ಅಮೋನಿಯಾ ಅನಿಲ ಸೋರಿಕೆ: 25 ಜನ ದಾರುಣ ಸಾವು
ಲೂಧಿಯಾನ, ಜೂ. 13: ಟ್ಯಾಂಕರ್ನಿಂದ ಅಮೋನಿಯಾ ಅನಿಲ ಸೋರಿಕೆಯಾಗಿ ಆರು ಮಂದಿ ಸಾವನ್ನಪ್ಪಿ, 100ಕ್ಕೂ ಹೆಚ್ಚು ಜನರು ಉಸಿರಾಟ ತೊಂದರೆಯಿಂದ ಅಸ್ವಸ್ಥರಾಗಿದ್ದಾರೆ. ಶನಿವಾರ ಮುಂಜಾನೆ ಲೂಧಿಯಾನದಲ್ಲಿ ಘಟನೆ ಸಂಭವಿಸಿದ್ದು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದೆ.
ಲೂಧಿಯಾನದ ದೋರ್ಹಾ ಬೈಪಾಸ್ ರಸ್ತೆಯಲ್ಲಿನ ಮೇಲ್ಸೇತುವೆಯ ಕೆಳಗೆ ಸಾಗುತ್ತಿದ್ದ ಟ್ಯಾಂಕರ್ ನಿಂದ ಅನಿಲ ಸೋರಿಕೆಯಾಗಿದೆ. ಅನಿಲ ಸೋರಿಕೆ ಪರಿಣಾಮ ಮೇಲ್ಸೆತುವೆ ಸಂವಾರ ಬಂದ್ ಆಗಿದೆ. 25 ಕಿಲೋ ಮೀಟರ್ ದೂರಕ್ಕೆ ವಾಹನಗಳು ನಿಂತುದ್ದು ಟ್ರಾಫಿಕ್ ಜಾಮ್ ಆಗಿದೆ.[ಗೋದಾವರಿ ಅನಿಲ ದುರಂತದ ಚಿತ್ರಗಳನ್ನು ನೋಡಿ]

ಈ ಬಗ್ಗೆ ಮಾಹಿತಿ ನೀಡಿರುವ ದೋರ್ಹಾ ಪೊಲೀಸ್ ಠಾಣೆಯ ಅಧಿಕಾರಿ ರಜನೀಶ್ ಕುಮಾರ್ ಸೂದ್, ಅಸ್ವಸ್ಥರಾದವರನ್ನು ಲೂಧಿಯಾನ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಎನ್ಡಿಆರ್ಎಫ್ ಸಿಬ್ಬಂದಿ ಧಾವಿಸಿ ರಕ್ಷಣಾ ಕ್ರಮ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.[ಆಂಧ್ರ ಅನಿಲ ದುರಂತ ಯಾಕಾಯಿತು?]
ಗುಜರಾತ್ ನೋಂದಣಿ ಸಂಖ್ಯೆಯ ಟ್ಯಾಂಕರ್ ನಿಂದ ಅನಿಲ ಸೋರಿಕೆಯಾಗಿದ್ದು, ಕೆಲವೇ ಕ್ಷಣದಲ್ಲಿ 25 ಜನರ ಪ್ರಾಣ ಬಲಿ ಪಡೆದುಕೊಂಡಿದೆ.
6 dead & several admitted to hospital after ammonia gas leaked from a tanker at Doraha, Ludhiana last night pic.twitter.com/09Ze1p62oO
— ANI (@ANI_news) June 13, 2015 











Click it and Unblock the Notifications