New Criminal Laws: ಹೊಸ ಅಪರಾಧ ಕಾನೂನಡಿ ರಾಜ್ಯದಲ್ಲಿ 63 ಪ್ರಕರಣ ದಾಖಲು
ನವದೆಹಲಿ, ಜುಲೈ 02: ಕೇಂದ್ರ ಸರ್ಕಾರ ಬ್ರಿಟೀಷ್ ಕಾನೂನುಗಳಿಗೆ ಮುಕ್ತಿ ನೀಡಿ, ಭಾರತೀಯ ನ್ಯಾಯ ಸಂಹಿತೆ ಎಂಬ ಹೊಸ ಕಾನೂನು ವ್ಯವಸ್ಥೆ ಜಾರಿಗೆ ತಂದಿದೆ. ಇದರ ಬೆನ್ನಲ್ಲೆ ದೇಶದಲ್ಲಿ ಹಾಗೂ ಕರ್ನಾಟಕದಲ್ಲಿ ಮೊದಲ FIRಗಳು ದಾಖಲಾಗಿವೆ. ಕರ್ನಾಟಕದಲ್ಲಿ ಮೊದಲ ದಿನವೇ ಸುಮಾರು 63 ಪ್ರಕರಣ ದಾಖಲಾಗಿವೆ. ಅವು ಎಲ್ಲಿ, ಯಾವ ಪ್ರಕರಣ ಎಂದು ತಿಳಿಯಿರಿ.
ಭಾರತೀಯ ದಂಡ ಸಂಹಿತೆಯನ್ನು ಬದಲಿಸಿದ ಹೊಸ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಮೊದಲ ಎಫ್‌ಐಆರ್ ಮಧ್ಯಪ್ರದೇಶದ ಭೋಪಾಲ್‌ನ ಹನುಮಂಗಂಜ್ ಪೊಲೀಸ್ ಠಾಣೆಯಲ್ಲಿ ಸೋಮವಾರ ದಾಖಲಾಗಿದೆ. ನಿಂದಿಸಿದ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಹೊಸ ಕಾನೂನಿನಡಿ ಎಫ್‌ಐಆರ್ ದಾಖಲಾಗಿದೆ.

ಇನ್ನು ರಾಷ್ಟ್ರ ರಾಜಧಾನಿಯಲ್ಲಿ ಬೀದಿಬದಿ ವ್ಯಾಪಾರಿಯೊಬ್ಬರ ವಿರುದ್ಧ BNS ಅಡಿಯಲ್ಲಿ ದಾಖಲಿಸಲಾದ ಮೊದಲ ಎಫ್‌ಐಆರ್ ಅನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಇನ್ನೂ ಪ್ರತ್ಯೇಕ ಘಟನೆಯಲ್ಲಿ ಪ್ರಫುಲ್ ಚೌಹಾಣ್ ಎಂಬುವರು ನೀಡಿದ ದೂರಿನ ಮೇರೆಗೆ ಹನುಮಂಗಂಜ್‌ನಲ್ಲಿ ದೇಶದ ಮೊದಲ ಪ್ರಕರಣವನ್ನು ಸೋಮವಾರ ಬೆಳಗ್ಗೆ (12:16 AM) ದಾಖಲಾಯಿತು ಎಂದು ವರದಿ ಆಗಿದೆ.
ಗ್ವಾಲಿಯರ್‌ನಲ್ಲೂ ಕೇಸ್ ದಾಖಲು
ಇದಲ್ಲದೇ BNS ಅಡಿಯಲ್ಲಿ ಮೊದಲ ಎಫ್‌ಐಆರ್ ಗ್ವಾಲಿಯರ್‌ನ ಹಜಿರಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಇಲ್ಲಿ 1.10 ಲಕ್ಷ ಮೌಲ್ಯದ ದ್ವಿಚಕ್ರ ವಾಹನ ಕಳ್ಳತನ ಆರೋಪದ ಮೇರೆಗೆ ಎಫ್‌ಐಆರ್ ದಾಖಲಾಗಿದೆ.
BNS ನ ಸೆಕ್ಷನ್ 296 ಪ್ರಕಾರ, ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಅಶ್ಲೀಲ ಕೃತ್ಯವನ್ನು ಮಾಡುವವರು ಅಥವಾ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಅಥವಾ ಸಮೀಪದಲ್ಲಿ ಯಾವುದೇ ಅಶ್ಲೀಲ ಹಾಡು, ಬೈಗುಳ, ಅಶ್ಲೀಲ ಪದ ಬಳಸಿ ನಿಂದಿಸುವವರು, ಅಶ್ಲೀಲವಾಗಿ ಮಾತನಾಡುವವರಿಗೆ ಶಿಕ್ಷೆ ವಿಧಿಸುವ ಅಧಿಕಾರ ಇದೆ. ಮೂರು ತಿಂಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ಎರಡನ್ನು ವಿಧಿಸಬಹುದು.

ಭಾರತೀ ನ್ಯಾಯ ಸಂಹಿತೆ ಸೇರಿದಂತೆ ಮೂರು ಹೊಸ ಕಾನೂನುಗಳು ಸೋಮವಾರ ಬೆಳಗ್ಗೆ ಅಂದರೆ ಭಾನುವಾರ ಮಧ್ಯರಾತ್ರಿ (12.01ರಿಂದ) ಕಾರ್ಯಾರಂಭಕ್ಕೆ ತರಲಾಗಿದೆ. ಮೂರು ವರ್ಷಗಳಲ್ಲಿ ದಾಖಲಾದ ಪ್ರಕರಣ ಹಾಗೂ ಹೊಸ ಕಾನೂನುಗಳಡಿ ದಾಖಲಾದ ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ಗೆ ತಲಪಿಸಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು.
ಕರ್ನಾಟಕದಲ್ಲಿ ಒಟ್ಟು 63 ಕೇಸು ದಾಖಲು
ಹೊಸ ಕಾನೂನು ಜಾರಿಯಾದ ಬೆನ್ನಲ್ಲೆ ಕರ್ನಾಟಕದಲ್ಲಿ ಮೊದಲ ದಿನವೇ (ಜುಲೈ 01) ಸೋಮವಾರ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 63 ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ವಿಮಾನ ನಿಲ್ದಾಣದಿಂದ ಹಾಸನದತ್ತ ಬರುತ್ತಿದ್ದ ಕಾರೊಂದು ಸೀಗೆಗೇಟ್ ಬಳಿಕ ಉರಳಿ ಬಿದ್ದಿದೆ. ಘಟನೆಯಲ್ಲಿ ಇಂದುಮತಿ ಎಂಬುವವರು ಮೃತಪಟ್ಟಿದ್ದಾರೆ.
ಮೃತ ಇಂದುಮತಿ ಪತಿ ಹಾಗೂ ಕಾರು ಚಾಲಕನಿಗೆ ಗಾಯಗಳಾಗಿವೆ. ಇವರು ವಿಮಾನ ನಿಲ್ದಾಣದಿಂದ ಹಳೇಬಿಡಿಗೆ ಬರುತ್ತಿರುವಾಗ ಘಟನೆ ನಡೆದಿದೆ. ಇದು ಹೊಸ ಕಾನೂನಿನಡಿ ದಾಖಲಾದ ಮೊದಲ ಪ್ರಕರಣ ಎನ್ನಲಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಮೊದಲ ದಿನ ರಾತ್ರಿ 8ಗಂಟೆವರೆಗೆ 63 ಕೇಸು ದಾಖಲಾಗಿವೆ. ಬೆಂಗಳೂರಿನ HSR ಬಡಾವಣೆಯ ಪೊಲೀಸ್ ಠಾಣೆಯಲ್ಲಿ ಮೊದಲ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹೊಸ ಕ್ರಿಮಿನಲ್ ಕಾನೂನುಗಳು ಕಾನೂನು ವ್ಯವಸ್ಥೆಯ ಸುಧಾರಣೆಗೆ ಹೊಸ ರೂಪ ನೀಡಲಿವೆ ಎಂದು ಗೃಹ ಸಚಿವ ಅಮಿತ್ ಶಾ ನಂಬಿದ್ದಾರೆ. ಹೊಸ ಕಾನೂನು ಮೂಲಕ ನೂರಾರು ವರ್ಷಗಳಿಂದ ಚಾಲ್ತಿಯಲ್ಲಿದ್ದ ಬ್ರಿಟಿಷ್ ಕಾನೂನುಗಳಿಗೆ ಕೇಂದ್ರ ಮುಕ್ತಿ ಕೊಟ್ಟಿದೆ












Click it and Unblock the Notifications