3 ಸಾವಿರ ಶ್ರಮಿಕ್ ರೈಲು ಸಂಚಾರ; ತವರಿಗೆ ಸೇರಿದ್ದು 40 ಲಕ್ಷ ಜನರು

ನವದೆಹಲಿ, ಮೇ 25 : ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆಯಾದ ತಕ್ಷಣ ಸಂಕಷ್ಟಕ್ಕೆ ಸಿಲುಕಿದ್ದು ವಲಸೆ ಕಾರ್ಮಿಕರು. ತವರು ರಾಜ್ಯಕ್ಕೆ ಮರಳಲು ಸಾಧ್ಯವಾಗದೇ, ಕೆಲಸ, ಊಟವಿಲ್ಲದೇ ಪರದಾಡಿದರು. ಕೊನೆಗೂ ಭಾರತೀಯ ರೈಲ್ವೆ ಕಾರ್ಮಿಕರ ಸಂಚಾರಕ್ಕಾಗಿ ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸಿತು.

ಭಾರತೀಯ ರೈಲ್ವೆ ನೀಡುವ ಮಾಹಿತಿಯಂತೆ ಸೋಮವಾರ ಬೆಳಗ್ಗೆ 10ಗಂಟೆ ತನಕ 3060 ಶ್ರಮಿಕ್ ರೈಲುಗಳು ವಿವಿಧ ರಾಜ್ಯಗಳಿಂದ ಸಂಚಾರ ನಡೆಸಿವೆ. 40 ಲಕ್ಷಕ್ಕೂ ಅಧಿಕ ಪ್ರಯಾಣಿಕರು ವಿವಿಧ ರಾಜ್ಯಗಳಿಂದ ತಮ್ಮ ತವರು ರಾಜ್ಯಕ್ಕೆ ರೈಲುಗಳಲ್ಲಿ ವಾಪಸ್ ಆಗಿದ್ದಾರೆ.

ಉತ್ತರ ಪ್ರದೇಶಕ್ಕೆ 1245, ಬಿಹಾರಕ್ಕೆ 846, ಜಾರ್ಖಂಡ್‌ಗೆ 123, ಮಧ್ಯಪ್ರದೇಶಕ್ಕೆ 112, ಒಡಿಶಾಕ್ಕೆ 73 ಶ್ರಮಿಕ್ ರೈಲುಗಳು ಸಂಚಾರ ನಡೆಸಿವೆ. ಬೇರೆ-ಬೇರೆ ರಾಜ್ಯಗಳಿಂದ ಈ ಐದು ರಾಜ್ಯಗಳಿಗೆ ಹೆಚ್ಚಿನ ವಲಸೆ ಕಾರ್ಮಿಕರು ವಾಪಸ್ ಆಗಿದ್ದಾರೆ.

3060 Shramik Special Trains Run Till May 25

31ರ ತನಕ ರೈಲು: ಕರ್ನಾಟಕದಿಂದ ಮೇ 31ರ ತನಕ ಪ್ರತಿ ದಿನ 10 ರೈಲುಗಳು ಹೊರ ರಾಜ್ಯಕ್ಕೆ ಸಂಚಾರ ನಡೆಸಲಿವೆ. "ವಲಸೆ ಕಾರ್ಮಿಕರು ತಮ್ಮ ರಾಜ್ಯಕ್ಕೆ ಉಚಿತವಾಗಿ ಪ್ರಯಾಣ ಬೆಳೆಸಬಹುದು" ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಭಾನುವಾರ ಒಂದೇ ದಿನ ಬೆಂಗಳೂರು ನಗರದಿಂದ 9 ಶ್ರಮಿಕ್ ವಿಶೇಷ ರೈಲುಗಳು ಸಂಚಾರ ನಡೆಸಿದ್ದು, 13 ಸಾವಿರ ವಲಸೆ ಕಾರ್ಮಿಕರು ತವರಿಗೆ ಮರಳಿದರು.

ಶ್ರಮಿಕ್ ರೈಲಿನ ದರದ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಒಂದು ರೈಲು ಓಡಿಸಲು ತಗಲುವ ಖರ್ಚಿನಲ್ಲಿ ಶೇ 85ರಷ್ಟನ್ನು ಕೇಂದ್ರ ಸರ್ಕಾರ ನೀಡುತ್ತದೆ. ಉಳಿದ ಹಣವನ್ನು ರಾಜ್ಯ ಸರ್ಕಾರ ಭರಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+