ತೆಲಂಗಾಣಕ್ಕೆ ಕಾಂಗ್ರೆಸ್ ನೀಡಿದ 6 ಗ್ಯಾರಂಟಿಗಳು ಪ್ರತಿ ಕುಟುಂಬಕ್ಕೂ ನೆರವು: ರಾಹುಲ್ ಗಾಂಧಿ
ಹೈದರಾಬಾದ್, ಅಕ್ಟೋಬರ್ 20: ತೆಲಂಗಾಣ ವಿಧಾನಸಭಾ ಚುನಾವಣೆ ಚುನಾವಣೆಯು 'ದೊರಲ' ತೆಲಂಗಾಣ ಮತ್ತು 'ಪ್ರಜಾಲ' ತೆಲಂಗಾಣ ನಡುವಿನ ಹೋರಾಟವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ನಾವು ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಗೆ ಅಂತಿಮ ಸ್ಪರ್ಶ ನೀಡುತ್ತಿದ್ದೇವೆ. ಸೋನಿಯಾ ಗಾಂಧಿ ಅವರು ನೀಡಿದ ಆರು ಪ್ರಮುಖ ಭರವಸೆಗಳು ಪ್ರಣಾಳಿಕೆಯ ತಿರುಳಾಗಿದ್ದರೆ, ಇದು ಎಲ್ಲಾ ವಯೋಮಾನದವರು ಮತ್ತು ಸಮುದಾಯಗಳನ್ನು ಒಳಗೊಂಡ ಕಲ್ಯಾಣ ಯೋಜನೆಗಳನ್ನು ಹೊಂದಿರುತ್ತದೆ ಎಂದು ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಿ ಶ್ರೀಧರ್ ಬಾಬು ಹೇಳಿದರು.

ಕಲ್ಯಾಣ ಲಕ್ಷ್ಮಿ ಯೋಜನೆಯಡಿ ಬಿಆರ್‌ಎಸ್ ಸರ್ಕಾರ ನೀಡುತ್ತಿರುವ 1.16 ಲಕ್ಷ ರೂ.ಗೆ ಬದಲಾಗಿ ಬಡ ಹೆಣ್ಣುಮಕ್ಕಳ ಮದುವೆಗೆ 1 ಲಕ್ಷ ಆರ್ಥಿಕ ನೆರವು ಜೊತೆಗೆ ಒಂದು ತೊಲ (10 ಗ್ರಾಂ) ಚಿನ್ನವನ್ನು ನೀಡಲು ಕಾಂಗ್ರೆಸ್ ಮುಂದಾಗಿದೆ. ಪ್ರಮುಖ ಬೇಡಿಕೆಯಾಗಿರುವ ಹಳೆಯ ಪಿಂಚಣಿ ಯೋಜನೆಗೆ ಕಾಂಗ್ರೆಸ್ ಸರ್ಕಾರ ಹಿಂತಿರುಗಲಿದೆ ಎಂದು ನೌಕರರು ಮತ್ತು ಶಿಕ್ಷಕರಿಗೆ ಭರವಸೆ ನೀಡಲು ಪಕ್ಷವು ನಿರ್ಧರಿಸಿದೆ.
ನಾವು ಹಿಮಾಚಲ ಪ್ರದೇಶದಲ್ಲಿ ಹಳೆಯ ಪಿಂಚಣಿ ಯೋಜನೆ ಜಾರಿಯ ಭರವಸೆ ನೀಡಿದ್ದೇವೆ ಮತ್ತು ಅದನ್ನು ಜಾರಿಗೊಳಿಸುತ್ತಿದ್ದೇವೆ. ನಾವು ಇದನ್ನು ತೆಲಂಗಾಣದಲ್ಲೂ ಮಾಡುತ್ತೇವೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ತಮ್ಮ ಸಮುದಾಯಕ್ಕೆ ಸೌಲಭ್ಯ ಕಲ್ಪಿಸಬೇಕು ಎಂದು ಬಯಸಿದ್ದರು. ಅವರ ಬೇಡಿಕೆಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು ಎಂದು ಶ್ರೀಧರ್ ಬಾಬು ಭರವಸೆ ನೀಡಿದರು.
ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳು
ಮಹಾಲಕ್ಷ್ಮಿ ಯೋಜನೆ: ಇದು ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂಪಾಯಿ ಆರ್ಥಿಕ ನೆರವು, ಉಚಿತ ಬಸ್ ಪ್ರಯಾಣ, 500ಕ್ಕೆ ಗ್ಯಾಸ್ ಸಿಲಿಂಡರ್ ನೀಡುವ ಭರವಸೆ ನೀಡುತ್ತದೆ.
ಇಂದಿರಮ್ಮ ಇಂದ್ಲು ಯೋಜನೆ: ಇದು ಬಡವರಿಗೆ ಮನೆ ಕಟ್ಟಲು 5 ಲಕ್ಷ ರೂಪಾಯಿ ನೆರವು ನೀಡುತ್ತದೆ. ತೆಲಂಗಾಣ ಹೋರಾಟಗಾರರಿಗೆ 250 ಚದರ ಗಜ ಭೂಮಿ ಹಂಚಿಕೆ ಮಾಡುವುದು.
ಗೃಹ ಜ್ಯೋತಿ ಯೋಜನೆ: ಕರ್ನಾಟಕ ಮಾದರಿ ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್ ವಿತರಿಸುವುದು. ಯುವ ವಿಕಾಸಂ ಯೋಜನೆ: ಕಾಲೇಜು ವಿದ್ಯಾರ್ಥಿಗಳಿಗೆ 5 ಲಕ್ಷ ರೂಪಾಯಿ ನೆರವು ನೀಡುವುದು.
ಚೆಯುತ ಯೋಜನೆ: ಹಿರಿಯ ನಾಗರಿಕರು, ವಿಧವೆಯರು, ಅಂಗವಿಕಲರು ಮತ್ತು ಇತರರಿಗೆ 4,000 ರೂಪಾಯಿ ಮಾಸಿಕ ಪಿಂಚಣಿ, ರಾಜೀವ್ ಆರೋಗ್ಯಶ್ರೀ ಅಡಿಯಲ್ಲಿ 10 ಲಕ್ಷ ರೂಪಾಯಿ ಆರೋಗ್ಯ ವಿಮೆ ಒದಗಿಸುವುದು. ರೈತು ಭರೋಸಾ ಯೋಜನೆ: ರೈತರಿಗೆ ವರ್ಷಕ್ಕೆ 15,000 ರೂಪಾಯಿ ಮತ್ತು ಕೃಷಿ ಕಾರ್ಮಿಕರಿಗೆ ವರ್ಷಕ್ಕೆ 12,000 ರೂಪಾಯಿ ನೀಡುವುದು.
ಬಡ ವಿದ್ಯಾರ್ಥಿನಿಯರಿಗೆ ಮತ್ತು ಬಡ ಮಹಿಳೆಯರಿಗೆ ಹೈದರಾಬಾದ್ ಮೆಟ್ರೋ ರೈಲಿನಲ್ಲಿ ಉಚಿತ ಪ್ರಯಾಣವನ್ನು ಒದಗಿಸುವುದು ಕಾಂಗ್ರೆಸ್‌ನ ಪ್ರಸ್ತಾಪಗಳಲ್ಲಿ ಒಂದಾಗಿದೆ, ಇದು ಇನ್ನೂ ಅಂತಿಮಗೊಂಡಿಲ್ಲ. ಆದರೆ, ಪಕ್ಷವು ವಿದ್ಯಾರ್ಥಿಗಳಿಗೆ ಉಚಿತ ಇಂಟರ್ನೆಟ್ ನೀಡಲು ನಿರ್ಧರಿಸಿದೆ.












Click it and Unblock the Notifications