ಗುಜರಾತ್ ಚುನಾವಣಾ ಅಖಾಡದಲ್ಲಿ ಮದ್ಯ, ನಗದು, ಚಿನ್ನದ್ದೇ ಆಟ

Subscribe to Oneindia Kannada

ಅಹಮದಾಬಾದ್, ನವೆಂಬರ್ 28: ಗುಜರಾತ್ ಚುನಾವಣಾ ಅಖಾಡದಲ್ಲಿ ಮತದಾರರಿಗೆ ಆಮಿಷ ಒಡ್ಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ದೊಡ್ಡ ಪ್ರಮಾಣದ ಮದ್ಯ, ನಗದು, ಚಿನ್ನವನ್ನು ಚುನಾವಣಾ ಆಯೋಗ ವಶಕ್ಕೆ ಪಡೆದುಕೊಂಡಿದೆ.

ಗುಜರಾತ್ ನಲ್ಲಿ ಇಲ್ಲಿಯವರೆಗೆ 1.67 ಕೋಟಿ ರೂಪಾಯಿ ಅಕ್ರಮ ಹಣವನ್ನು ಚುನಾವಣಾ ಆಯೋಗ ಮುಟ್ಟುಗೋಲು ಹಾಕಿಕೊಂಡಿದೆ. ಜತೆಗೆ 8.88 ಲಕ್ಷ ಲೀಟರ್ ಮದ್ಯವನ್ನೂ ವಶಕ್ಕೆ ಪಡೆಯಲಾಗಿದೆ. ಇವುಗಳ ಮೌಲ್ಯ 20.07 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

8.88 lakh litres of liquor, 27 kg gold seized in Gujarat

ಇದಲ್ಲದೆ ಮತದಾರರಿಗೆ ಚಿನ್ನಾಭರಣಗಳನ್ನು ಹಂಚುವ ಕೆಲಸವೂ ನಿರಂತರವಾಗಿ ನಡೆಯುತ್ತಿದ್ದು 27 ಕೆಜಿ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಇದರ ಜತೆಗೆ ಸುಮಾರು 8.13 ಕೋಟಿ ರುಪಾಯಿ ಮೌಲ್ಯದ ಇತರ ಬೆಲೆಬಾಳುವ ವಸ್ತುಗಳನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಇಸಿ ಅಧಿಕಾರಿಗಳು ಅಂದಾಜಿಸಿದ್ದಾರೆ.

ಇದು ನವೆಂಬರ್ 28ರವರೆಗೆ ವಶಕ್ಕೆ ಪಡೆದುಕೊಂಡ ವಸ್ತುಗಳಾಗಿವೆ. ಚುನಾವಣೆ ಈಗಷ್ಟೇ ತನ್ನ ಕಾವು ಪಡೆದುಕೊಳ್ಳುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಹಣ, ಚಿನ್ನ ಮತ್ತು ಮದ್ಯದ ಸರಬರಾಜು ಗುಜರಾತ್ ನಲ್ಲಿ ನಿರೀಕ್ಷಿಸಬಹುದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Gujarat assembly elections 2017: Seizures in Gujarat till November 28 is Rs 167.63 lakh cash, 8.88 lakh litres of liquor worth Rs 20.07 crore, 27 kg gold and other precious metals worth Rs 8.13 crore.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ