ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಜೋ ಬೋಲೆ ಸೋ ನಿಹಾಲ್' ಎಂದ 40 ಕ್ರೈಸ್ತ ಕುಟುಂಬಗಳು

By Kiran B Hegde
|
Google Oneindia Kannada News

ಅಮೃತಸರ, ಜ. 2: ಎನ್‌ಡಿಎ ಅಂಗಪಕ್ಷವಾಗಿರುವ ಶಿರೋಮಣಿ ಅಕಾಲಿ ದಳ ಆಡಳಿತದಲ್ಲಿರುವ ಪಂಜಾಬ್‌ನಲ್ಲಿ ಆರ್‌ಎಸ್ಎಸ್ ಘರ್ ವಾಪಸಿ (ಮರುಮತಾಂತರ) ಮುಂದುವರಿಸಿದೆ.

ಅಮೃತಸರದ ಗುರು-ಕಿ-ವಡಾಯಿಯಲ್ಲಿರುವ ಜೀವನ್ ಸಿಂಗ್ ಗುರುದ್ವಾರಾದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸುಮಾರು 40 ಕ್ರೈಸ್ತ ಕುಟುಂಬಗಳನ್ನು ಪುನಃ ಸಿಖ್ ಧರ್ಮಕ್ಕೆ ಮತಾಂತರಿಸಿದೆ. ಮತಾಂತರ ಪ್ರಕ್ರಿಯೆ ಮುಗಿದ ನಂತರ ಆರ್‌ಎಸ್ಎಸ್ ಕಾರ್ಯಕರ್ತನೋರ್ವ 'ಜೋ ಬೋಲೆ ಸೋ ನಿಹಾಲ್' ಎಂದು ಕೂಗಿದಾಗ ಮತಾಂತರ ಹೊಂದಿದ ಕುಟುಂಬಗಳು ದನಿಗೂಡಿಸಿದವು.

ಮರುಮತಾಂತರವನ್ನು ಸಮರ್ಥಿಸಿಕೊಂಡಿರುವ ಆರ್‌ಎಸ್ಎಸ್ ಸಮನ್ವಯ ಸಮಿತಿಯ ಪಂಜಾಬ್ ಮುಖ್ಯಸ್ಥ ದಿನೇಶ್, "ಪಂಜಾಬ್‌ನಲ್ಲಿರುವ ಒಂದೂ ಗುರುದ್ವಾರ ಮುಚ್ಚಲು ಬಿಡುವುದಿಲ್ಲ" ಎಂದು ಹೇಳಿದ್ದಾರೆ. [ಮದುವೆಗಾಗಿ ಇಸ್ಲಾಂಗೆ ಮತಾಂತರ ತಪ್ಪು]

sikh

ಪಂಜಾಬ್ ಗಡಿಯಲ್ಲಿ ಹೆಚ್ಚಾಗಿ ಕಂಡುಬರುವ ಮಝಾಬಿ ಸಿಖ್ಖರಲ್ಲಿ ಶೇ. 40ರಷ್ಟು ಜನರು ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದಾರೆ. ಮಝಾಬಿ ಸಿಖ್ಖರಿಗೆ ಪಂಜಾಬ್‌ನಲ್ಲಿ ಪರಿಶಿಷ್ಟ ಜಾತಿ ಸ್ಥಾನವಿದೆ. [ಮತಾಂತರ ಏಕೆ? ಕಾನೂನು ಏನು ಹೇಳುತ್ತದೆ?]

ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಹಾಗೂ ಅವರ ಮಗ ಮತ್ತು ಉಪಮುಖ್ಯಮಂತ್ರಿಯೂ ಆಗಿರುವ ಸುಖಬೀರ್ ಸಿಂಗ್ ಬಾದಲ್ ಇಬ್ಬರೂ ಬಲವಂತದ ಮತಾಂತರವನ್ನು ಟೀಕಿಸಿದ ಮರುದಿನವೇ ಈ ಮರುಮತಾಂತರ ನಡೆದಿರುವುದು ವಿಶೇಷ. [ದಿಲ್ಶನ್ ಬಳಿ ಮತಾಂತರ ಬಗ್ಗೆ ಶೆಹ್ಜಾದ್ ಹೇಳಿದ್ದೇನು?]

ಕೆಲವು ದಿನಗಳ ಹಿಂದಷ್ಟೇ ಪಂಜಾಬ್‌ನಲ್ಲಿ ಧರ್ಮ ಜಾಗರಣ ಮಂಚ್ ನೇತೃತ್ವದಲ್ಲಿ 128 ಕ್ರೈಸ್ತ ಕುಟುಂಬಗಳು ಸಿಖ್ ಧರ್ಮಕ್ಕೆ ಮರು ಮತಾಂತರವಾಗಿದ್ದರು.

English summary
In Punjab he Rashtriya Swayamsevak Sangh (RSS) oversaw the “religious reconversion” Tuesday of 40 Mazhabi Sikh families who had embraced. RSS cadres raised cries of “Jo Bole So Nihaal”, which was repeated by boys of the reconverted families.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X