ಉತ್ತರಪ್ರದೇಶದಲ್ಲಿ ಕಳೆದ ಬಾರಿಗಿಂತ ಹೆಚ್ಚು ಮತದಾನ

Posted By:
Subscribe to Oneindia Kannada

ಲಕ್ನೋ, ಫೆಬ್ರವರಿ 11: ಉತ್ತರಪ್ರದೇಶದ 15 ಜಿಲ್ಲೆಗಳ 73 ವಿಧಾನಸಭಾ ಕ್ಷೇತ್ರಗಳಿಗೆ ಶನಿವಾರದಂದು ಮೊದಲ ಹಂತದಲ್ಲಿ ಮತದಾನ ನಡೆಯಿತು. ಶೇ 64.2ರಷ್ಟು ಮತದಾನವಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.

ಒಟ್ಟಾರೆ 839 ಅಭ್ಯರ್ಥಿಗಳು ಕಣದಲ್ಲಿದ್ದು, 1.42 ಕೋಟಿ ಪುರುಷರು, 1.17 ಕೋಟಿ ಮಹಿಳೆಯರು ಮತ್ತು 1511 ತೃತೀಯ ಲಿಂಗಿಗಳು ಸೇರಿ 2.59 ಕೋಟಿ ಮತದಾರರು ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.

ಈ ಹಿಂದಿನ ಫಲಿತಾಂಶ: 2012ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಈ 73 ಕ್ಷೇತ್ರಗಳಲ್ಲಿ ಎಸ್​ಪಿ 24, ಬಿಎಸ್​ಪಿ 23 ಬಿಜೆಪಿ 12, ಆರ್​ಎಲ್​ಡಿ 9 ಮತ್ತು ಕಾಂಗ್ರೆಸ್ 5 ಸ್ಥಾನಗಳಲ್ಲಿ ಜಯಗಳಿಸಿತ್ತು. 2014ರ ವಿಧಾನಸಭಾ ಚುನಾವಣೆಯಲ್ಲಿ ಈ ಪ್ರದೇಶದ ಎಲ್ಲಾ 12 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಭಾರಿಸಿತ್ತು.

64.2 % polling in first phase of UP elections

ಪ್ರಮುಖ ಅಭ್ಯರ್ಥಿಗಳು: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪುತ್ರ ಪಂಕಜ್ ಸಿಂಗ್(ನೋಯ್ಡಾ ಕ್ಷೇತ್ರ), ಬಿಜೆಪಿ ಸಂಸದ ಹುಕುಂ ಸಿಂಗ್ ಪುತ್ರಿ ಮೃಗಂಕಾ(ಕೈರಾನ ಕ್ಷೇತ್), ಬಿಜೆಪಿ ಶಾಸಕ ಸಂಗೀತ್ ಸೋಮ್ ಹಾಗೂ ಸುರೇಶ್ ರಾಣಾ ಶಾರ್ಧನ್ ಹಾಗೂ ಥಾಣಾ ಭವನ್ ಕ್ಷೇತ್ರ, ಆರ್​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅಳಿಯ ರಾಹುಲ್ ಸಿಂಗ್(ಎಸ್​ಪಿ) ಸಿಖಂದರಾಬಾದ್, ರಾಜಸ್ಥಾನ ಗವರ್ನರ್ ಕಲ್ಯಾಣ್ ಸಿಂಗ್ ಅವರ ಮೊಮ್ಮಗ ಸಂದೀಪ್ ಸಿಂಗ್ ಅತ್ರೌಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.

ಮುಖ್ಯಚುನಾವಣಾಧಿಕಾರಿ ಟಿ ವೆಂಕಟೇಶ್ ಸುದ್ದಿಗೋಷ್ಠಿ ಮುಖ್ಯಾಂಶಗಳು
* 3,888 ಡಿಜಿಟಲ್ ಹಾಗೂ ವಿಡಿಯೋ ಕೆಮೆರಾಗಳ ನೆರವಿನಿಂದ 2,857 ಸ್ಥಳಗಳಲ್ಲಿ ವೆಬ್ ಕಾಸ್ಟಿಂಗ್ ಮಾಡಲಾಗಿದೆ.
* 2,96,906 ತಂಟೆಕೋರರನ್ನು ಗುರುತಿಸಲಾಗಿದೆ ಹಾಗೂ ಇವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗಿದೆ.
* 19.56 ಕೋಟಿ ನಗದು 4.44 ಲಕ್ಷ ಲೀಟರ್ ಅಕ್ರಮ ಮದ್ಯ(14 ಕೋಟಿ ಮೌಲ್ಯ) , 96.93 ಲಕ್ಷ ಮೌಲ್ಯದ ಮಾದಕ ವಸ್ತು, 14 ಕೋಟಿ ಮೌಲ್ಯದ ಬೆಳ್ಳಿಯನ್ನು ವಶಪಡಿಸಲಾಗಿದೆ.
* 2012ರಲ್ಲಿ ಶೇ61ರಷ್ಟು ಮತದಾನವಾಗಿತ್ತು, ಈ ಬಾರಿ ಶೇ 3ರಷ್ಟು ಹೆಚ್ಚು ಮತದಾನವಾಗಿದೆ.
* ಇಥಾ ಶೇ 73, ಮುಝಾಫರ್ ನಗರ್ ಶೇ 65, ಬುಲಂದ್ ಷರ್ ಶೇ64. ನೋಯ್ಡಾ ಶೇ 60, ಗಾಜಿಯಾಬಾದ್ ಶೇ 57ರಷ್ಟು ಮತದಾನ ಕಂಡಿದೆ.
* ಮೀರತ್ ನಲ್ಲಿ ಬಿಜೆಪಿ ಮುಖಂಡ ಸಂಗೀತ್ ಸೋಮ್ ಅವರ ಸೋದರ ಗಗನ್ ಸೋಮ್ ಅವರು ಬೂತ್ ನೊಳಗೆ ಪಿಸ್ತೂಲ್ ಜತೆಗೆ ಬಂದಿದ್ದರಿಂದ ಅವರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Read in English: 64.2 polling in UP: EC
English summary
The Election Commission of India on Saturday said that 64.2 per cent of voting was recorded by the end of the first phase of the Uttar Pradesh Assembly elections.
Please Wait while comments are loading...