ಮೋದಿ ಸರ್ಕಾರದ ಮೇಲೆ ಶೇ 73 ಭಾರತೀಯರಿಗಿದೆ ನಂಬಿಕೆ!

Posted By:
Subscribe to Oneindia Kannada

ನವದೆಹಲಿ, ಜುಲೈ 15: ಮೋದಿ ಸರ್ಕಾರದ ಮೇಲೆ ಶೇ 73 ಭಾರತೀಯರಿಗೆ ನಂಬಿಕೆಯಿದೆ ಎಂದು ಆರ್ಥಿಕ ಸಂಸ್ಥೆಯ ಸಮೀಕ್ಷೆಯೊಂದರು ಹೇಳಿದೆ.

ಒಇಸಿಡಿ ಎಂಬ ಪ್ರಮುಖ ಆರ್ಥಿಕ ಸಹಕಾರಿ ಸಂಸ್ಥೆ ನೀಡಿರುವ ವರದಿಯಂತೆ ಶೇ 73ರಷ್ಟು ಮಂದಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ದೃಢವಾದ ನಂಬಿಕೆ ಹೊಂದಿದ್ದಾರೆ. ಜಾಗತಿಕವಾಗಿ ಈ ಮಟ್ಟದಲ್ಲಿ ಸಾರ್ವಜನಿಕರ ಒಲವು ಮತ್ತೆ ಯಾವುದೇ ಸರ್ಕಾರದ ಮೇಲೆ ಕಂಡು ಬಂದಿಲ್ಲ.

73 per cent Indians have trust in Modi government says report

ಪ್ರಧಾನಿ ಜಸ್ಟಿನ್ ಟ್ರುಡ್ಯೂ ಅವರ ನೇತೃತ್ವದ ಕೆನಡಾದ ಸರ್ಕಾರ ಮೇಲೆ ಅಲ್ಲಿನ ನಾಗರಿಕರು ಶೇ 62ರಷ್ಟು ನಂಬಿಕೆ ಇರಿಸಿಕೊಂಡಿದ್ದಾರೆ.

ಟರ್ಕಿ ದೇಶ ಮೂರನೇ ಸ್ಥಾನದಲ್ಲಿದ್ದು, ಶೇ 58ರಷ್ಟು ಅಲ್ಲಿನ ಜನರು, ಎರ್ಡೋಗನ್ ಅವರ ಸರ್ಕಾರದ ಪರ ನಿಂತಿದ್ದಾರೆ. ರಷ್ಯಾ ಹಾಗೂ ಜರ್ಮನಿ ಕ್ರಮವಾಗಿ ನಾಲ್ಕು ಹಾಗೂ ಐದನೇ ಸ್ಥಾನದಲ್ಲಿವೆ. ಶೇ 58 ಹಾಗೂ ಶೇ 55ರಷ್ಟು ವಿಶ್ವಾಸಾರ್ಹತೆ ಗಳಿಸಿವೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಅಲ್ಲಿನ ಜನರು ಶೇ 30ರಷ್ಟು ಮಾತ್ರ ನಂಬಿಕೆ ಇರಿಸಿಕೊಂಡಿದ್ದಾರೆ. ಯುನೈಟೆಡ್ ಕಿಂಗ್ಡಮ್ ಶೇ 41ರಷ್ಟು ಮತ ಪಡೆದಿವೆ ಎಂದು ಸಮೀಕ್ಷೆ ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
OECD, a major economic cooperation organisation has said that 73 per cent Indians have faith in Prime Minister Narendra Modi. Incidentally this is the highest in the world.
Please Wait while comments are loading...