ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ 4 ವರ್ಷಗಳ ಸಾಧನೆ : ನಕ್ಸಲಿಸಂ ಹತ್ತಿಕ್ಕಿದ್ದು ಹೇಗೆ?

By Prasad
|
Google Oneindia Kannada News

ನರೇಂದ್ರ ಮೋದಿ ಸರಕಾರ ಕಳೆದ 4 ವರ್ಷಗಳಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದೆ. ಕೆಲವು ಕಷ್ಟಕರ ನಿರ್ಧಾರಗಳನ್ನು ತೆಗೆದುಕೊಂಡು ಅಗ್ನಿಪರೀಕ್ಷೆಯನ್ನು ಎದುರಿಸಿದೆ. ಗೃಹ ಸಚಿವಾಲಯ ಈ ನಾಲ್ಕು ವರ್ಷಗಳಲ್ಲಿ ಎದುರಿಸಿದ ಅತಿದೊಡ್ಡ ಸವಾಲೆಂದರೆ ನಕ್ಸಲೀಯರು ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ನಿಗ್ರಹಿಸುವುದು.

ಗೃಹ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶಗಳನ್ನು ಗಮನಿಸಿದರೆ, ಎಡಪಂಥೀಯ ಉಗ್ರವಾದವನ್ನು ಹತ್ತಿಕ್ಕುವಲ್ಲಿ ಇಲಾಖೆ ಸಾಕಷ್ಟು ಯಶಸ್ವಿಯಾಗಿದೆ. ಮಂತ್ರಾಲಯದ ಪ್ರಕಾರ, ಶೇ.36ರಷ್ಟು ಹಿಂಸಾತ್ಮಕ ಘಟನೆಗಳು ಕಡಿಮೆಯಾಗಿದ್ದು, 6,524 ಇದ್ದದ್ದು ಇದೀಗ 4,136ಗೆ ಇಳಿದಿದೆ. ಜೊತೆಗೆ ಗೃಹ ಸಚಿವಾಲಯ ತೆಗೆದುಕೊಂಡಿರುವ ಇತರ ತೀರ್ಮಾನಗಳತ್ತ ಒಂದು ಕಣ್ಣು ಹಾಯಿಸೋಣ.

ಮೋದಿ ಸರ್ಕಾರಕ್ಕೆ 4ರ ಸಂಭ್ರಮ, ಟಾಪ್ 15ಯೋಜನೆಗಳುಮೋದಿ ಸರ್ಕಾರಕ್ಕೆ 4ರ ಸಂಭ್ರಮ, ಟಾಪ್ 15ಯೋಜನೆಗಳು

ರಸ್ತೆ ಸಂಪರ್ಕ : ಎಡಪಂಥೀಯ ಉಗ್ರವಾದದಿಂದ ತೀವ್ರ ತೊಂದರೆಗೊಳಗಾಗಿದ್ದ ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ನಿರ್ಮಿಸಲು ಸರಕಾರ 2016ರ ಡಿಸೆಂಬರ್ ನಲ್ಲಿ ಯೋಜನೆಗೆ ಅನುಮೋದನೆ ನೀಡಿತ್ತು. ದೇಶದ ಪೂರ್ವಭಾಗದಲ್ಲಿರುವ 9 ರಾಜ್ಯಗಳಲ್ಲಿ, 44 ಜಿಲ್ಲೆಗಳಲ್ಲಿ 5,412 ಕಿ.ಮೀ. ಉದ್ದರ ರಸ್ತೆ ಸಂಪರ್ಕವನ್ನು 11,725 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.

4 years of Modi sarkar: How Home Ministry took the fight to the naxalssarkar: How Home Ministry took the fight to the naxals

ಕೇಂದ್ರದಿಂದ ವಿಶೇಷ ಸಹಾಯ : ಎಡ ಪಂಥೀಯ ಉಗ್ರವಾದದಿಂದ ತೀವ್ರ ಸಂಕಷ್ಟಕ್ಕೀಡಾಗಿರುವ 35 ಜಿಲ್ಲೆಗಳಲ್ಲಿ, ಮೂಲಭೂತ ಸೌಕರ್ಯ ಮತ್ತು ಇತರ ತ್ವರಿತ ಸೇವೆಗಳನ್ನು ಒದಗಿಸಲು ಪ್ರತಿವರ್ಷಕ್ಕೆ ಸಾವಿರ ಕೋಟಿಯಂತೆ 3 ಸಾವಿರ ಕೋಟಿ ರುಪಾಯಿಯನ್ನು ಕೇಂದ್ರ ವಿಶೇಷವಾಗಿ ತೆಗೆದಿಟ್ಟಿದೆ. 2017-18ರಲ್ಲಿ ಕೇಂದ್ರ ಸರಕಾರ 175 ಕೋಟಿ ರುಪಾಯನ್ನು ಈಗಾಗಲೆ ಬಿಡುಗಡೆ ಮಾಡಿದೆ.

ಸಮಿತಿಗಳ ರಚನೆ : ನಕ್ಸಲೀಯರ ಉಗ್ರವಾದದಿಂದ ನಲುಗಿರುವ ಜಿಲ್ಲೆಗಳಲ್ಲಿ ಅನುಷ್ಠಾನಗೊಳ್ಳಲಿರುವ ಯೋಜನೆಗಳ ಅವಗಾಹನೆಗೆಂದು ಎರಡು ಸಮಿತಿಗಳನ್ನು ರಚಿಸಲಾಗಿದೆ. ಈ ಪ್ರದೇಶಗಳಿಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸುವುದು ಮತ್ತು ಸಾಧನೆ ಸೂಚ್ಯಂಕವನ್ನು ಗಮನಿಸಲು ಮತ್ತೊಂದು ಸಮಿತಿ ರಚಿಸಲಾಗಿದೆ. ಇವೆರಡು ಸಮಿತಿಗಳು ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿವೆ.

ಮೋದಿ ಸರ್ಕಾರಕ್ಕೆ ನಾಲ್ಕು ವರ್ಷ: ಹರ್ಷವೋ, ನಿರಾಶೆಯೋ?!ಮೋದಿ ಸರ್ಕಾರಕ್ಕೆ ನಾಲ್ಕು ವರ್ಷ: ಹರ್ಷವೋ, ನಿರಾಶೆಯೋ?!

ಪ್ರಮುಖ ಸಾಧನೆಗಳು (ಭದ್ರತೆ) : ಮೋದಿ ಸರಕಾರ ರಚನೆಯಾಗಾಗಿನಿಂದ ಇಂದಿನವರೆಗೆ ಮತ್ತು ಅದರ ಹಿಂದಿನ ನಾಲ್ಕು ವರ್ಷಗಳ ಎಡಪಂಥೀಯ ಉಗ್ರತಾವಾದವನ್ನು ತುಲನೆ ಮಾಡಿ ನೋಡಿದಾಗ ಭದ್ರತೆಯ ವಿಷಯದಲ್ಲಿ ಕೇಂದ್ರ ಸರಕಾರ ಭಾರೀ ಪ್ರಗತಿ ಸಾಧಿಸಿದೆ.

* ಹಿಂಸಾತ್ಮಕ ಘಟನೆಗಳು ಶೇ.36ರಷ್ಟು ಕಡಿಮೆಯಾಗಿವೆ.
* ನಕ್ಸಲೀಯರ ದಾಳಿಯಿಂದ ಆಗುತ್ತಿದ್ದ ಸಾವುಗಳು ಶೇ.55ರಷ್ಟು ಕಡಿಮೆಯಾಗಿದೆ.
* ನಕ್ಸಲೀಯರು ಉಗ್ರವಾದವನ್ನು ತ್ಯಜಿಸುವುದು ಶೇ.14ಕ್ಕೆ ಏರಿದೆ.
* ಶೇ.143ರಷ್ಟು ನಕ್ಸಲೀಯರು ಶರಣಾಗಿದ್ದಾರೆ.

ಇದಲ್ಲದೆ,

* ಎಡಪಂಥೀಯ ಉಗ್ರವಾದ ಇದ್ದ ರಾಜ್ಯಗಳ ಸಂಖ್ಯೆ 10ರಿಂದ 9ಕ್ಕೆ ಇಳಿದಿದೆ.
* ಹಿಂಸಾತ್ಮಕ ಘಟನೆ ವರದಿಯಾಗುತ್ತಿದ್ದ ಜಿಲ್ಲಗಳ ಸಂಖ್ಯೆ 76ರಿಂದ 58ಕ್ಕೆ ಇಳಿದಿದೆ.
* ಪೊಲೀಸ್ ಠಾಣೆಯಲ್ಲಿ ವರದಿಯಾಗುತ್ತಿದ್ದ ದೂರುಗಳು 330ರಿಂದ 291ಕ್ಕೆ ಇಳಿದಿವೆ.

ಅಭಿವೃದ್ಧಿಯಲ್ಲಿ ಪ್ರಮುಖ ಸಾಧನೆಗಳು

ಆಂಧ್ರಪ್ರದೇಶ, ಬಿಹಾರ, ಛತ್ತೀಸಘಡ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಓರಿಸ್ಸಾ ಮತ್ತು ಉತ್ತರ ಪ್ರದೇಶ ಮುಂತಾದ ಉಗ್ರತಾವಾದದಿಂದ ನಲುಗಿದ ರಾಜ್ಯಗಳಲ್ಲಿ, 34 ಜಿಲ್ಲೆಗಳಲ್ಲಿ ರಸ್ತೆ ಸಂಪರ್ಕ ಒದಗಿಸಲಾಗಿದೆ. ಅಲ್ಲದೆ, ದೂರಸಂಪರ್ಕ ಉತ್ತಮಪಡಿಸಲು ಅತ್ಯಂತ ಕ್ಲಿಷ್ಟಕರ ಪ್ರದೇಶಗಳಲ್ಲಿಯೂ 2,329 ಟವರ್ ಗಳನ್ನು ಅಳವಡಿಸಲಾಗಿದೆ.

ನಕ್ಸಲೀಯರಿಂದ ದಮನಕ್ಕೊಳಗಾದ 32 ಅತಿಹೆಚ್ಚು ಜಿಲ್ಲೆಗಳಲ್ಲಿ ಪ್ರತಿ 3 ಕಿ.ಮೀ.ಗೊಂದರಂತೆ 1789 ಪೋಸ್ಟ್ ಆಫೀಸ್ ಗಳನ್ನು ತೆರೆಯಲು ಸೂಚಿಸಲಾಗಿದೆ. ಇವುಗಳಲ್ಲಿ 428 ಅಂಚೆ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ಕಳೆದ 33 ತಿಂಗಳುಗಳಲ್ಲಿ 35 ಜಿಲ್ಲೆಗಳಲ್ಲಿ ಬ್ಯಾಂಕ್ ಎಟಿಎಂಗಳನ್ನು ತೆರೆಯಲಾಗಿದೆ. ಈ ಎಲ್ಲ ಯೋಜನೆಗಳು 2020ರವರೆಗೆ ಮುಂದುವರಿಯಲಿವೆ.

English summary
4 years of Narendra Modi government : How Home Ministry lead by Rajnath Singh took the fight to the naxals and imporved affected by Left Wing Terrorism (LWT).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X