ಅತ್ತೆಗೆ ಶೌಚಾಲಯ ನಿರ್ಮಿಸಲು 6 ಮೇಕೆ ಮಾರಿದ ಸೊಸೆ

Posted By:
Subscribe to Oneindia Kannada

ಕಾನ್ಪುರ (ಉತ್ತರಪ್ರದೇಶ), ಮೇ 15 : ಮಾನವೀಯತೆಯಿಲ್ಲದ್ದ ಸ್ವಾರ್ಥಕ್ಕೆ ಯಾವುದೇ ಜಾಗವಿರುವುದಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಮಹಿಳೆಯೋರ್ವಳು ತನ್ನ ಅತ್ತೆಗಾಗಿ ಶೌಚಾಲಯವನ್ನು ಕಟ್ಟಿಸಿಕೊಟ್ಟಿದ್ದಾರೆ. ಈ ಘಟನೆ ನಡೆದಿರುವುದು ಉತ್ತರಪ್ರದೇಶದ ಕಾನ್ಪುರದಲ್ಲಿ.

ಇದರಲ್ಲೇನಿದೆ ವಿಶೇಷ ಅನ್ನಿಸಬಹುದು. ಶೌಚಾಲಯ ಕಟ್ಟಿಸಿಕೊಟ್ಟ ಮಹಿಳೆಯ ವಯಸ್ಸು 80 ಮತ್ತು ಅವರ ಅತ್ತೆಯ ವಯಸ್ಸು ಕೇವಲ 102! ಇನ್ನೂ ಅಚ್ಚರಿಯ ಸಂಗತಿಯೇನೆಂದರೆ, 80 ವರ್ಷದ ಉದಾರಿ ಮಹಿಳೆ ತನ್ನ ಬಳಿಯಿದ್ದ 6 ಮೇಕೆಗಳನ್ನು ಮಾರಿ ಈ ಶೌಚಾಲಯವನ್ನು ಕಟ್ಟಿಸಿದ್ದಾರೆ.[ಬಹಿರ್ದೆಸೆ ಮುಕ್ತ ಭಾರತ : ಮೋದಿ ಸರಕಾರದ ರಿಪೋರ್ಟ್ ಕಾರ್ಡ್]

80-year-old woman sells 6 goats to build toilet for mother-in-law

102 ವರ್ಷದ ಮೊಮ್ಮಗ ರಾಮಪ್ರಕಾಶ್ ಪ್ರಕಾರ, ಅವರ ಅಜ್ಜಿ ಬಿದ್ದಿದ್ದರಿಂದ ಕಾಲನ್ನು ಮುರಿದುಕೊಂಡಿದ್ದರು. ಆಕೆಗೆ ಸರಿಯಾಗಿ ನಡೆದಾಡಲು ಆಗುತ್ತಿರಲಿಲ್ಲ. ಈ ಕಾರಣಕ್ಕಾಗಿ, ಅವರ ತಾಯಿ ತನ್ನ ಬಳಿಯಿದ್ದ 6 ಮೇಕೆಗಳನ್ನು ಮಾರಿ ಶೌಚಾಲಯವನ್ನು ಕಟ್ಟಿಸಿಕೊಟ್ಟರು.

ಈ ಮೂಲಕ ರಾಮಪ್ರಕಾಶ್ ಅವರ ಕುಟುಂಬ, ನರೇಂದ್ರ ಮೋದಿಯವರ ಸ್ವಚ್ಛ ಭಾರತ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದೆ. ದೇಶದ ಪ್ರತಿಯೊಬ್ಬರಿಗೂ ಶೌಚಾಲಯ ಲಭ್ಯವಾಗಬೇಕು, ಪ್ರತಿ ಜನರೂ ಸ್ವಚ್ಛತೆಯ ಹರಿಕಾರರಾಗಬೇಕು ಎಂಬುದು ಮೋದಿ ಸರಕಾರದ ಉದ್ದೇಶ.[ಸವಾಲಿದ್ದ ಮಾಲಂಗಿ ಗ್ರಾಮಪಂಚಾಯಿತಿಯಲ್ಲಿ ಮಹಿಳೆಯರ ಕಮಾಲ್!]

ಛತ್ತೀಸಗಢದ ಜಶಪುರ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ತಮ್ಮ ಬಳಿಯಿದ್ದ ಒಡವೆಗಳನ್ನು ಒತ್ತೆಯಿಟ್ಟು ಸನ್ನ ಗ್ರಾಮದಲ್ಲಿ 100 ಶೌಚಾಲಯಗಳನ್ನು ನಿರ್ಮಿಸಿ ಇಡೀ ಗ್ರಾಮಕ್ಕೆ ಮಾದರಿಯಾಗಿದ್ದರು. ಮೊದಲಿಗೆ 50 ಶೌಚಾಲಯ ನಿರ್ಮಿಸಿದ್ದ ಅವರು, ಹಣದ ಕೊರೆತೆಯಾದಾಗ ಒಡವೆ ಒತ್ತೆಯಿಟ್ಟು ನಂತರ ಎಲ್ಲ ಶೌಚಾಲಯಗಳ್ನು ನಿಗದಿತ ಸಮಯದಲ್ಲಿ ನಿರ್ಮಿಸಿದ್ದರು.

2019ರೊಳಗೆ ದೇಶದಲ್ಲಿ ಪ್ರತಿಯೊಬ್ಬನಿಗೂ ಶೌಚಾಲಯ ಸಿಗಬೇಕು, ಮಹಾತ್ಮಾ ಗಾಂಧೀಜಿಯವರ 150ನೇ ಹುಟ್ಟುಹಬ್ಬ ಬರುವುದರೊಳಗೆ ಭಾರತ ಬಹಿರ್ದೆಸೆ ಮುಕ್ತ ದೇಶವಾಗಬೇಕು ಎಂಬ ಕನಸನ್ನು ಮೋದಿ ಸರಕಾರ ಕಂಡಿದೆ. ಮುಂದಿನ 5 ವರ್ಷಗಳಲ್ಲಿ 10 ಕೋಟಿ ಶೌಚಾಲಯಗಳನ್ನು ನಿರ್ಮಿಸುವ ಯೋಜನೆಯನ್ನೂ ರೂಪಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
In an act of kindness which set example for rural households, an 80-year-old woman gifted a toilet to her 102-year-old mother-in-law by selling six goats in Kanpur, Uttar Pradesh.
Please Wait while comments are loading...