ಮೂರು ವರ್ಷದೊಳಗೆ 329 ಹುಲಿ, 307 ಆನೆಗಳ ಸಾವು: ಕಾರಣವೇನು?
ನವದೆಹಲಿ,ಜುಲೈ. 26: ಬೇಟೆ, ನೈಸರ್ಗಿಕ ಮತ್ತು ಅಸ್ವಾಭಾವಿಕ ಕಾರಣಗಳಿಂದಾಗಿ ಭಾರತದಲ್ಲಿ ಕಳೆದ ಮೂರು ವರ್ಷಗಳಲ್ಲಿ 329 ಹುಲಿಗಳು ಸಾವನ್ನಪ್ಪಿವೆ.
ಈ ಪೈಕಿ 29 ಮಂದಿ ಕಳ್ಳಬೇಟೆಯಿಂದ ಮತ್ತು 30 ರೋಗಗ್ರಸ್ತ ಕಾರಣದಿಂದ ಸಾವನ್ನಪ್ಪಿವೆ ಎಂದು ಕೇಂದ್ರ ಪರಿಸರ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಸೋಮವಾರ ಲೋಕಸಭೆಯಲ್ಲಿ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದರು. ಸಚಿವರು ನೀಡಿದ ಅಂಕಿ ಅಂಶಗಳ ಪ್ರಕಾರ, 2021ರಲ್ಲಿ ಭಾರತದ ರಾಷ್ಟ್ರೀಯ ಪ್ರಾಣಿ ಹುಲಿಯ ಸಂತತಿ ಸಂಖ್ಯೆಯು 127ರಷ್ಟು ಕಡಿಮೆಯಾಗಿದೆ. ಆದರೆ 2020ರಲ್ಲಿ 106 ಹುಲಿಗಳು ಸತ್ತರೆ, 2019 ರಲ್ಲಿ 96 ಹುಲಿಗಳು ಸಾವನ್ನಪ್ಪಿವೆ.
ಕಳೆದುಹೋದ 329 ಹುಲಿಗಳಲ್ಲಿ 68 ಹುಲಿಗಳು ನೈಸರ್ಗಿಕ ಕಾರಣಗಳಿಂದ, ಐದು ಅಸ್ವಾಭಾವಿಕ ಕಾರಣಗಳಿಂದ, 29 ಬೇಟೆಯಿಂದ ಮತ್ತು 30 ರೋಗಗ್ರಸ್ತವಾಗುವಿಕೆ ಕಾರಣವಾಗಿವೆ. ಇನ್ನೂ 197 ಹುಲಿಗಳ ಸಾವಿನ ಕಾರಣಗಳು ಪರಿಶೀಲನೆಯಲ್ಲಿವೆ ಎಂದು ಅವರು ಹೇಳಿದರು.
ಆದಾಗ್ಯೂ, ದತ್ತಾಂಶವು ವರ್ಷಗಳಲ್ಲಿ ಬೇಟೆಯಾಡುವ ಪ್ರಕರಣಗಳ ಸಂಖ್ಯೆಯು 2019 ರಲ್ಲಿ 17 ರಿಂದ 2021 ರಲ್ಲಿ ನಾಲ್ಕಕ್ಕೆ ಕಡಿಮೆಯಾಗಿದೆ ಎಂದು ತೋರಿಸಿದೆ. ಮಾನವರ ಮೇಲೆ ಹುಲಿ ದಾಳಿಯಿಂದ 125 ಮಂದಿ ಸಾವನ್ನಪ್ಪಿದ್ದಾರೆ. ಈ ಅವಧಿಯಲ್ಲಿ ಹುಲಿ ದಾಳಿಗೆ ಮಹಾರಾಷ್ಟ್ರದಲ್ಲಿ 61 ಮತ್ತು ಉತ್ತರ ಪ್ರದೇಶದಲ್ಲಿ 25 ಜನರು ಸಾವನ್ನಪ್ಪಿದ್ದಾರೆ ಎಂದು ಸಚಿವರು ತಿಳಿಸಿದರು.

ವಿದ್ಯುದಾಘಾತದಿಂದ 222 ಆನೆ ಸಾವು
ಸರ್ಕಾರವು ಕಳೆದ ಮೂರು ವರ್ಷಗಳಲ್ಲಿ ಆನೆಗಳ ಸಾವಿನ ಬಗ್ಗೆ ಮಾಹಿತಿ ನೀಡಿದೆ. ಇದು ಬೇಟೆಯಾಡುವುದು, ವಿದ್ಯುತ್ ಆಘಾತ, ವಿಷ ಮತ್ತು ರೈಲು ಅಪಘಾತಗಳು ಸೇರಿದಂತೆ ವಿವಿಧ ಕಾರಣಗಳಿಂದ ಒಟ್ಟು 307 ಆನೆಗಳು ಸಾವನ್ನಪ್ಪಿವೆ ಎಂದು ಹೇಳಿದೆ. ಕಳೆದ ಮೂರು ವರ್ಷಗಳಲ್ಲಿ ವಿದ್ಯುದಾಘಾತದಿಂದ 222 ಆನೆಗಳು ಸಾವನ್ನಪ್ಪಿವೆ ಎಂದು ಸರ್ಕಾರ ಹೇಳಿದೆ. ಒಡಿಶಾ, ತಮಿಳುನಾಡು ಮತ್ತು ಅಸ್ಸಾಂನಲ್ಲಿ ಕ್ರಮವಾಗಿ 41, 34 ಮತ್ತು 33 ಆನೆಗಳ ಇಂತಹ ಸಾವುಗಳು ವರದಿಯಾಗಿವೆ.

11 ಆನೆಗಳು ವಿಷಪ್ರಾಸನದಿಂದ ಸಾವು
ಹಾಗೇಯೆ ರೈಲು ಅಪಘಾತದಲ್ಲಿ 45 ಆನೆಗಳು ಸಾವನ್ನಪ್ಪಿವೆ. ಇದು ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಕ್ರಮವಾಗಿ 12 ಮತ್ತು 11 ಸಾವುಗಳು ಸಂಭವಿಸಿವೆ. ಮೇಘಾಲಯದಲ್ಲಿ 12 ಮತ್ತು ಒಡಿಶಾದಲ್ಲಿ 7 ಸೇರಿದಂತೆ 29 ಆನೆಗಳು ಬೇಟೆಯಿಂದ ಸಾವನ್ನಪ್ಪಿವೆ. ಇದೇ ಅವಧಿಯಲ್ಲಿ ಅಸ್ಸಾಂನಲ್ಲಿ ಒಂಬತ್ತು ಸೇರಿದಂತೆ 11 ಆನೆಗಳು ವಿಷಪ್ರಾಸನದಿಂದ ಸಾವನ್ನಪ್ಪಿವೆ.

ಕರ್ನಾಟಕದಲ್ಲಿ 524 ಹುಲಿಗಳು
2018ರ ಹುಲಿ ಗಣತಿ ಮಾಹಿತಿಯಂತೆ ಮಧ್ಯ ಪ್ರದೇಶದಲ್ಲಿ 526 ಹುಲಿಗಳಿದ್ದರೆ, ಕರ್ನಾಟಕದಲ್ಲಿ 524 ಹುಲಿಗಳಿದ್ದವು. ಈ ವೇಳೆ ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ ಜಾಸ್ತಿಯಾಗಿತ್ತು. ಆಗ ಮಧ್ಯಪ್ರದೇಶವನ್ನು ಹಿಂದಿಕ್ಕಿ ಮತ್ತೆ ನಂಬರ್ 1 ಸ್ಥಾನಕ್ಕೆ ಏರಲಿದೆ ಸಮೀಕ್ಷೆ ನಡೆಸಿದ್ದ ವಿಶ್ಚೇಷಕರು ತಿಳಿಸಿದ್ದರು. ಈ ಹಿಂದೆ ಅಂದರೆ 2010 ಹಾಗೂ 2014ರ ಗಣತಿಯಲ್ಲಿ ಕರ್ನಾಟಕವು ಹುಲಿಗಳ ಸಂಖ್ಯೆಯಲ್ಲಿ ದೇಶದಲ್ಲಿಯೇ ಅಗ್ರ ಸ್ಥಾನ ಗಳಿಸಿತ್ತು.

ಚಾಮರಾಜನಗರ ಜಿಲ್ಲೆಯಲ್ಲಿ ಅಧಿಕ
ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆಯು ಜಾಸ್ತಿಯಾಗುತ್ತಿದೆ ಎಂದು ಹುಲಿ ರಕ್ಷಣೆ ಹೋರಾಟಗಾರರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದರು. ಉತ್ತರ ಕನ್ನಡ ಜಿಲ್ಲೆಯ ಕಾಳಿ, ಮಲೆ ಮಹದೇಶ್ವರ ಬೆಟ್ಟ, ಚಾಮರಾಜನಗರ ಜಿಲ್ಲೆಗಳಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಲಿದೆ. ಬಂಡೀಪುರ ಅರಣ್ಯ ಪ್ರದೇಶ ಒಂದರಲ್ಲಿಯೇ ಹುಲಿಗಳ ಸಂಖ್ಯೆ 200 ದಾಟಲಿದೆ ಎಂದು ತಿಳಿಸಿದ್ದರು.












Click it and Unblock the Notifications