊಳ್ಳಲಿವೆ.
ಆದ್ದರಿಂದ ಕೋಟ್ಯಂತರ ಕೇಂದ್ರ ಸರ್ಕಾರಿ ನೌಕರರು 8ನೇ ವೇತನ ಆಯೋಗದ ರಚನೆ ಬಗ್ಗೆ ಸಾಕಷ್ಟು ಕುತೂಹಲ ಹೊಂದಿದ್ದಾರೆ. ಇದರೊಮದಿಗೆ ಎರಡು ಪ್ರಮುಖ ಪರಿಷ್ಕರಣೆಗಾಗಿ ಕಾಯುತ್ತಿದ್ದಾರೆ. ಹೊಸ ವೇತನ ಆಯೋಗ ಜಾರಿಯಾಗುತ್ತಿದ್ದಂತೆ ನೌಕರರ ವೇತನ ಹಾಗೂ ಪಿಂಚಣಿಗಳಲ್ಲಿ ಗಣನೀಯ ಏರಿಕೆ ನಿರೀಕ್ಷಿಸಲಾಗಿದೆ.

ಹಾಲಿ ತುಟ್ಟಿಭತ್ಯೆ ಏರಿಕೆಯನ್ನು ನೌಕರರು ಪಡೆದುಕೊಳ್ಳುತ್ತಿದ್ದಾರೆ. 7ನೇ ವೇತನ ಆಯೋಗ ಅನುಷ್ಠಾನಗೊಂಡ 9 ವರ್ಷಗಳು ಆಗಿವೆ. ಇನ್ನೊಂದು ವರ್ಷದಲ್ಲಿ ಅಂದರೆ 2025ರ ಡಿಸೆಂಬರ್ 31ಕ್ಕೆ ಕೊನೆಗೊಳ್ಳಬೇಕು. ನಿಯಮದಂತೆ ಪ್ರತಿ ಹತ್ತು ವರ್ಷಕ್ಕೆ ಒಮ್ಮೆಯಂತೆ ಹೊಸ (8ನೇ) ವೇತನ ಆಯೋಗ ಜಾರಿಯಾಗಬೇಕು.
ಅದಕ್ಕೂ ಹಲವಾರು ತಿಂಗಳು ಮೊದಲೇ ನೌಕರರ ಶಿಫಾರಸು ಪರಿಗಣನೆ, ಚರ್ಚೆ, ಅನುಷ್ಠಾನದ ಘೋಷಣೆ ಆಗಬೇಕು. ಆದರೆ ಇದಾವುದರ ಬಗ್ಗೆ ಸರ್ಕಾರ ಅಧಿಕೃತವಾಗಿ ತಿಳಿಸಿಲ್ಲ. ಇದು ಕುತೂಹಲ ಹೆಚ್ಚಾಗುವಂತೆ ಮಾಡಿದೆ.
ಹಾಗಾದರೆ ನಿರೀಕ್ಷೆಯಂತೆ 8ನೇ ವೇತನ ಆಯೋಗವನ್ನು ಸರ್ಕಾರ ಅನುಷ್ಠಾನ ಘೋಷಿಸಿದರೆ, ನೌಕರರ ವೇತನ ಪರಿಷ್ಕರಣೆ ಎಷ್ಟಾಗುತ್ತದೆ. ಫಿಟ್ ಮೆಂಟ್ ಅಂಶವನ್ನು ಎಷ್ಟು ಪರಿಗಣಿಸಲಾಗುತ್ತದೆ. ತುಟ್ಟಿಭತ್ಯೆ ಹಾಗೂ ತುಟ್ಟಿ ಪರಿಹಾರ ಏರಿಕೆ ಎಷ್ಟುಆಗುತ್ತದೆ? ಎಂಬೆಲ್ಲ ಲೆಕ್ಕಾಚಾರಗಳು ಇಲ್ಲಿವೆ ನೋಡಿ.
ಫಿಟ್‌ಮೆಂಟ್ ಅಂಶದ ಲೆಕ್ಕಾಚಾರ, ಅಪ್ಡೇಟ್ ಮಾಹಿತಿ
ಹೊಸ ಫಿಟ್‌ಮೆಂಟ್ ಅಂಶ ಅತ್ಯಧಿಕ ಪ್ರಮಾಣದಲ್ಲಿರಲಿವೆ ಎಂಬ ಸಾಕಷ್ಟು ವರದಿಗಳು ಈಗಾಗಲೇ ಬಿತ್ತರಗೊಂಡಿವೆ. ಪ್ರತಿ ವೇತನ ಆಯೋಗದ ಅಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನ ಶ್ರೇಣಿಯ ಏರಿಕೆ ಫಿಟ್‌ಮೆಂಟ್ ಅಂಶವನ್ನು ಆಧರಿಸಿರುತ್ತದೆ.
ಹಾಲಿ 7ನೇ ವೇತನ ಆಯೋಗದಡಿ ಸರ್ಕಾರಿ ಉದ್ಯೋಗಿಗಳ 2.57ರ ಫಿಟ್‌ಮೆಂಟ್ ಅಂಶ ಪರಿಗಣಿಸಿ ಪರಿಷ್ಕರಣೆ ಮಾಡಲಾಗಿತ್ತು. ಆದರೆ ಆಗ ಕೇಂದ್ರ ನೌಕರರ ಸಂಘಗಳು 3.67ರ ಫಿಟ್‌ಮೆಂಟ್ ಅಂಶವನ್ನು ಪರಿಗಣಿಸುವಂತೆ ಬೇಡಿಕೆ ಇಟ್ಟಿದ್ದರು.
ಮುಂದಿನ ದಿನಗಳಲ್ಲಿ 8ನೇ ವೇತನ ಆಯೋಗ ಜಾರಿಯಾದರೆ, ಕನಿಷ್ಠ ವೇತನ ಹೆಚ್ಚಿಸಲು ಸರ್ಕಾರ ಫಿಟ್‌ಮೆಂಟ್ ಅಂಶ ಎಷ್ಟು ಪರಿಗಣಿಸಲಿದೆ ಎಂದು ನೌಕರರು ತಲೆಕೆಸಿಕೊಂಡಿದ್ದಾರೆ. ವರದಿಗಳ ಪ್ರಕಾರ, NC-JCM ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ ಅವರು ಹೇಳುವಂತೆ ನೌಕರರ ವೇತನ, ಪಿಂಚಣಿಗಳ ಹೆಚ್ಚಳಕ್ಕೆ ಕೇಂದ್ರವು ಕನಿಷ್ಠ 2.86 ಫಿಟ್‌ಮೆಂಟ್ ಅಂಶ ಪರಿಗಣಿಸಬಹುದು ಎಂಬ ನಿರೀಕ್ಷೆ ಇದೆ.
ಹೀಗಾದರೆ ನೌಕರನ ಕನಿಷ್ಠ ಮೂಲ ವೇತನವು 51,480 ರೂಪಾಯಿ ಹೆಚ್ಚಾಗಲಿದೆ. ಪ್ರಸ್ತುತ ಕನಿಷ್ಠ ವೇತನ 18,000 ರೂಪಾಯಿ ಇದೆ. ಫಿಟ್‌ಮೆಂಟ್ ಅಂಶ ನಿರೀಕ್ಷೆಯಂತೆ 2.86 ಕ್ಕೆ ನಿಗದಿಪಡಿಸಿದರೆ ಪಿಂಚಣಿ 9,000 ರೂ.ನಿಂದ 25,740 ರೂ.ಗೆ ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಲೆಕ್ಕಾಚಾರ ಹಾಕಲಾಗಿದೆ.
10 ವರ್ಷಕ್ಕೊಮ್ಮೆ ಫಿಟ್‌ಮೆಂಟ್ ಪರಿಗಣನೆ
ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ವೇತನ, ಪಿಂಚಣಿ ಹೆಚ್ಚಳದ ಫಿಟ್‌ಮೆಂಟ್ ಅಂಶವನ್ನು ಹತ್ತು ವರ್ಷಕ್ಕೆ ಒಮ್ಮೆ ಮಾತ್ರವೇ ಲೆಕ್ಕ ಹಾಕಲಾಗುತ್ತದೆ. ಹೀಗಾಗಿ ಈ ಭಾರಿಯು ಇದರ ಮೇಲೆಯೂ ನೌಕರರ ಗಮನ ಕೇಂದ್ರೀಕೃತವಾಗಿದೆ. ಮಿಶ್ರಾ ಅವರು ಇತ್ತೀಚೆಗೆ ಕೇಂದ್ರ ಹಣಕಾಸು ಕಾರ್ಯದರ್ಶಿ ತುಹಿನ್ ಕಾಂತಾ ಪಾಂಡೆ ಅವರ ಜೊತೆಗೆ ನಡೆಸಿದ ಸಭೆ ಬಳಿಕ ಈ 2.86 ಫಿಟ್‌ಮೆಂಟ್ ಅಂಶ ಹೆಚ್ಚು ಮುನ್ನೆಲೆಗೆ ಬಂದಿದೆ. ಇದರ ಆಧಾರದಲ್ಲಿ 8ನೇ ವೇತನ ಆಯೋಗದಡಿ ಮಹತ್ವದ ಪರಿಷ್ಕರಣೆ ಆಗಲಿದೆ ಎಂದು ನೌಕರರ ನಿರೀಕ್ಷೆ ಹೊಂದಿದ್ದಾರೆ.












Click it and Unblock the Notifications