ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

7 ಸಾವಿರ ಕೋಟಿ ಸಾಲಕ್ಕೆ ಬ್ಯಾಂಕ್ ಗಳಿಗೆ ನಾಮವಿಟ್ಟ ಜತಿನ್ ಮೆಹ್ತಾ ಕಥೆಯೇನು

ಜತಿನ್ ಮೆಹ್ತಾ ಎಂಬ ವಿನ್ಸಮ್ ವಜ್ರದ ಕಂಪೆನಿಯ ಮಾಲೀಕ ಏಳು ಸಾವಿರ ಕೋಟಿ ರುಪಾಯಿ ಸಾಲಕ್ಕೆ ನಾಮ ಹಾಕಿ ನಾಲ್ಕೈದು ವರ್ಷ ಕಳೆಯುತ್ತಾ ಬಂದಿದೆ. ಆತ ಈಗ ಸೇಂಟ್ ಕೀಟ್ಸ್ ಪೌರತ್ವ ಪಡೆದಿದ್ದು, ಭಾರತಕ್ಕೆ ಕರೆತರಲು ಸಾಧ್ಯವಿದೆಯಾ?

|
Google Oneindia Kannada News

ನವದೆಹಲಿ, ಮೇ 9: ಲಂಡನ್ ನಲ್ಲಿರುವ ಮದ್ಯದ ದೊರೆ ವಿಜಯ್ ಮಲ್ಯರ ಮೂಗು ಹಿಡಿದು, ದಾರ ಕಟ್ಟಿ ಭಾರತಕ್ಕೆ ಎಳೆದುತರಲು ಅಧಿಕಾರಿಗಳು ಕಲಿತ ಬುದ್ಧಿಯನ್ನೆಲ್ಲ ಖರ್ಚು ಮಾಡುತ್ತಿದ್ದಾರೆ. ಇದೀಗ ಮಲ್ಯ ಮಾದರಿಯ ಮತ್ತೊಂದು ರಂಕಲು ಜತಿನ್ ಮೆಹ್ತಾ ರೂಪದಲ್ಲಿ ಎದ್ದು ನಿಂತಿದೆ. ಈ ಆಸಾಮಿ ಸಾಲ ಕೊಡದೆ ಸುಸ್ತಿದಾರ ಅಗಿರುವುದು ಜಸ್ಟ್ 7 ಸಾವಿರ ಕೋಟಿ ರುಪಾಯಿಗೆ.

ಎಕನಾಮಿಕ್ ಟೈಮ್ಸ್ ವರದಿ ಮಾಡಿದ ಪ್ರಕಾರ, ಮಲ್ಯರ ಕಿಂಗ್ ಫಿಷರ್ ಬಿಟ್ಟರೆ ಅತಿ ಹೆಚ್ಚಿನ ಸಾಲ ಪಡೆದ ಕುಖ್ಯಾತಿ ಮೆಹ್ತಾರ ವಿನ್ಸಮ್ ಗುಂಪಿನದು. ಜಾರಿ ನಿರ್ದೇಶನಾಲಯವು ದುಬೈಗೆ ಪತ್ರ ಬರೆದಿದ್ದು, ಶೀಘ್ರದಲ್ಲಿ ಸ್ಪಂದಿಸುವಂತೆ ಮನವಿ ಮಾಡಿದೆ. ವಿನ್ಸಮ್ ಡೈಮಂಡ್ಸ್ ಮತ್ತು ಅದರ ಸಹವರ್ತಿ ವ್ಯವಹಾರಗಳಿಗಾಗಿ ಹದಿಮೂರು ಖಾಸಗಿ ಹಾಗೂ ಸಾರ್ವಜನಿಕ ಬ್ಯಾಂಕ್ ಗಳಿಂದ ಏಳು ಸಾವಿರ ಕೋಟಿ ಸಾಲ ಪಡೆಯಲಾಗಿದೆ.[ನ್ಯಾಯಾಂಗ ನಿಂದನೆ : ವಿಜಯ್ ಮಲ್ಯ ತಪ್ಪಿತಸ್ಥ ಎಂದ ಸುಪ್ರೀಂ]

7000 crore loan defaulter Jatin Mehta now on ED, CBI scanner: Report

ಈ ಬ್ಯಾಂಕ್ ಗಳ ಗುಂಪಿನ ನೇತೃತ್ವವನ್ನು ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಹಿಸಿಕೊಂಡಿವೆ. ಕಳೆದ ವರ್ಷದ ಮಧ್ಯಭಾಗದಲ್ಲೇ ಭಾರತವು ಸೌದಿ ಅರಬ್ ಎಮಿರೇಟ್ಸ್ ಗೆ ಪತ್ರ ಬರೆದಿದೆ. ಮನವಿಗೆ ಇನ್ನೂ ಪ್ರತಿಕ್ರಿಯೆ ಬಂದಿಲ್ಲ. ಭಾರತೀಯ ಆರ್ಥಿಕ ಗುಪ್ತಚರ ವಿಭಾಗದ ಜತೆ ಕೆಲ ತಿಂಗಳ ಹಿಂದೆ ಸ್ವಲ್ಪ ಮಟ್ಟಿಗಿನ ಮಾಹಿತಿ ಹಂಚಿಕೊಂಡಿದೆ.

ಆರ್ಥಿಕ ಗುಪ್ತಚರ ವಿಭಾಗದಿಂದ ಹಂಚಿಕೊಂಡಿರುವುದು ಮಾಹಿತಿ ಮಾತ್ರ. ತುಂಬ ಪ್ರಮುಖವಾದದ್ದಲ್ಲ. ಇದಕ್ಕೆ ದುಬೈನ ಅಧಿಕಾರಿಗಳು ಪ್ರತಿಕ್ರಿಯಿಸಬೇಕು. ವಿನ್ಸಮ್ ವ್ಯವಹಾರಗಳ ಸ್ವರೂಪ ಮತ್ತು ಸಾಲ ನೀಡಿದವರ ಆರೋಪಗಳನ್ನು ಗಮನಿಸಿದರೆ ಅದಕ್ಕೆ ದುಬೈ ಅಧಿಕಾರಿಗಳೇ ಸ್ಪಂದಿಸಬೇಕು. ಜತಿನ್ ಮೆಹ್ತಾ ಸೇಂಟ್ ಕೀಟ್ಸ್ ನ ಪೌರತ್ವ ಪಡೆದಿದ್ದಾರೆ. ಆ ದೇಶದ ಜತೆಗೆ ಭಾರತವು ಹಸ್ತಾಂತರದ ಒಪ್ಪಂದ ಹೊಂದಿಲ್ಲ.['ರಾಜಕೀಯ ಪ್ರೇರಿತ ಪ್ರಕರಣ' ಎಂಬ ಗುರಾಣಿ ಬಳಸಲು ಮಲ್ಯ ಸಿದ್ಧತೆ!]

ಆದ್ದರಿಂದ ಆತನ ಹಸ್ತಾಂತರ ಸುಲಭವಿಲ್ಲ. ಕಳೆದ ವಾರ ಸರಕಾರ ಮೆಹ್ತಾ ವಿರುದ್ಧ ಎಫ್ ಐಆರ್ ದಾಖಲಿಸಿದೆ. 2012ರಿಂದ ಮೆಹ್ತಾನ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಮೆಹ್ತಾಗಾಗಿ ಹುಡುಕಾಟ ನಡೆಸುತ್ತಿವೆ. ಮನಿ ಲಾಂಡ್ರಿಂಗ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಮೇನಲ್ಲಿ 170 ಕೋಟಿಗೂ ಹೆಚ್ಚು ಮೊತ್ತದ ಆಸ್ತಿಯನ್ನು ಜಪ್ತಿ ಮಾಡಲಾಗಿತ್ತು.

ಪ್ರಿವೆನ್ಷನ್ ಆಫ್ ಮನಿ ಲಾಂಡ್ರಿಂಗ್ ಕಾಯ್ದೆ ಅನ್ವಯ ವಿನ್ಸಮ್ ಕಂಪೆನಿಯ ಚರ-ಸ್ಥಿರಾಸ್ತಿಗಳನ್ನು ವಶಕ್ಕೆ ಪಡೆಯಲು ಆದೇಶ ನೀಡಲಾಗಿದೆ.

English summary
After tightening the noose around beleaguered liquor baron Vijay Mallya, the Indian authorities have now turned their glare on Jatin Mehta, who is accused of defaulting on loans to the tune of Rs 7,000 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X