• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸರ್ಕಾರಿ ನೌಕರರಿಗೆ ಶುಭಸುದ್ದಿ: ನೈಟ್ ಡ್ಯೂಟಿಗೆ ಹೆಚ್ಚಿನ ಭತ್ಯೆ

|

ನವದೆಹಲಿ, ಜುಲೈ 21: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ರಾತ್ರಿ ಪಾಳಿ ಕಾರ್ಯ ನಿರ್ವಹಿಸುವವರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ. 7ನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ರಾತ್ರಿ ಕರ್ತವ್ಯ ಭತ್ಯೆ ಪರಿಚಯಿಸಲಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಭತ್ಯೆ ನಿರೀಕ್ಷಿಸಬಹುದಾಗಿದೆ.

ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಕರ್ತವ್ಯ ನಿರ್ವಹಿಸುವವರನ್ನು ರಾತ್ರಿ ಪಾಳೆಯ ಭತ್ಯೆ Night Duty Allowancege ಗೆ ಪರಿಗಣಿಸಲಾಗುತ್ತದೆ. ಜುಲೈ 1 ರಿಂದ ಅನ್ವಯವಾಗಲಿದ್ದು, ಜುಲೈ 13ರಂದು ಈ ಕುರಿತಂತೆ ಕೇಂದ್ರ ಸಿಬ್ಬಂದಿ ಹಾಗೂ ತರಬೇತಿ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.

ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳಕ್ಕೆ ಮೋದಿ ಸರ್ಕಾರ ಅಸ್ತು

ಸದ್ಯದ ಕೇಂದ್ರ ಸರ್ಕಾರದ ನೀತಿಯಂತೆ ಗ್ರೇಡ್ ಆಧಾರಿತವಾಗಿ ರಾತ್ರಿ ಕರ್ತವ್ಯ ನಿರ್ವಹಿಸುವವರಿಗೆ ಮೂಲ ವೇತನ ಜೊತೆಗೆ ನೈಟ್ ಡ್ಯೂಟಿ ಭತ್ಯೆ ಸೇರಿ ಪ್ರತಿ ತಿಂಗಳು 43, 600 ರು ಎಂದು ನಿಗದಿಪಡಿಸಲಾಗಿದೆ. ಪ್ರತಿ ಗಂಟೆಯ ಆಧಾರ ಮೇಲೆ ಈ ಭತ್ಯೆ ಪಾವತಿಯಾಗುತ್ತದೆ.

ಮೂಲ ವೇತನ ಮತ್ತು ಡಿಎ ಮೊತ್ತವನ್ನು 200 (ಬಿಪಿ + ಡಿಎ / 200) ರಿಂದ ಭಾಗಿಸುತ್ತದೆ. ಏಳನೇ ವೇತನ ಆಯೋಗದ ಆಧಾರದ ಮೇಲೆ ಮೂಲ ವೇತನ ಹಾಗೂ ಭತ್ಯೆಗಳು ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಯ ಸಿಬ್ಬಂದಿಗಳಿಗೂ ಅನ್ವಯವಾಗಲಿವೆ.

English summary
7th Pay Commission Latest: the Central government is going to increase salary of Central government employees who perform night duty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X