ಸುಪ್ರೀಂ ಕೋರ್ಟ್‌ಗೆ 5 ನ್ಯಾಯಧೀಶರ ನೇಮಕ, ಯಾರ‍್ಯಾರು ತಿಳಿಯಿರಿ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುಪ್ರೀಂ ಕೋರ್ಟ್‌ಗೆ ಐವರು ಹೊಸ ನ್ಯಾಯಾಧೀಶರನ್ನು ನೇಮಿಸುವ ಆದೇಶಗಳಿಗೆ ಶನಿವಾರ ಸಹಿ ಹಾಕಿದ್ದರು.
ನವದೆಹಲಿ, ಫೆಬ್ರವರಿ 6: ಭಾರತದ ಸುಪ್ರೀಂ ಕೋರ್ಟ್‌ಗೆ ಹೊಸದಾಗಿ ಐವರು ನ್ಯಾಯಾಧೀಶರು ನೇಮಕವಾಗಿದ್ದಾರೆ. ಅವರಿಗೆ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕಗೊಂಡ ಐವರು ಹೊಸ ನ್ಯಾಯಾಧೀಶರಿಗೆ ಸೋಮವಾರ ಪ್ರಮಾಣ ವಚನ ಬೋಧಿಸಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುಪ್ರೀಂ ಕೋರ್ಟ್‌ಗೆ ಐವರು ಹೊಸ ನ್ಯಾಯಾಧೀಶರನ್ನು ನೇಮಿಸುವ ಆದೇಶಗಳಿಗೆ ಶನಿವಾರ ಸಹಿ ಹಾಕಿದ್ದರು. ಅದರಂತೆ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ ನೂತನ ನ್ಯಾಯಮೂರ್ತಿಗಳನ್ನು ಪದಗ್ರಹಣ ನಡೆಯಿತು.
ಹೊಸದಾಗಿ ನೇಮಕಗೊಂಡ ಐವರು ನ್ಯಾಯಾಧೀಶರಲ್ಲಿ ರಾಜಸ್ಥಾನ ಹೈಕೋರ್ಟ್ (ಎಚ್‌ಸಿ) ಮುಖ್ಯ ನ್ಯಾಯಮೂರ್ತಿ ಪಂಕಜ್ ಮಿಥಾಲ್, ಪಾಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜಯ್ ಕರೋಲ್, ಮಣಿಪುರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿವಿ ಸಂಜಯ್ ಕುಮಾರ್, ಪಾಟ್ನಾ ಹೈಕೋರ್ಟ್ ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಕಳೆದ ವರ್ಷ ಡಿಸೆಂಬರ್ 13ರಂದು ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಈ ಹೆಸರುಗಳನ್ನು ಉನ್ನತಿಗೆ ಶಿಫಾರಸು ಮಾಡಿತ್ತು. ಕೊಲಿಜಿಯಂ ಎಂಬುದು ಸುಪ್ರೀಂ ಕೋರ್ಟ್‌ಗೆ ನ್ಯಾಯಧೀಶರನ್ನು ನೇಮಕ ಮಾಡುವ ವ್ಯವಸ್ಥೆ ಅಥವಾ ಸದಸ್ಯರ ಗುಂಪು. ಫೆಬ್ರವರಿ 3ರಂದು, ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ಕೇಂದ್ರಕ್ಕೆ ಸೂಚನೆಯನ್ನು ನೀಡಿತ್ತು. ಕೇಂದ್ರ ಸರ್ಕಾರವು ನ್ಯಾಯಾಂಗ ನೇಮಕಾತಿಗಳು ಮತ್ತು ವರ್ಗಾವಣೆಗಳನ್ನು ವಿಳಂಬಗೊಳಿಸುವುದನ್ನು ಮುಂದುವರಿಸಿದರೆ ಖಂಡಿತ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ನ್ಯಾಯಮೂರ್ತಿ ಕೌಲ್ ಅವರು ಕೇಂದ್ರಕ್ಕೆ, ನೀವು ನೇಮಕಾತಿ ಇಲ್ಲವೆ ವರ್ಗಾವಣೆಗಳನ್ನು ಬಾಕಿ ಇರಿಸಿದರೆ, ಕೆಲವು ಅತ್ಯಂತ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡುತ್ತೀರಿ ಎಂದು ಎಚ್ಚರಿಕೆ ನೀಡಿದ್ದರು. ಐದು ಹೊಸ ನ್ಯಾಯಾಧೀಶರ ಪ್ರಮಾಣ ವಚನ ಸ್ವೀಕಾರದೊಂದಿಗೆ ಉನ್ನತ ನ್ಯಾಯಾಲಯದ ಬಲವು 27ರಿಂದ 32ಕ್ಕೆ ಏರಿದೆ. ಈಗ ಕೇವಲ ಎರಡು ನ್ಯಾಯಾಧೀಶರ ಹುದ್ದೆಗಳು ಖಾಲಿ ಉಳಿದಿದೆ. ಸುಪ್ರೀಂ ಕೋರ್ಟ್‌ನಲ್ಲಿ ಒಟ್ಟಾಗಿ 34 ನ್ಯಾಯಾಧೀಶರ ಹುದ್ದೆಗಳಿವೆ.
ಸುಪ್ರೀಂ ಕೋರ್ಟ್ ಕೊಲಿಜಿಯಂ ಜನವರಿ 31ರಂದು ಸುಪ್ರೀಂ ಕೋರ್ಟ್‌ಗೆ ಇಬ್ಬರು ನ್ಯಾಯಾಧೀಶರ ಹೆಸರನ್ನು ಶಿಫಾರಸು ಮಾಡಿತ್ತು. ಈ ಎರಡು ಹೆಸರುಗಳೆಂದರೆ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್. ಆಗಸ್ಟ್ 26, 2021ರ ನಂತರ ಒಂಬತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಒಟ್ಟಿಗೆ ನೇಮಕಗೊಂಡಾಗ ಒಂದೇ ಬ್ಯಾಚ್‌ನಲ್ಲಿ ಇಷ್ಟೊಂದು ನ್ಯಾಯಾಧೀಶರನ್ನು ನೇಮಕ ಮಾಡುವುದು ಇದು ಎರಡನೇ ಬಾರಿ.












Click it and Unblock the Notifications