ಪಿಎಂ ಸ್ವನಿಧಿ ಯೋಜನೆ; 5 ಲಕ್ಷಕ್ಕೂ ಅಧಿಕ ಅರ್ಜಿಗಳು
ನವದೆಹಲಿ, ಆಗಸ್ಟ್ 12 : ಪಿಎಂ ಸ್ವನಿಧಿ ಯೋಜನೆಯಡಿ 5 ಲಕ್ಷ ಜನರು ಸಾಲ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಬೀದಿ ಬದಿ ವ್ಯಾಪಾರಿಗಳಿಗೆ ನೆರವಾಗಲು ಸರ್ಕಾರ ಪಿಎಂ ಸ್ವನಿಧಿ ಯೋಜನೆ ಘೋಷಣೆ ಮಾಡಿತ್ತು.
ಕೋವಿಡ್ 19 ಪರಿಸ್ಥಿತಿಯಲ್ಲಿ ನಷ್ಟ ಅನುಭವಿಸಿದ್ದ ಬೀದಿ ಬದಿ ವ್ಯಾಪಾರಿಗಳಿಗೆ ಪುನಃ ವ್ಯಾಪಾರ ಸ್ಥಾಪಿಸಲು ಪಿಎಂ ಸ್ವನಿಧಿ ಯೋಜನೆಯಡಿ ಸಾಲ ಸೌಲಭ್ಯ ನೀಡಲಾಗುತ್ತದೆ. ಇದಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.
ಪಿಎಂ ಸ್ವನಿಧಿ ಯೋಜನೆಗೆ ಜನರು ಮೆಚ್ಚುಗೆ ಸೂಚಿಸಿದ್ದಾರೆ. ಯೋಜನೆಯಡಿ ಸಾಲ ಪಡೆದು ವ್ಯಾಪಾರವನ್ನು ಪುನಃ ಸ್ಥಾಪನೆ ಮಾಡಲು ಅವರು ಬಯಸಿದ್ದಾರೆ ಎಂದು ಸರ್ಕಾರ ಹೇಳಿದೆ. ಯೋಜನೆಯಡಿ ವ್ಯಾಪಾರಿಗಳಿಗೆ 10 ಸಾವಿರ ರೂ. ಸಾಲವನ್ನು ನೀಡಲಾಗುತ್ತದೆ.

ಈಗಾಗಲೇ 5 ಲಕ್ಷ ಅರ್ಜಿಗಳು ಯೋಜನೆಯಡಿ ಬಂದಿವೆ. 41 ದಿನಗಳಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 10 ಸಾವಿರ ರೂ. ಸಾಲವನ್ನು ವ್ಯಾಪಾರಿಗಳು ಒಂದು ವರ್ಷದ ಅವಧಿಯಲ್ಲಿ ಕಂತುಗಳಲ್ಲಿ ಪಾವತಿ ಮಾಡಬಹುದು.
ಪಿಎಂ ಸ್ವನಿಧಿ ಯೋಜನೆಯಡಿ ಸಾಲ ಪಡೆಯಲು ವ್ಯಾಪಾರಿಗಳಿ ಡಿಜಿಟಲ್ ಪೆಮೇಂಟ್ ಹೊಂದಿರಬೇಕು. ಅರ್ಜಿಗಳನ್ನು ಸಲ್ಲಿಸಲು ಸರ್ಕಾರ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿತ್ತು. ಗುರುತಿನ ಚೀಟಿ ಹೊಂದಿರುವ ವ್ಯಾಪಾರಿಗಳು ಸಾಲ ಪಡೆಯಲು ಅರ್ಹರು.












Click it and Unblock the Notifications