ಉಜ್ಜಯಿನಿ ಕುಂಭಮೇಳದಲ್ಲಿ ಕಾಲ್ತುಳಿತ: 7 ಸಾವು
ಉಜ್ಜಯಿನಿ, ಮೇ 05: ಮಧ್ಯಪ್ರದೇಶದ ಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿದ್ದು 7 ಜನರು ಸಾವನ್ನಪ್ಪಿ 70 ಮಂದಿ ಗಾಯಗೊಂಡಿದ್ದಾರೆ. ಗುರುವಾರ ಉಜ್ಜಯಿನಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಕಾಲ್ತುಳಿತಕ್ಕೆ ಕಾರಣವಾಗಿದೆ.
ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಕುಂಭಮೇಳದ ಆಯೋಜಕರು ತಿಳಿಸಿದ್ದಾರೆ.[ಕೇರಳದಲ್ಲಿ ಪಟಾಕಿ ದುರಂತ ಯಾಕಾಯಿತು?]

ಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರ್ ಮೂಲಕ ಘಟನೆಗೆ ಸಂತಾಪ ಸೂಚಿಸಿದ್ದಾರೆ. ಮಾಧ್ಯಮವೊಂದು ವರದಿ ಮಾಡಿದಂತೆ ಕುಂಭಮೇಳದ ಹಿನ್ನೆಲೆಯಲ್ಲಿ ನಿರ್ಮಾಣ ಮಾಡಲಾಗಿದ್ದ ಟೆಂಟ್ ಕುಸಿದು ಬಿದ್ದಿದ್ದು ಅವಘಡಕ್ಕೆ ಮೂಲ ಕಾರಣವಾಗಿದೆ.[ಕೇರಳ ಪಟಾಕಿ ದುರಂತದ ಕರಾಳ ಚಿತ್ರಗಳು]
ಏಪ್ರಿಲ್ 23 ರಂದು ಆರಂಭವಾಗಿದ್ದ ಕುಂಭಮೇಳ ಒಂದು ತಿಂಗಳ ಕಾಲ ನಡೆಯುವುದಿತ್ತು. ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಕಲುಂಭಮೇಳದಲ್ಲಿ ಭಾಗವಹಿಸುತ್ತಾರೆ. ಶಿಪ್ರಾ ನದಿ ದಂಡೆಯಲ್ಲಿ 12 ವರ್ಷದ ನಂತರ ಸಿಂಹಸ್ಥ ಕುಂಭಮೇಳ ಜರುಗುತ್ತಿದ್ದು ಅವಘಡ ಮೇಳದಲ್ಲಿ ಸೂತಕದ ಛಾಯೆ ಮೂಡಿಸಿದೆ.
Anguished over the loss of lives at the Kumbh due to heavy rains. May Almighty give strength to the bereaved families to overcome the grief.
— Narendra Modi (@narendramodi) May 5, 2016












Click it and Unblock the Notifications