7th Pay Commission: ಸರ್ಕಾರಿ ನೌಕರರಿಗೆ ಶಾಕ್: 18 ತಿಂಗಳ 'ಡಿಎ' ಹೆಚ್ಚಳದ ಬಾಕಿ ಬಿಡುಗಡೆ ಇಲ್ಲ, ಅಪ್ಡೇಟ್ ಮಾಹಿತಿ

ನವದೆಹಲಿ, ಆಗಸ್ಟ್ 21: ಕೇಂದ್ರ ಸರ್ಕಾರಿ ನೌಕರರು ಸದರಿ ವರ್ಷದ ಎರಡನೇ ತುಟ್ಟಿಭತ್ಯೆ ಅಂದರೆ ಜುಲೈನ ತುಟ್ಟಿಭತ್ಯೆ (DA Hike) ಹೆಚ್ಚಳವನ್ನು ಸೆಪ್ಟಂಬರ್‌ನಲ್ಲಿ ಪಡೆಯುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಶೇಕಡಾ 3ರಷ್ಟು 'ಡಿಎ' ಮತ್ತು 'ಡಿಆರ್' ಹೆಚ್ಚಳ ಘೋಷಿಸಲಿದೆ. ಆದರೆ ನೌಕರರಿಗೆ ಸಿಗಬೇಕಿದ್ದ 18 ತಿಂಗಳ ತುಟ್ಟಿಭತ್ಯೆ ಹೆಚ್ಚಳ ಬಿಡುಗಡೆ ಇಲ್ಲ ಎಂದು ಸರ್ಕಾರ ತಿಳಿಸಿದೆ. ಈ ಮೂಲಕ ನೌಕರರಿಗೆ ಶಾಕ್ ನೀಡಿದೆ.

8ನೇ ವೇತನ ಆಯೋಗ ಜಾರಿ ಆಗಬೇಕಿದೆ. ಹಾಲಿ ಇರುವ 7ನೇ ವೇತನ ಆಯೋಗದಡಿಯೇ ಕೇಂದ್ರ ಸರಕಾರ ಮುಂದಿನ ಸೆಪ್ಟಂಬರ್ನಲ್ಲಿ ಶೇ.3ರಷ್ಟು ತುಟ್ಟಿಭತ್ಯೆ ಏರಿಕೆ ಮಾಡಲಿದೆ. ಆಗ ತುಟ್ಟಿಭತ್ಯ ಪ್ರಮಾಣ ಶೇಕಡಾ 53ರಷ್ಟಾಗಲಿದೆ. ಆದರೆ ಇದೇ ನೌಕರರಿಗೆ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಸ್ಥಗಿತಗೊಳಿಸಿದ್ದ ತುಟ್ಟಿಭತ್ಯೆ (ಡಿಎ) ಹಾಗೂ ತುಟ್ಟಿಭತ್ಯೆ ಪರಿಹಾರ (ಡಿಆರ್) 18 ತಿಂಗಳ ಬಾಕಿ ಹಣ ಬಿಡುಗಡೆ ಮಾಡುವ ಸಾಧ್ಯತೆ ಇಲ್ಲ ಎಂದು ಇತ್ತೀಚೆಗೆ ತಿಳಿದು ಬಂದಿದೆ.

7th Pay Commission Govt Employees Pending 18 Months DA Hike Will Not Released Why

ಮುಂಗಾರು ಸಂಸತ್ತಿನ ಅಧಿವೇಶನದಲ್ಲಿ ಸದಸ್ಯರು ಡಿಎ ಬಾಕಿ ಬಿಡುಗಡೆ ಕುರಿತು ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು, ಬಾಕಿ ಹಣ ಬಿಡುಗಡೆ ಅಸಾಧ್ಯ. ಕೊರೋನಾ ಸಂದರ್ಭದಲ್ಲಿ ಏಕಾಏಕಿ ತಡೆಹಿಡಿಯಲಾದ ಕೇಂದ್ರ ಸರ್ಕಾರಿ ನೌಕರರು/ಪಿಂಚಣಿದಾರರ 18 ತಿಂಗಳ ತುಟ್ಟಿಭತ್ಯೆ ಹಾಗೂ ತುಟ್ಟಿ ಪರಿಹಾರವನ್ನು ಬಿಡುಗಡೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರಿ ನೌಕರರು ಅಸಮಾಧಾನ

ಸರ್ಕಾರದ ಈ ನಿರ್ಧಾರದಿಂದಾಗಿ ಇದುವರೆಗೂ ಬಾಕಿ ಹೆಚ್ಚಳದ ನಿರೀಕ್ಷೆಯಲ್ಲಿದ್ದ ನೌಕರರಿಗೆ ನಿರಾಸೆಯಾಗಿದೆ. ಈ ಕುರಿತು ಸರ್ಕಾರದ ವಿರುದ್ಧ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2020 ಜನವರಿ 01 ಮತ್ತು ಜುಲೈ 01 ಹಾಗೂ 2021 ಜನವರಿ 01ರಿಂದ ಕೇಂದ್ರ ಸರ್ಕಾರಿ ನೌಕರರು/ಪಿಂಚಣಿದಾರರಿಗೆ ಮೂರು ಕಂತುಗಳ ಡಿಎ, ಡಿಆರ್ ಸ್ಥಗಿತಗೊಳಿಸಿ, ಕೊವಿಡ್ ಕಾರಣ ನೀಡಿತ್ತು. ಹಣಕಾಸಿನ ಮೇಲಿನ ಒತ್ತಡ ಕಡಿಮೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿತ್ತು. ಇದೀಗ ಎಲ್ಲವು ಸರಿಯಾಗಿದ್ದು, ಎಡಿ ಮತ್ತು ಡಿಆರ್ ‌ಬಾಕಿ ಕಾರ್ಯಸಾಧುವಲ್ಲ ಎಂದರು.

7th Pay Commission Govt Employees Pending 18 Months DA Hike Will Not Released Why

ಸೆಪ್ಟೆಂಬರ್ ಡಿಎ ಹೆಚ್ಚಿಸಿ ನಿರ್ಧಾರ ಪ್ರಕಟ?

ಸದ್ಯ ಕೇಂದ್ರ ಸರ್ಕಾರವು ಮುಂದಿನ ಸೆಪ್ಟೆಂಬರ್ 2024ರಲ್ಲಿ ತನ್ನ ನೌಕರರ ತುಟ್ಟಿಭತ್ಯೆ (ಡಿಎ) ಮತ್ತು ತುಟ್ಟಿಭತ್ಯೆ ಪರಿಹಾರ (ಡಿಆರ್) ವನ್ನು ಶೇಕಡಾ 3 ರಷ್ಟು ಏರಿಕೆ ಮಾಡಿ ನಿರ್ಧಾರ ಪ್ರಕಟಿಸಲಿದೆ. ಇದು ಜುಲೈ 1ರಿಂದ ಜಾರಿಗೆ ಬರಲಿದೆ. ನೌಕರರು ಈಗಾಗಲೇ ಈ ವರ್ಷದ ಮೊದಲ ಡಿಎ ಹೆಚ್ಚಳವನ್ನು ಜನವರಿ 1ರಿಂದ ಅನ್ವಯವಾಗುವಂತೆ ಪಡೆದಿದ್ದಾರೆ.

ತುಟ್ಟಿಭತ್ಯೆ ಶೇಕಡಾ 50 ತಲುಪಿದರೂ ಮೂಲವೇತನದೊಂದಿಗೆ ವಿಲೀನಗೊಳ್ಳುವುದಿಲ್ಲ. 8ನೇ ವೇತನ ಆಯೋಗ ಜಾರಿ ಆಗುವವರಿಗೆ ಇದೆಲ್ಲವು ಹಾಗೆಯೇ ಮುಂದುವರಿಯಲಿದೆ. ಪ್ರತಿ ವರ್ಷ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಹಾಗೂ ತುಟ್ಟಿ ಪರಿಹಾರಗಳು ಜನವರಿ ಹಾಗೂ ಜುಲೈ ನಲ್ಲಿ ಪ್ರತಿ ಆರು ತಿಂಗಳಿಗೆ ಒಮ್ಮೆಯಂತೆ ವಾಷಿರ್ಕವಾಗಿ ಎರಡು ಭಾರಿ ಏರಿಕೆ ಆಗುತ್ತದೆ.

2024 ಜನವರಿಯಿಂದ ಅನ್ವಯವಾಗುವಂತೆ ತುಟ್ಟಿಭತ್ಯೆಯಲ್ಲಿ ಶೇಕಡಾ 4ರಷ್ಟು ಏರಿಕೆ ಮಾಡಿ ಮಾರ್ಚ್ ನಲ್ಲಿ ಆದೇಶಿಸಿತ್ತು. ಆಗ ನೌಕರರ ತುಟ್ಟಿಭತ್ಯೆ ಶೇಕಡಾ 50 ರಷ್ಟು ತಲುಪಿತ್ತು.

ಸದ್ಯ ಏಳನೇ ವೇತನ ಆಯೋಗ ಜಾರಿಯಲ್ಲಿದೆ. ಇನ್ನೂ ಎಂಟನೇ ವೇತನ ಆಯೋಗ ಜಾರಿಯಾಗಬೇಕು. ಅದು ಸರ್ಕಾರದಿಂದ ಅನುಷ್ಠಾನವಾದ ಬಳಿಕ ಏನೆಲ್ಲ ಸೌಲಭ್ಯಗಳು ಸಿಗಲಿವೆ. ಯಾವೆಲ್ಲ ವೇತನಗಳು ಹೆಚ್ಚಾಗಲಿವ ಎಂದು ಸರ್ಕಾರಿ ನೌಕರರು ಕಾತರರಿಂದ ಕಾಯುತ್ತಿದ್ದಾರೆ. ಅಲ್ಲದೇ ಈ ಹೊಸ ವೇತನ ಆಯೋಗ ಜಾರಿಯಾಗಲಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+