• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದ ನಾಲ್ವರು ಸಹಪಾಠಿಗಳ ಬಂಧನ

|

ಡೆಹ್ರಾಡೂನ್ (ಉತ್ತರಾಖಂಡ್), ಸೆಪ್ಟೆಂಬರ್ 18: ಇಲ್ಲಿನ ವಸತಿ ಶಾಲೆಯ 16 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪದಲ್ಲಿ ಆಕೆಯ ನಾಲ್ವರು ಸಹಪಾಠಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಕಳೆದ ತಿಂಗಳು ಆಕೆಯ ಮೇಲೆ ಅತ್ಯಾಚಾರ ನಡೆದಿತ್ತು. ಈ ಪ್ರಕರಣವು ತಿಂಗಳ ನಂತರ ಬೆಳಕಿಗೆ ಬಂದಿತ್ತು. ಡೆಹ್ರಾಡೂನ್ ನ ಹಿರಿಯ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಗೆ ಅತ್ಯಾಚಾರ ಆರೋಪದ ಬಗ್ಗೆ ಮಾಹಿತಿ ದೊರೆತ ಮೇಲೆ ಅವರು ತನಿಖೆಗೆ ಆದೇಶ ಮಾಡಿದ್ದರು.

ರಿವಾರಿ: ಅತ್ಯಾಚಾರದ ನಂತರ ತಾನೇ ವೈದ್ಯರಿಗೆ ಫೋನಾಯಿಸಿದ್ದ ಆರೋಪಿ!

ಸಾಮೂಹಿಕ ಅತ್ಯಾಚಾರದ ಆರೋಪದಲ್ಲಿ 17 ವರ್ಷ ವಯಸ್ಸಿನ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣ ಬಯಲಾಗದಂತೆ ನೋಡಿಕೊಳ್ಳಲು ಶಾಲೆಯ ಅಧಿಕಾರಿಗಳು ಯತ್ನಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಸಂತ್ರಸ್ತೆಯು ಹಾಸ್ಟೆಲ್ ಗೆ ಹಿಂತಿರುಗಿದ ಮೇಲೆ ಅಲ್ಲಿನ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದು, ನಾಲ್ವರ ವರದಿ ಕ್ರಮ ತೆಗೆದುಕೊಳ್ಳುವಂತೆ ಕೇಳಿಕೊಂಡಿದ್ದಾಳೆ. ಆದರೆ ಈ ವಿಷಯ ಹೊರಗೆ ತಿಳಿಸದಂತೆ ಸುಮ್ಮನಿರಿಸಲಾಗಿದೆ. ಆಮೇಲೆ ಆಡಳಿತಾಧಿಕಾರಿಗೆ ಮಾಹಿತಿ ನೀಡಲಾಗಿದೆ.

ಶಾಲೆಯ ನಿರ್ದೇಶಕ, ಪ್ರಾಂಶುಪಾಲರು, ಆಡಳಿತಾಧಿಕಾರಿ, ಅವರ ಪತ್ನಿ ಹಾಗೂ ಹಾಸ್ಟೆಲ್ ನ ಜವಾಬ್ದಾರಿ ಹೊತ್ತಿರುವವರು ಎಲ್ಲರನ್ನೂ ಸಾಕ್ಷ್ಯ ನಾಶದ ಆರೋಪದ ಮೇಲೆ ಬಂಧಿಸಲಾಗಿದೆ. ಪೋಕ್ಸೋ ಕಾಯ್ದೆಯಡಿ ಸಾಕ್ಷ್ಯ ನಾಶದ ಪ್ರಕರಣ ಕೂಡ ದಾಖಲಿಸಲಾಗಿದೆ.

ಕೋಲಾರದಲ್ಲಿ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ: 45 ದಿನದಲ್ಲೇ ಗಲ್ಲು ಶಿಕ್ಷೆ

ಈ ಘಟನೆಯು ಆಗಸ್ಟ್ ಹದಿನಾಲ್ಕರಂದು ನಡೆದಿದೆ. ವಿದ್ಯಾರ್ಥಿನಿ ವ್ಯಾಸಂಗ ಮಾಡುತ್ತಿರುವ ಅದೇ ವಸತಿ ಶಾಲೆಯ ನಾಲ್ವರು ಅತ್ಯಾಚಾರ ಎಸಗಿದ್ದಾರೆ. ಈ ಬಗ್ಗೆ ಪೊಲೀಸ್ ಅಧಿಕಾರಿ ನಿವೇದಿತಾ ಕುರೇಟಿ ಅವರಿಗೆ ದೂರು ಬಂದು, ಆ ನಂತರ ಅವರು ವಿಚಾರಣೆಗೆ ಆದೇಶಿಸಿದಾಗ ಆರೋಪದಲ್ಲಿ ಸತ್ಯವಿದೆ ಎಂದು ತಿಳಿದುಬಂದಿದೆ.

ವಿದ್ಯಾರ್ಥಿನಿಯ ವೈದ್ಯಕೀಯ ಪರೀಕ್ಷೆ ವರದಿ ಬಂದ ನಂತರವೇ ಮತ್ತಷ್ಟು ವಿವರಗಳು ತಿಳಿಯಲಿವೆ. ಆ ವಿದ್ಯಾರ್ಥಿನಿ ಬೇರೆ ರಾಜ್ಯದವಳು. ಬಂಧಿತ ಬಾಲಾಪರಾಧಿಗಳನ್ನು ಮಂಗಳವಾರ ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ. ಅದೇ ದಿನ ಶಾಲೆಯ ಅಧಿಕಾರಿಗಳನ್ನು ಸಹ ಹಾಜರುಪಡಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

English summary
Four classmates of a 16 year old student allegedly raped her at a Dehradun boarding school last month (August 14), police said on Monday. The four, all aged 17, have been taken into custody for the alleged gang-rape. Police sources said the school authorities tried to hush up the matter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more