ಭಾರತದ ಮಾರುಕಟ್ಟೆ ನಿಯಂತ್ರಿಸುವ ಚೀನಾದ 8 ವಸ್ತುಗಳ ಬಹಿಷ್ಕಾರ ಸಾಧ್ಯ!

Posted By:
Subscribe to Oneindia Kannada

ಮೇಡ್ ಇನ್ ಇಂಡಿಯಾ, ಬ್ಯಾನ್ ಚೀನೀ ಮೆಟಿರಿಯಲ್ಸ್ ಎಂಬ ಕೂಗು ಹಲವು ದಿನದಿಂದ ಕೇಳಿಬರುತ್ತಿದೆ. ಅದರಲ್ಲೂ ಗಡಿಯಲ್ಲಿ ಚೀನಾದ ತಂಟೆ ಆರಂಭವಾದ ನಂತರವಂತೂ ಚೀನಿ ವಸ್ತುಗಳನ್ನು ನಿರ್ಬಂಧಿಸುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.

ಈ ಸಂಬಂಧ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ್ ನಲ್ಲಿ ಆಗಸ್ಟ್ 6 ರಂದು ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿಯೂ ಚರ್ಚೆ ನಡೆಯಿತು. ಸ್ವದೇಶಿ ಚಳವಳಿ ಆರಂಭಿಸುವ ಕುರಿತೂ ಒಕ್ಕೊರಲಿನಿಂದ ಬೆಂಬಲ ವ್ಯಕ್ತವಾಯಿತು. ಆದರೆ ಚೀನಾ ವಸ್ತುಗಳನ್ನು ನಿಜಕ್ಕೂ ನಿಷೇಧಿಸುವುದಕ್ಕೆ ಸಾಧ್ಯವಿದೆಯೇ? ಎಲ್ಲವನ್ನೂ ನಿಷೇಧಿಸುವುದು ಸಾಧ್ಯವಾಗದಿದ್ದರೂ, ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಸಾಧ್ಯವಿದೆ.

ಚೀನೀ ಸರಕು ಬಹಿಷ್ಕರಿಸಿದರೆ ಭಾರತಕ್ಕೇ ಹೆಚ್ಚು ಹೊಡೆತ!

ಭಾರತದ ಮಾರುಕಟ್ಟೆಗೆ ಆಮದಾಗಿ ಬರುವ ಬಹುಪಾಲು ನಿತ್ಯೋಪಯೋಗಿ ವಸ್ತುಗಳು ಚೀನಾದವು! ಆದರೆ ತೀರಾ ಅಗತ್ಯವಲ್ಲದೆ ಕೆಲವು ವಸ್ತುಗಳನ್ನು ನಾವು ನಿಷೇಧಿಸುವುದಕ್ಕೆ ಸಾಧ್ಯವಿದೆ.

ಮಂಗಳೂರಿನಲ್ಲಿ ಇಂದು ದೇಸಿ ರಾಖಿ ಗಳಿಗೆ ಹೆಚ್ಚಿನ ಬೇಡಿಕೆ

ಭಾರತದ ಮಾರುಕಟ್ಟೆಯನ್ನು ಹಿಡಿತದಲ್ಲಿಟ್ಟಿರುವರ ಚೀನಾದಿಂದ ರಫ್ತಾಗುವ ಈ ಪ್ರಮುಖ 8 ವಸ್ತುಗಳನ್ನು ನಾವು ಉಪಯೋಗಿಸದೆ ಇರಬಹುದು. ಅಥವಾ ಅವುಗಳ ಬದಲು ಸ್ವದೇಶಿ ಉತ್ಪಾದಿತ ವಸ್ತುವನ್ನೇ ಬಳಸಬಹುದು.

ಸ್ಮಾರ್ಟ್ ಫೋನ್ ಗಳು

ಸ್ಮಾರ್ಟ್ ಫೋನ್ ಗಳು

ಕಳೆದ ಎರಡೂವರೆ ದಶಕಗಳಲ್ಲಿ ಭಾರತದಲ್ಲಿ ಮಾರಾಟವಾಗುವ ಎರಡು ಸ್ಮಾರ್ಟ್ ಫೋನ್ ಗಳ ಪೈಕಿ ಒಂದು ಚೀನಾದ್ದಾಗಿದೆ! ಸ್ಯಾಮ್ಸಂಗ್, ಗ್ಸಯೋಮಿ, ಲೆನೆವೊ, ಒಪ್ಪೋ, ವಿವೋ ಮಾಡೆಲ್ ನ ಫೋನ್ ಗಳೆಲ್ಲವೂ ಚೀನಾದಿಂದಲೇ ತಯಾರಾಗುವಂಥವು! ಇವುಗಳ ಉಪಯೋಗ ನಿಲ್ಲಿಸುವುದಕ್ಕೆ ಸಾಧ್ಯವಿಲ್ಲವೇ?

ಸ್ಟೀಲ್

ಸ್ಟೀಲ್

ಭಾರತಕ್ಕೆ ಅಗತ್ಯವಿರುವಷ್ಟು ಸ್ಟೀಲ್ ಅನ್ನು ಭಾರತವೇ ಉತ್ಪಾದನೆ ಮಾಡುವುದಕ್ಕೆ ಸಾಧ್ಯವಿಲ್ಲದ ಕಾರಣ ಚೀನಾದಿಂದ ಆಮದುಮಾಡಿಕೊಳ್ಳಲಾಗುತ್ತದೆ. ಭಾರತ ಆಮದು ಮಾಡಿಕೊಳ್ಳುವ ಸ್ಟೀಲ್ ನಲ್ಲಿ ಮೂರನೇ ಭಾಗ ಚೀನಾದಿಂದ ರಫ್ತಾಗುತ್ತದೆ. ಆದ್ದರಿಂದ ಸ್ಟೀಲ್ ಉತ್ಪಾದನೆಯತ್ತ ಅಥವಾ ಸ್ಟೀಲ್ ಗೆ ಪರ್ಯಾಯ ಹುಡುಕುವತ್ತ ಭಾರತ ಚಿಂತನೆ ನಡೆಸಬೇಕಿದೆ.

ಬೊಂಬೆಗಳು

ಬೊಂಬೆಗಳು

ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರುವ ಶೇ. 80 ರಷ್ಟು ಬೊಂಬೆಗಳು ಚೀನಾ ಮತ್ತು ಇಟಲಿಯಿಂದಲೇ ರಫ್ತಾಗುವಂಥವು. 2001 ರಿಂದ 2012ರವರೆಗೆ ಭಾರತದ ಆರುಕಟ್ಟೆಗೆ ಬರುವ ಬೊಂಬೆಗಳ ಸಂಖ್ಯೆ ಪ್ರತಿ ವರ್ಷವೂ ಶೇ. 30ರಷ್ಟಾ ರಷ್ಟು. ಈ ಬೊಂಬೆಗಳು ನಮಗೆ ನಿಜಕ್ಕೂ ಅಗತ್ಯವೇ?

ಸೌರ ಉಪಕರಣ

ಸೌರ ಉಪಕರಣ

ಭಾರತಕ್ಕೆ ಪರ್ಯಾಯ ಶಕ್ತಿಯ ಮೂಲಗಳನ್ನು ಕಂಡುಕೊಳ್ಳಲು ಮತ್ತು ಅವುಗಳ ಸಮರ್ಪಕ ಬಳಕೆಗಾಗಿ ಸೌರ ಉಪಕರಣಗಳ ಅಗತ್ಯ ಹೆಚ್ಚಿದೆ. ಇವುಗಳಿಗಾಗಿಯೂ ಭಾರತ ಅವಲಂಬಿಸಿರುವುವದು ಚೀನಾವನ್ನೇ. ಶೇ.87 ರಷ್ಟು ಸೋಲಾರ್ ಉಪಕರಣಗಳನ್ನು ಚೀನಾ, ಭಾರತಕ್ಕೆ ರಫ್ತುಮಾಡುತ್ತದೆ. ಇದಕ್ಕೂ ಭಾರತ ಬದಲಿ ಉಪಅಯ ಹುಡುಕಬೇಕಿದೆ.

ಎಲ್ ಇಡಿ

ಎಲ್ ಇಡಿ

ವಿದ್ಯುತ್ ಉಳಿಸುವುದಕ್ಕಾಗಿ ಭಾರತೀಯ ಸರ್ಕಾರ ಎಲ್ ಇಡಿ ಬಲ್ಬ್ ಬಳಸುವಂತೆ ಕರೆ ನೀಡಿದೆ. ಆದರೆ ಎಲ್ ಇಡಿ ಬಲ್ಬ್ ಗಳ ಹೆಚ್ಚು ಪಾಲು ಚೀನಾದಿಂದಲೇ ರಫ್ತಾಗುತ್ತಿವೆ. ಅವುಗಳನ್ನು ಹೆಚ್ಚು ಹೆಚ್ಚು ಭಾರತದಲ್ಲೇ ಉತ್ಪಾದಿಸುವುದರತ್ತ ಗಮನ ನೀಡಬೇಕಿದೆ.

ಇಲೆಕ್ಟ್ರಾನಿಕ್ ವಸ್ತುಗಳು

ಇಲೆಕ್ಟ್ರಾನಿಕ್ ವಸ್ತುಗಳು

ಭಾರತಕ್ಕೆ ಬೇರೆ ಬೇರೆ ದೇಶಗಳಿಂದ ರಫ್ತಾಗುವ ಇಲೆಕ್ಟ್ರಾನಿಕ್ ಉಪಕರಣಗಳಲ್ಲಿ ಶೇ.20 ರಷ್ಟು ಉತ್ಪನ್ನಗಳು ಚೀನಾವೊಂದರಿಂದಲೇ ಬರುತ್ತವೆ. ಈ ಪರಿ ಅವಲಂಬನೆ ಬೇಕೆ?

ಔಷಧಗಳು

ಔಷಧಗಳು

ಸಾಮಾನ್ಯ ನೆಗಡಿಯಿಂದ ಹಿಡಿದು, ಹೃದ್ರೋಗದಂಥ ಗಂಭೀರ ಕಾಯಿಲೆಗಳಿಗೂ ಅಗತ್ಯವಿರುವ ಔಷಧಗಳಿಗೆ ಕಚ್ಚಾವಸ್ತು ಬರುವುದೇ ಚೀನಾದಿಂದ. ಈಗಾಗಲೇ ಕೇಂದ್ರ ಸರ್ಕಾರ ಚೀನಾ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಂಡಿದ್ದರೂ ಸಂಪೂರ್ಣ ಬಿಟ್ಟುಬಿಡುವುದು ಕಷ್ಟವೇ.

Who Will Win If ώάŕ Starts Between India And China | Oneindia Kannada
ಪಟಾಕಿಗಳು/ ಅಗರಬತ್ತಿಗಳು:

ಪಟಾಕಿಗಳು/ ಅಗರಬತ್ತಿಗಳು:

ಪಟಾಕಿಗಳು/ ಅಗರಬತ್ತಿಗಳು: ಸಂಭ್ರಮ ಆಚರಿಸುವುದಕ್ಕಾಗಿ ಹೊಡೆಯುವ ಬಹುಪಾಲು ಎಲ್ಲ ಪಟಾಕಿಗಳೂ ಚೀನಾದಿಂದಲೇ ಬರುವಂಥವು. ಜೊತೆಗೆ ದಿನ ಬೆಳಿಗ್ಗೆ ದೇವರ ಮುಂದೆ ಹಚ್ಚಿಡುವ ಹಚ್ಚುವ ಅಗರಬತ್ತಿಗಳು ಸಹ ಚೀನಾದಿಂದಲೇ ಬರುವಂಥವು! ಇವುಗಳ ಮೇಲಂತೂ ಚೀನಾ ಅವಲಂಬನೆ ಅನಗತ್ಯ ಎಂಬುದು ಹಲವರ ಭಾವನೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India is depending on China for various things. Here are 8 things we can easily give up, which are exported by China to India.
Please Wait while comments are loading...