7.58 ಲಕ್ಷ ಶಿಕ್ಷಕರಿಗೆ ವೇತನ ಏರಿಕೆ ಘೋಷಿಸಿದ ಮೋದಿ ಸರ್ಕಾರ

ನವದೆಹಲಿ, ಅಕ್ಟೋಬರ್ 11: ಕೇಂದ್ರ ಸರ್ಕಾರಿ ನೌಕರರ ಮೂಲ ವೇತನ ಹೆಚ್ಚಳದ ಶುಭ ಸುದ್ದಿ ನೀಡಿದ್ದ ಮೋದಿ ಸರ್ಕಾರ ಈಗ ಶಿಕ್ಷಕ ವರ್ಗಕ್ಕೆ ದೀಪಾವಳಿ ಕೊಡುಗೆ ಘೋಷಿಸಿದೆ.

7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಕೇಂದ್ರ ಹಾಗೂ ರಾಜ್ಯ ವಿಶ್ವವಿದ್ಯಾಲಯದ ಶಿಕ್ಷಕರಿಗೆ ವೇತನ ಹೆಚ್ಚಳದ ಕೊಡುಗೆಯನ್ನು ನೀಡಲು ಕೇಂದ್ರ ಕ್ಯಾಬಿನೆಟ್ ಬುಧವಾರದಂದು ಒಪ್ಪಿಗೆ ಸೂಚಿಸಿದೆ.

7th Pay Commission, Govt approves pay hike for college teachers

'7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಕೇಂದ್ರ ಹಾಗೂ ರಾಜ್ಯ ವಿವಿಗಳಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ' ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ಪ್ರಕಾಶ್ ಜಾವಡೆಕರ್ ಅವರು ಹೇಳಿದರು. ಮೋದಿ ಸರ್ಕಾರದ ಈ ನಿರ್ಧಾರದಿಂದ ಸುಮಾರು 7.58 ಲಕ್ಷಕ್ಕೂ ಅಧಿಕ ಶಿಕ್ಷಕ ವರ್ಗಕ್ಕೆ ಲಾಭವಾಗಲಿದೆ.

7ನೇ ವೇತನ ಆಯೋಗದ ಅಡಿಯಲ್ಲಿ ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರ ಮೂಲ ವೇತನ ಹೆಚ್ಚಳ ಮಾಡಲು ಸರ್ಕಾರ ಮುಂದಾಗಿದೆ ಎಂಬ ಸುದ್ದಿ ಬಂದಿದೆ.

ಈ ನಡುವೆ ಎಸ್ ಪಿಜಿ ಅಧಿಕಾರಿಗಳ ಕಾರ್ಯ ಅವಧಿಯ ವೇಳೆಯ ವಾರ್ಷಿಕ ಸಂಬಳ 27,800 ರು ಹಾಗೂ ಮಿಕ್ಕ ವೇಳೆ 21,225 ರು ಡ್ರೆಸ್ ಭತ್ಯೆ ನೀಡಲು ಸರ್ಕಾರ ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+