ಉತ್ತಮ ಆರೋಗ್ಯಕ್ಕಾಗಿ ಹಿಡಿಗಟ್ಟಲೆ ಮರಳು ತಿನ್ನುವ ಮುದುಕಿ!

Posted By: Chethan
Subscribe to Oneindia Kannada

ವಾರಣಾಸಿ, ಜ. 10: ಏನಾದರೂ ತಪ್ಪು ಮಾಡಿದಾಗ ದೊಡ್ಡವರು ಹೊಟ್ಟೆಗೇನ್ ಅನ್ನ ತಿಂತಿಯೋ, ಮಣ್ಣು ತಿಂತಿಯೋ ಅಂತ ಕೇಳುವುದು ರೂಢಿ.

ಆದ್ರೆ, ನಂಬಿ, ಇಲ್ಲೊಬ್ಬ ಮಾರಾಯ್ತಿ ಅಕ್ಷರಶಃ ಮರಳು ತಿನ್ನುತ್ತಾರೆ. ಅಷ್ಟೇ ಅಲ್ಲ, ದಿನಾ ಮರಳು ತಿಂದರೂ ಇನ್ನೂ ಗಟ್ಟಿಯಾಗೇ ಇದ್ದಾರೆ. ಇವರನ್ನು ಯಾವುದೇ ರೋಗ, ರುಜಿನೆ, ಸೋಂಕು ಕಾಡಿಲ್ಲ. ಅವರ ಕುಟುಂಬದ ಕೆಲವರ ವಿರೋಧದ ನಡುವೆಯೂ ಇವರ ಈ ಮರಳು ಕಳ್ಳಸಾಗಣೆ ನಿರಾತಂಕವಾಗಿ ಸಾಗುತ್ತಿದೆ !!

ಹೀಗೆ, ಮನಸಾರೆ ಮರಳು ತಿನ್ನುವ ಈಕೆಯ ಹೆಸರು ಕುಸ್ಮಾವತಿ. ವಾರಣಾಸಿಯವರೇ. ಇವರಿಗೀಗ 78 ವರ್ಷ. ಈ ಇಳಿವಯಸ್ಸಿನಲ್ಲೂ ತಾನೊಂದಿಷ್ಟು ಲವಲವಿಕೆಯಿಂದಿದ್ದರೆ ಅದಕ್ಕೆ ಕಾರಣ ಮರಳು ಎನ್ನುತ್ತಾರೆ.

78 old woman named Kusma vati eats sand every day for good health!

"ಅಯ್ಯೋ ಅಜ್ಜಿ, ಈ ಅರಳು, ಮರಳು ವಯಸ್ಸಲ್ಲಿ ನಿನಗ್ಯಾಕೆ ಮರಳು ತಿನ್ನೋ ಚಟ?" ಅಂತ ಕೇಳಿದರೆ, ರೀ, ನಾನು ಮರಳು ತಿಂತಿರೋದು ಈಗಲ್ಲ. ಸುಮಾರು 60 ವರ್ಷಗಳಿಂದ ತಿಂತಾ ಇದೀನಿ. ಏನಾದ್ರೂ ಆಗಿದ್ದರೆ ಇಷ್ಟು ವರ್ಷಗಳಲ್ಲಿ ಆಗಬೇಕಿತ್ತಲ್ವಾ? ಈವರೆಗೆ ಯಾವುದೇ ಬಾಯಿ, ಹಲ್ಲು, ವಸಡು ಅಥವಾ ಉದರ ಸಂಬಂಧಿ ಸಮಸ್ಯೆ, ರೋಗಗಳು ಕಾಣಿಸಿಕೊಂಡಿಲ್ಲ" ಎಂದು ಹೇಳಿ ದಂಗು ಬಡಿಸುತ್ತಾರೆ ಇವರು !

"ಈ ಬಗ್ಗೆ ವೈದ್ಯರ ಬಳಿ ಏನಾದರೂ ಕೇಳಿದ್ದೀರಾ" ಎಂಬ ಪ್ರಶ್ನೆಗೆ ಅವರ ಕುಟುಂಬದವರು, "ಏನಾದ್ರೂ ಸಮಸ್ಯೆ ಬಂದ್ರೆ ತಾನೇ ವೈದ್ಯರ ಬಳಿಗೆ ಹೋಗೋದು? ದಿನ ನಿತ್ಯ ಈ ವಯಸ್ಸಿನವರು ಹೇಗೆ ಊಟ ಮಾಡ್ತಾರೋ ಅದೇ ರೀತಿ ಊಟ ಮಾಡ್ತಾರೆ. ಆದರೆ, ಆಗಾಗ ಹಿಡಿ ಮರಳು ತಿಂತಾರೆ. ಆದರೂ ಆರೋಗ್ಯವಾಗೇ ಇದ್ದಾರೆ" ಎಂದು ಹೇಳುತ್ತಾರೆ.

"ಮರಳು ತಿನ್ನಬೇಡ ಅಂತ ಹೇಳಿದರೂ ಕೇಳಲ್ಲ. ನಮಗೆ ಮುಂದೇನಾದರೂ ತೊಂದರೆ ಆಗುವುದೇನೋ ಅಂತ ಭಯ. ಆದರೆ, ಅವರಿಗೆ ಆ ಭಯವಿಲ್ಲ. ನಾವು ಬಲವಂತ ಪಡಿಸಿದರೂ ನಮಗೆ ಗೊತ್ತಿಲ್ಲದೇ ಮರಳು ತಿಂದುಬಿಡುತ್ತಾರೆ " ಎಂದು ಹೇಳುತ್ತಾರೆ.

ನಮ್ಮ ಕನ್ನಡ ನಾಣ್ಣುಡಿಯಾದ ಮಣ್ಣಿಂದಲೇ ಅನ್ನ, ಮಣ್ಣಿಂದಲೇ ಕಾಯ ಎಂಬ ಮಾತು ಈ ವೃದ್ಧೆಯ ಪಾಲಿಗೆ ಅಕ್ಷರಶಃ ಒಪ್ಪಿದೆ. ನಾಣ್ಣುಡಿ ಮಾರ್ಮಿಕವಾಗಿದ್ದರೂ ಆಕೆಯ ಪಾಲಿಗೆ ಪ್ರಾಕ್ಟಿಕಲ್ ಆಗಿದೆ !

ಮೂಲ, ಚಿತ್ರ ಕೃಪೆ: ದ ಕ್ವಿಂಟ್

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A 78 old woman named Kusma vati eats sand every day. She says that she has been eating sand for six decades now and has not encountered any stomach, mouth or teeth related problems.
Please Wait while comments are loading...