ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛತ್ತೀಸ್ ಗಢದಲ್ಲಿ ನಕ್ಸಲ್ ದಾಳಿಗೆ 9 ಸಿಆರ್‌ಪಿಎಫ್ ಸೈನಿಕರು ಬಲಿ

By Sachhidananda Acharya
|
Google Oneindia Kannada News

ಸುಕ್ಮಾ, ಮಾರ್ಚ್ 13: ಛತ್ತೀಸ್ ಗಢ ರಾಜ್ಯದ ನಕ್ಸಲ್ ಪೀಡಿತ ಸುಕ್ಮಾ ಜಿಲ್ಲೆಯಲ್ಲಿ 9 ಜನ ಸಿಆರ್‌ಪಿಎಫ್ ಯೋಧರು ಹತ್ಯೆಯಾಗಿದ್ದಾರೆ. ಇಲ್ಲಿನ ಕಿಸ್ತರಾಮ್ ಪ್ರದೇಶದಲ್ಲಿ ಸುಧಾರಿತ ಸ್ಪೋಟಕಗಳನ್ನಿಟ್ಟು ನಕ್ಸಲರು ಸೈನಿಕರನ್ನು ಕೊಂದಿದ್ದಾರೆ.

ಜೀವ ಕಳೆದುಕೊಂಡವರೆಲ್ಲರೂ ಸಿಆರ್‌ಪಿಎಫ್ 212ನೇ ಬೆಟಾಲಿಯನ್ನಿನ ಸದಸ್ಯರಾಗಿದ್ದಾರೆ. ಘಟನೆಯಲ್ಲಿ 6 ಸೈನಿಕರಿಗೆ ಗಾಯಗಳಾಗಿದ್ದು, ಇವರಲ್ಲಿ 4 ಜನರ ಪರಿಸ್ಥಿತಿ ಚಿಂತಾಜನಕವಾಗಿದೆ.

ಸುಕ್ಮಾ ಜಿಲ್ಲೆಯ ಕಿಸ್ತರಾಮ್ ನಿಂದ ಪಲೋಡಿಗೆ ಯೋಧರ ತಂಡವೊಂದು ಗಸ್ತಿಗೆ ತೆರಳುತ್ತಿತ್ತು. ಈ ಯೋಧರು ನೆಲಬಾಂಬ್ ಗೆ ನಿರೋಧಕ ವಾಹನದಲ್ಲಿ ತೆರಳುತ್ತಿದ್ದರು. ಆದರೆ ಸುಧಾರಿತ ಸ್ಪೋಟಕಗಳನ್ನಿಟ್ಟ ನಕ್ಸಲರು ವಾಹನವನ್ನು ಸ್ಪೋಟಿಸಿದ್ದಾರೆ ಎಂದು ನಕ್ಸಲ್ ನಿಗ್ರಹ ಪಡೆಯ ವಿಶೇಷ ಡಿಜಿ ಡಿಎಂ ಅವಸ್ಥಿ ಹೇಳಿದ್ದಾರೆ.

8 CRPF personnel lost lives in Naxals attack at Chhattisgarh's Sukma.

ಸ್ಥಳಕ್ಕೆ ಹೆಚ್ಚಿನ ಭದ್ರತಾ ಪಡೆಗಳು ತೆರಳಿದ್ದು, ಸ್ಥಳದಲ್ಲಿ ಯಾವುದೇ ಗುಂಡಿನ ಚಕಮಕಿಗಳು ನಡೆಯುತ್ತಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

English summary
Eight personnel of CRPF's 212 battalion lost their lives in an IED blast by Naxals in Kistaram area of Chhattisgarh's Sukma.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X