Accident News: ಬಸ್‌-ಟ್ರಕ್‌ ನಡುವೆ ಭೀಕರ ಅಪಘಾತ: 6 ಜನ ಸಾವು

Accident News: ಇತ್ತೀಚಿನ ದಿನಗಳಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಲಿವೆ. ಇನ್ನೂ ಇದೀಗ ಬಸ್ ಹಾಗೂ ಟ್ರಕ್‌ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಈ ವೇಳೆ 6 ಜನ ಸಾವಪ್ಪಿದ್ದು, 10 ಜನ ಗಾಯಗೊಂಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ.

ಒಡಿಶಾದ ಸುಂದರಗಢ ಜಿಲ್ಲೆಯಲ್ಲಿ ಇಂದು ಬಸ್ ಹಾಗೂ ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಪರಿಣಾಮ 6 ಜನ ಸಾವನ್ನಪ್ಪಿದ್ದು, 10 ಜನ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

6 Killed 10 Injured in Bus-Truck accident in Odisha s Sundargarh District

ಅಪಘಾತದಲ್ಲಿ ಸಾವನ್ನಪ್ಪಿದ 6 ಜನರಲ್ಲಿ ಮೂವರು ಮಹಿಳೆಯರಾಗಿದ್ದಾರೆ. ಕೆ ಬಲಂಗ್ ಪೊಲೀಸ್ ಠಾಣೆ ಬಳಿಯ ರಾಷ್ಟ್ರೀಯ ಹೆದ್ದಾರಿ 520ರಲ್ಲಿ ಇಂದು (ಸೆಪ್ಟೆಂಬರ್ 26) ಬೆಳಗ್ಗೆ ಅಪಘಾತ ಸಂಭವಿಸಿದೆ. 5 ಮಂದಿ ಜನರು ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನೋರ್ವ ಚಿಕಿತ್ಸೆ ಪಡೆಯುತ್ತಿರುವಾಗಲೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು ಎಂದು ಪಶ್ಚಿಮ ವಲಯದ ಡಿಐಜಿ ಬ್ರಿಜೇಶ್ ಕುಮಾರ್ ರೈ ಮಾಹಿತಿ ನೀಡಿದ್ದಾರೆ ಅಂತಾ ವರದಿಯಾಗಿದೆ.

ಕರ್ಮಪಾಲ್ ಸಿಂಗ್, ಶಬರ್‌ಬಾಲಾ, ಪುಷ್ಪಾ ಗೋಪಿ, ಸತ್ಯಭಾಮ ಠಾಕೂರ್, ಮೇರಿ ನಾಗ್ ಅಪಘಾತದಲ್ಲಿ ಸಾವಪ್ಪಿದರವರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಗಾದೇ ಮೃತಪಟ್ಟ ಓರ್ವನ ಗುರುತು ಇನ್ನೂ ಪತ್ತೆಯಾಗಬೇಕಿದೆ. ಈ ಎಲ್ಲಾತೂ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಬಸ್ ರೂರ್ಕೆಲಾದಿಂದ ಕೊಯ್ಡಾಗೆ ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ರಸ್ತೆಯ ಒಂದು ಬದಿಯನ್ನು ದುರಸ್ತಿ ಹಿನ್ನೆಲೆ ಮುಚ್ಚಲಾಗಿತ್ತು. ಈ ಹಿನ್ನೆಲೆ ಬಸ್ ತಪ್ಪು ಪಥದಲ್ಲಿ ಪ್ರಯಾಣ ಮಾಡುತ್ತಿತ್ತು ಎಂದು ಪೊಲೀಸರ ಮೂಲಗಳಿಂದ ತಿಳಿದುಬಂದಿದೆ. ಇನ್ನು ಗಂಭೀರವಾಗಿ ಗಾಯಗೊಂಡವರನ್ನು ರೂರ್ಕೆಲಾದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಉಳಿದವರು ಕೊಯಿಡಾ ಮತ್ತು ಲಹುನಿಪಾದ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿಐಜಿ ಹೇಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಬಗ್ಗೆ ಸಿಎಂ ಮೋಹನ್ ಚರಣ್ ಮಾಝಿ ದುಃಖ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 4,00,000 ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ವಿಪಕ್ಷದ ನಾಯಕ ಮತ್ತು ಮಾಜಿ ಸಿಎಂ ನವೀನ್ ಪಟ್ನಾಯಕ್ ಸಹ ಘಟನೆ ಬಗ್ಗೆ ದುಃಖ ವ್ಯಕ್ತಪಡಿಸಿದರು.

ಸುಂದರ್‌ಗಢದ ಕೆ.ಬಾಲಂಗ್ ಬಳಿ ನಡೆದ ಅಪಘಾತದಲ್ಲಿ ಹಲವು ಜೀವಗಳು ಬಲಿಯಾದ ಮತ್ತು ಗಾಯಗೊಂಡವರ ಸುದ್ದಿ ಕೇಳಿ ದುಃಖವಾಗಿದೆ. ಗಾಯಗೊಂಡವರು ಶೀಘ್ರವೇ ಚೇತರಿಸಿಕೊಳ್ಳಲಿ ಮತ್ತು ಅಗಲಿದವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾನು ಪ್ರಾರ್ಥಿಸುತ್ತೇನೆ ಅತಾ ಟ್ವೀಟ್‌ ಮೂಲಕ ತಿಳಿಸಿದ್ದಾರೆ. ಇಂತಹ ಅಪಘಾತ ಪ್ರಕರಣಗಳು ಇದೇ ಮೊದಲೇನಲ್ಲ, ಈ ಹಿಂದೆಯೂ ಸಹ ನಡೆದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+