10 ದಿನಗಳಲ್ಲಿ 8 ರೈತರ ಆತ್ಮಹತ್ಯೆ: ಒಡಿಶಾದಲ್ಲಿ ಅನ್ನದಾತನ ಅರಣ್ಯರೋದನ

ಬರ್ಘರ್(ಒಡಿಶಾ), ನವೆಂಬರ್ 7: ಒಡಿಶಾದ ಬರ್ಘರ್ ಎಂಬಲ್ಲಿ ಕಳೆದ ಹತ್ತು ದಿನಗಳಲ್ಲಿ ಒಟ್ಟು 8 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಅನ್ನದಾತನ ಅರಣ್ಯರೋದನ ಮುಗಿಲುಮುಟ್ಟಿದೆ.

ಬೆಳೆನಷ್ಟದ ಹಿನ್ನೆಲೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ವರದಿಯೊಂದು ತಿಳಿಸಿದೆ. ರೈತರ ಅವ್ಯಾಹತ ಆತ್ಮಹತ್ಯೆಗೆ ಸಂಬಂಧಿಸಿದಂತೆ ಬಿಜು ಜನತಅದಳ(ಬಜೆಡಿ) ನೇತೃತ್ವದ ಒಡಿಶಾ ಸರ್ಕಅರವನ್ನು ಕೇಂದ್ರ ಸರ್ಕಾರ ತರಾಟೆಗೆ ತೆಗೆದುಕೊಂಡಿದೆ.

8 farmers commit suicide in Odisha in 10 days

ಬೆಳೆ ನಷ್ಟದಿಂದ ಪರಿತಪಿಸುತ್ತಿರುವ ರೈತರಿಗೆ ಸರ್ಕಾರ ಪರಿಹಾರ ನೀಡುತ್ತದೆ, ಆದ್ದರಿಂದ ದಯವಿಟ್ಟು ಯಾವುದೇ ರೈತರೂ ದುಡುಕಬಾರದೆಂದು ಇಲ್ಲಿನ ಸರ್ಕಾರ ಕೇಳಿಕೊಂಡರೂ ಆತ್ಮಹತ್ಯೆಯ ಪ್ರಮಾಣ ತಗ್ಗುತ್ತಿಲ್ಲ. ಈಗಾಗಲೇ ಆತ್ಮಹತ್ಯೆ ಮಾಡಿಕೊಂಡವರ ಕುಟುಂಬಕ್ಕೂ ಪರಿಹಾರ ಘೋಷಿಸಲಾಗಿದೆ.

ಕಳೆದ ಹತ್ತೇ ದಿನಗಳಲ್ಲಿ ಎಂಟು ರೈತರು ಆತ್ಮಹತ್ಯೆಗೆ ಶರಣಾಗಿರುವುದು ಒಡಿಶಾ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+