ಸೆಪ್ಟೆಂಬರ್ ವೇಳೆಗೆ 70 ಕೋಟಿ ಜನರಿಗೆ ಲಸಿಕೆ ಅಗತ್ಯ: ಹಣಕಾಸು ಸಚಿವಾಲಯ

ನವದೆಹಲಿ, ಜೂನ್ 8: ಕೊರೊನಾವೈರಸ್ ಕಾರಣದಿಂದಾಗಿ ಭಾರತದ ಆರ್ಥಿಕತೆ ಸಾಕಷ್ಟು ಹದಗೆಟ್ಟಿದೆ. ಇದನ್ನು ಸಹಜ ಸ್ಥಿತಿಗೆ ತರಲು ಅಗತ್ಯ ಕ್ರಮಗಳ ಬಗ್ಗೆ ಹಣಕಾಸು ಸಚಿವಾಲಯ ಯೋಜನೆಗಳನ್ನು ರೂಪಿಸುತ್ತಿದೆ. ಈ ಸಂದರ್ಭದಲ್ಲಿ ಕೊರೊನಾವೈರಸ್ ವಿರುದ್ಧ ರಕ್ಷಣೆ ಪಡೆಯಲು ಹಾಗೂ ಈ ಮೂಲಕ ದೇಶದ ಆರ್ಥಿಕತೆಯನ್ನು ಸಹಜ ಸ್ಥಿತಿಗೆ ಮರಳಿಸಲು ದೇಶದಲ್ಲಿ 70 ಕೋಟಿ ಜನರು ಕನಿಷ್ಟ ಒಂದು ಡೋಸ್ ಲಸಿಕೆಯನ್ನು ಸೆಪ್ಟೆಂಬರ್ ವೇಳೆಗೆ ಪಡೆಯಬೇಕಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

ಈ ಗುರಿಯನ್ನು ತಲುಪಲು ಭಾರತಕ್ಕೆ ತಕ್ಷಣದಿಂದಲೇ ದಿನಕ್ಕೆ 93 ಲಕ್ಷ ಡೋಸ್ ಲಸಿಕೆಯ ಅಗತ್ಯವಿದೆ. ಲಸಿಕೆ ಲಭ್ಯತೆ ಪ್ರಮಾಣ ಕೆಲವೇ ದಿನಗಳಲ್ಲಿ ಹೆಚ್ಚಾಗುವ ನಿರೀಕ್ಷೆಯಿದ್ದು ಈ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದ ಜನರಿಗೆ ಲಸಿಕೆಯನ್ನು ನೀಡಲು ಕ್ರಮ ಕೈಗೊಳ್ಳಬೇಕೆಂದು ಸಚಿವಾಲಯ ಹೇಳಿದೆ. ಅದರಲ್ಲಿಯೂ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ 24/7 ರೀತಿಯಲ್ಲಿ ಕಾರ್ಯನಿರ್ವಹಿಸಲು ಹಣಕಾಸು ಸಚಿವಾಲಯ ಸೂಚಿಸಿದೆ. ಇದು ಬಹುದೊಡ್ಡ ಗುರಿಯಾಗಿದೆ, ಆದರೆ ಇದನ್ನು ಸಾಧಿಸಲು ಸಾಧ್ಯವಿದೆ. ದಿನಕ್ಕೆ ಒಂದು ಕೋಟಿಯಷ್ಟು ಡೋಸ್‌ಗಳನ್ನು ನೀಡಲು ಸಾಧ್ಯವಿದೆ ಎಂದು ಹಣಕಾಸು ಸಚಿವಾಲಯ ವಿಶ್ವಾಸ ವ್ಯಕ್ತಪಡಿಸಿದೆ.

ಹರ್ಡ್ ಇಮ್ಯೂನಿಟಿ ಸಾಧಿಸಬೇಕಾದರೆ 80 ಶೇಕಡಾ ಜನರು ಲಸಿಕೆ ಪಡೆಯಬೇಕಿದೆ ಎಂಬ ಹಿನ್ನೆಲೆಯಲ್ಲಿ ಹಣಕಾಸು ಸಚಿವಾಲಯ 70 ಕೋಟಿ ವಯಸ್ಕ ಜನರು ಭಾರತದಲ್ಲಿ ಲಸಿಕೆಯನ್ನು ಶೀಘ್ರದಲ್ಲಿಯೇ ಪಡೆಯಬೇಕಿದೆ ಎಂಬ ಲೆಕ್ಕಾಚಾರವನ್ನು ಮಾಡಿದೆ. ಇಂದಿನವರೆಗೆ 19.2 ಕೋಟಿ ಜನರಿಗೆ ಮೊದಲ ಡೋಸ್ ಲಸಿಕೆಯನ್ನು ಹಾಕಲಾಗಿದ್ದು 4.7 ಕೋಟಿ ಜನರು ಎರಡು ಲಸಿಕೆಯನ್ನು ಕೂಡ ಪಡೆದುಕೊಂಡಿದ್ದಾರೆ. ಸೆಪ್ಟೆಂಬರ್ ತಿಂಗಳಿಗೂ ಮುನ್ನ 70 ಕೋಟಿ ಜನರು ಲಸಿಕೆಯನ್ನು ಸ್ವೀಕರಿಸಬೇಕೆಂದರೆ 113 ಕೋಟಿ ಲಸಿಕೆಯ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.

70 crore adults vaccinated at least first dose by September: Finance Ministry

"ತಂತ್ರಜ್ಞಾನ ಬಳಕೆಯ ಮೂಲಕ ಲಸಿಕೆಯ ಕಾರ್ಯಕ್ರಮವನ್ನು ಸರಾಗಗೊಳಿಬೇಕು, ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಅಗತ್ಯ ಬದಲಾವಣೆ ಮಾಡಿಕೊಂಡು ಶಾಲೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಜೊತೆಗೆ ಶಾಪಿಂಗ್ ಪ್ರದೇಶಗಳು, ಡ್ರೈವ್-ಇನ್‌ಗಳಂತಹ ಸಾಮೂಹಿಕ ವ್ಯಾಕ್ಸಿನೇಷನ್ ಕಾರ್ಯಕ್ರಮಗಳ ಆಯೋಜನೆ ಮಾಡುವ ಮೂಲಕ ಲಸಿಕೆ ಕಾರ್ಯಕ್ರಮದ ವೇಗವನ್ನು ವೃದ್ಧಿಸಿಕೊಳ್ಳಹುದು" ಎಂದು ಹಣಕಾಸು ಸಚಿವಾಲಯ ಆರ್ಥಿಕ ವ್ಯವಹಾರಗಳ ಇಲಾಖೆ ಪ್ರಕಟಿಸುವ ಮಾಸಿಕ ವರದಿಯಲ್ಲಿ ಸಲಹೆಯನ್ನು ನೀಡಿದೆ.

ಇಲ್ಲಿಯವರೆಗೆ ದಿನದಲ್ಲಿ ನೀಡಿದ ಗರಿಷ್ಠ ವ್ಯಾಕ್ಸಿನೇಷನ್ ಪ್ರಮಾಣ 42.65 ಲಕ್ಷ. ಈ 8-9 ಗಂಟೆಗಳ ಶಿಫ್ಟ್‌ನಲ್ಲಿ ಈ ಪ್ರಮಾಣವನ್ನು ಸಾಧಿಸಲು ಸಾಧ್ಯವಾಗಿದೆ. ಇದನ್ನು ಎರಡು ಶಿಫ್ಟ್‌ಗಳಿಗೆ ಅಥವಾ 24 ಗಂಟೆಗೆ ನಿರ್ವಹಿಸಲು ಸಾಧ್ಯವಾಗುವಂತೆ ಹಣಕಾಸು ಸಚಿವಾಲಯ ಸಲಹೆಯನ್ನು ನೀಡಿದೆ. ಈ ಮೂಲಕ ಲಸಿಕೆಯ ವೇಗವನ್ನು ಹೆಚ್ಚಿಸಿಕೊಳ್ಳಲು ಅನುಕೂಲ ಮಾಡಿಕೊಳ್ಳಬಹುದು ಎಂದು ಸಚಿವಾಲಯ ಸಲಹೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+