ಕೊರೊನಾ 3ನೇ ಅಲೆ ಕುರಿತು ಭಾರತೀಯ ವೈದ್ಯಕೀಯ ಸಂಘ ಎಚ್ಚರಿಕೆ
ನವದೆಹಲಿ, ಜುಲೈ 12 : ಕೊರೊನಾ 3ನೇ ಅಲೆ ಕುರಿತು ಭಾರತೀಯ ವೈದ್ಯಕೀಯ ಸಂಘ ಎಚ್ಚರಿಕೆ ನೀಡಿದೆ. ಕೊರೊನಾ ಮೂರನೇ ಅಲೆ ಸಿನಿಹದಲ್ಲಿದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಕಡೆ ಗಮನ ಕೊಡಬೇಕು, ಕೊರೊನಾ ಎರಡನೇ ಅಲೆ ಕಡಿಮೆಯಾಗಿದೆ ಎನ್ನುವ ಸಂತಸದಲ್ಲಿ ಮೂರನೇ ಅಲೆಯನ್ನು ಮರೆಯಬಾರದು ಎಂದು ಹೇಳಿದೆ.
ಹಲವು ರಾಜ್ಯಗಳಲ್ಲಿ ಕೊರೊನಾ ನಿಯಮಗಳನ್ನು ಧಿಕ್ಕರಿಸಿ ಜನರು ಒಂದೆಡೆ ಸೇರುವುದು, ಕಾರ್ಯಕ್ರಮಗಳನ್ನು ಆಯೋಜಿಸುವುದು, ಗುಂಪು ಸೇರಿಕೊಂಡು ಪ್ರವಾಸಕ್ಕೆ ಹೋಗುವುದು ಇನ್ನಿತರೆ ವಿಚಾರಗಳು ಗಮನಕ್ಕೆ ಬಂದಿವೆ. ಮೂರನೇ ಅಲೆ ತುಂಬಾ ಸನ್ನಿಹಿತವಾಗಿದೆ ಎಚ್ಚರ ತಪ್ಪಿದರೆ ಅಪಾಯಕ್ಕೆ ನಾಂದಿಯಾಗುತ್ತದೆ ಎಂದು ಹೇಳಲಾಗಿದೆ.
ಪ್ರವಾಸಿ ತಾಣಗಳು, ಧಾರ್ಮಿಕ ಸ್ಥಗಳಗಳಿಗೆ ಜನರು ತೆರಳುತ್ತಿದ್ದಾರೆ, ಕೊರೊನಾ ಲಸಿಕೆಯನ್ನು ಪಡೆಯದೆಯೇ ಹಲವು ಮಂದಿ ಪ್ರವಾಸಗಳಿಗೆ ತೆರಳುತ್ತಿದ್ದಾರೆ.ಇದರಿಂದ ಸೋಂಕು ಬಹುಬೇಗ ತಗುಲುವ ಸಾಧ್ಯತೆ ಇದೆ.

ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಇಳಿಕೆ ಕಾಣುತ್ತಿಲ್ಲ. ಪ್ರವಾಸಿ ತಾಣಗಳಲ್ಲಿ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಚರ್ಚಿಸಿದ್ದಾರೆ. "ದೇಶದಲ್ಲಿ ಕೊರೊನಾ ಎರಡನೇ ಅಲೆ ಇನ್ನೂ ಕೊನೆಯಾಗಿಲ್ಲ. ಜನರು ಕೊರೊನಾ ನಿಯಮಗಳನ್ನು ಮರೆಯಬೇಡಿ' ಎಂದು ಮನವಿ ಮಾಡಿದ್ದಾರೆ.
ಗೋವಾ, ಹಿಮಾಚಲ ಪ್ರದೇಶ, ಕೇರಳ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ಉತ್ತರಾಖಂಡ ಹಾಗೂ ಪಶ್ಚಿಮ ಬಂಗಾಳದ ಕೊರೊನಾ ಪ್ರಕರಣಗಳು ಹಾಗೂ ಈ ರಾಜ್ಯಗಳಲ್ಲಿನ ಲಸಿಕೆ ಪ್ರಕ್ರಿಯೆ ಕುರಿತು ಸಭೆಯಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಸಲಾಗಿದೆ.












Click it and Unblock the Notifications