Get Updates
Get notified of breaking news, exclusive insights, and must-see stories!

By Election Results 2025: 4 ರಾಜ್ಯಗಳ ಉಪಚುನಾವಣೆ ಫಲಿತಾಂಶ, ಎಎಪಿಗೆ ಪ್ರಚಂಡ ಗೆಲುವು, ಫಲಿತಾಂಶದ ಅಪ್ಡೇಟ್ಸ್

Four States By Election 2025: ದೇಶ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ಜೂನ್ 19ರಂದು ಉಪ ಚುನಾವಣೆ 2025 ನಡೆದಿತ್ತು. ಗುಜರಾತ್ ರಾಜ್ಯದಲ್ಲಿ ಎರಡು ಸೀಟು, ಕೇರಳ, ಪಂಜಾಬ್ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ ಒಂದು ಸೀಟು ಸೇರಿ ಒಟ್ಟು 05 ಸೀಟುಗಳಿಗೆ ಮತದಾನ ನಡೆದಿದ್ದು, ಅದರ ಫಲಿತಾಂಶ ಇಂದು (ಜೂನ್ 23) ಬಿಡುಗಡೆಯಾಗಿದೆ. ಗುಜರಾತ್‌ನ ಒಂದು ಕ್ಷೇತ್ರದಲ್ಲಿ ಆಮ್‌ ಆದ್ಮಿ ಪಕ್ಷ (AAP) ಭರ್ಜರಿ ಗೆಲುವು ಸಾಧಿಸಿದೆ. ಒಂದರಲ್ಲಿ ಮಾತ್ರ ಬಿಜೆಪಿ ಗೆದ್ದಿದೆ. ಈ ಐದು ಕ್ಷೇತ್ರಗಳ ಸೋಲು, ಗೆಲವು, ಅಭ್ಯರ್ಥಿಗಳ ವಿವರ ಇಲ್ಲಿದೆ.

ಉಪಚುನಾವಣೆಯು ಗುಜರಾತ್‌ನ ವಿಸಾವದರ್ ಮತ್ತು ಕಾಡಿ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದಿತ್ತು. ಕೇರಳದ ನೀಲಂಬೂರ್, ಪಂಜಾಬ್‌ನ ಲುಧಿಯಾನ ಪಶ್ಚಿಮ ಮತ್ತು ಪಶ್ಚಿಮ ಬಂಗಾಳದ ಕಾಳಿಗಂಜ್‌ನಲ್ಲಿ ತಲಾ ಒಂದು ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆದು ಫಲಿತಾಂಶವನ್ನು ಚುನಾವಣೆ ಆಯೋಗ ಪ್ರಕಟಿಸಿದೆ.

4 States By Poll 2025 Results AAP Victory in Gujarat and Punjab Know Kerala and West Bengal result

ಗುಜರಾತ್‌ನಲ್ಲಿ ಯಾರಿಗೆ ಗೆಲುವು-ಸೋಲು?

ಚುನಾವಣೆ ಮತ ಫಲಿತಾಂಶಗಳ ಪ್ರಕಾರ, ಗುಜರಾತ್‌ನ ಕಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ರಾಜೇಂದ್ರಕುಮಾರ್ ದಾನೇಶ್ವರ ಚಾವಡಾ ಅವರು ಹಾಗೂ ಅವರ ವಿರುದ್ಧ ಕಾಂಗ್ರೆಸ್‌ನಿಂದ ರಮೇಶ್ವಭಾಯಿ ಚಾವ್ಡಾ ಅವರು ಕಣಕ್ಕಿಳಿದಿದ್ದರು. ಈ ಇಬ್ಬರು ಮಧ್ಯೆ ತೀವ್ರ ಪೈಪೋಟಿ ಉಂಟಾಗಿತ್ತು, ಕೊನೆಗೆ ಬಿಜೆಪಿಯ ಅಭ್ಯರ್ಥಿ ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಿದ್ದಾರೆ.

ಇನ್ನೂ ವಿಸಾವದರ್ ಕ್ಷೇತ್ರದಲ್ಲಿ ಎಎಪಿಯು ಬಿಜೆಪಿಯನ್ನು ಮಕಾಡೆ ಮಲಗಿಸಿದೆ. ಎಎಪಿಯ ಗೋಪಾಲ್ ಇಟಾಲಿಯಾ ಅವರಿಗೆ ಆಶೀರ್ವಸಿದ ಜನರು ಬಹುಮತ ನೀಡಿದ್ದಾರೆ. ಬಿಜೆಪಿಯ ಕಿರಿತ್ ಪಟೇಲ್ ಅವರನ್ನು ಸೋಲಿಸುವ ಮೂಲಕ ಬಿಜೆಪಿಗೆ ಜನ ಬುದ್ಧಿ ಕಲಿಸಿದ್ದಾರೆ.

ಕೇರಳ ಉಪಚುನಾವಣೆ ಫಲಿತಾಂಶ 2025

ರಾಜ್ಯದ ನಿಲಂಬೂರ್ ವಿಧಾನಸಭಾ ಕ್ಷೇತ್ರ ಉಪ ಚುಣಾವಣೆ ಅಖಾಡದಲ್ಲಿ ಕಾಂಗ್ರೆಸ್ ಪಕ್ಷದ ಆರ್ಯಾದನ ಶೌಕತ್ ಅವರು ಸಿಪಿಐಎಂ ಅಭ್ಯರ್ಥಿ ಎಂ.ಸ್ವರಾಜ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಸಿಪಿಐಎಂ ಗೆ ಸೋಲಿನ ಆಘಾತ ನೀಡಿದ್ದಾರೆ. ಕಾಂಗ್ರೆಸ್ ಗೆಲ್ಲುತ್ತಿದ್ದಂತೆ ಶೌಕತ್ ಅವರ ಬೆಂಬಲಿಗರು ಪಟಾಕಿ ಹಚ್ಚಿ, ಸಿಹಿ ತಿನಿಸಿ ಸಂಭ್ರಮಿಸಿದರು.

ಪಂಜಾಬ್ ಗೆಲುವು ಯಾರ ಪಾಲು?

ಪಂಜಾಬ್ ರಾಜ್ಯದ ಲುಧಿಯಾನ ಪಶ್ಚಿಮ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿದ್ದು, ಹೊರಬಿದ್ದ ಫಲಿತಾಂಶದಲ್ಲಿ ಆಮ್‌ ಆದ್ಮಿ ಪಕ್ಷದ ಸಂಜೀವ್ ಅರೋರಾ ಅವರು ಗೆಲುವು ದಾಖಲಿಸಿದ್ದಾರೆ. ಅವರ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ತೊಡೆ ತಟ್ಟಿದ್ದ ಭರತ್ ಭೂಷಣ ಅಶು ಅವರು ಪರಾಭವಗೊಂಡಿದ್ದಾರೆ. ಗುಜರಾತ್ ನಂತರ ಪಂಜಾಬ್‌ನಲ್ಲು ಎಎಪಿ ಪಕ್ಷ ತನ್ನ ಹೊಸ ಖಾತೆ ತೆರೆದಿದೆ.

ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಸಿಹಿ, ಯಾರಿಗೆ ಕಹಿ?

ಈ ರಾಜ್ಯವು ಟಿಎಂಸಿ ಭದ್ರಕೋಟೆ ಎಂಬದು ಸದರಿ ಉಪಚುನಾವಣೆಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಏಕೆಂದರೆ ಟಿಎಂಸಿ ಅಭ್ಯರ್ಥಿ ಅಲಿಫಾ ಅಹ್ಮದ್ ಅವರು ಕಲಿಂಗಜ್ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಬೀಗಿದ್ದಾರೆ. ಪ್ರತಿ ಸ್ಪರ್ಧಿ ಬಿಜೆಪಿ ನಾಯಕ ಆಶಿಶ್ ಘೋಷ್ ಅವರನ್ನು ಮಣಿಸುವಲ್ಲಿ ಟಿಎಂಸಿ ನಾಯಕ ಯಶಸ್ವಿಯಾಗಿದ್ದಾರೆ. ಟಿಎಂಸಿ ಗೆಲ್ಲುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಸಂಭ್ರಮ ಮುಗಿಲು ಮುಟ್ಟಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+